ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ, ಜಾಗರೂಕರಾಗಿರಿ, ಮಾಸ್ಕ್ ಧರಿಸಿ : ಪ್ರಧಾನಿ ಮೋದಿ
ಅನೇಕ ದೇಶಗಳಲ್ಲಿ ವೈರಸ್ ಹರಡುತ್ತಿರುವುದನ್ನು ಗಮನಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಾಗರೀಕರಿಗೆ ಜಾಗರೂಕರಾಗಿರುವಂತೆ ಮತ್ತು COVID-19 ವಿರುದ್ಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ.
ಈ ವರ್ಷದ ಕೊನೆಯ ‘ಮನ್ ಕಿ ಬಾತ್’ ಪ್ರಸಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಅನೇಕ ಜನರು ರಜೆಯಲ್ಲಿದ್ದಾರೆ ಅಥವಾ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ಹೊರಗೆ ಹೋಗುತ್ತಾರೆ. ನಿಮ್ಮ ಸಂತೋಷವನ್ನ ಖಚಿತಪಡಸಿಕೊಳ್ಳಲು ಮಾಸ್ಕ ಧರಿಸುವುದು ಮತ್ತು ಕೈ ತೊಳೆಯುವುದು ಮುಂತಾದ ಪ್ರೋಟೋಕಾಲ್ಗಳನ್ನು ಅನುಸರಿಸಲು ಅವರನ್ನು ಒತ್ತಾಯಿಸಿದರು.
ಕೇಂದ್ರ ಸರ್ಕಾರ ವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನ ಹೆಚ್ಚಿಸಿದೆ. ವಿದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ, ವಿಶೇಷವಾಗಿ ಚೀನಾದಲ್ಲಿ ಶೂನ್ಯ-ಕೋವಿಡ್ ನೀತಿಯನ್ನು ತೆಗೆದುಹಾಕಿರುವುದರಿಂದ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಪ್ರಧಾನಿಗಳು 2022, ಭಾರತಕ್ಕೆ ಹಲವು ವಿಧಗಳಲ್ಲಿ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು. 220 ಕೋಟಿಗೂ ಹೆಚ್ಚು ವ್ಯಾಕ್ಸಿನೇಷನ್ ಡೋಸ್ಗಳ ಮೂಲಕ ಭಾರತವು ವಿಶ್ವದಲ್ಲೇ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ದೇಶವು ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದರು.
ದೇಶವು USD 400 ಶತಕೋಟಿ (ಒಂದು ಬಿಲಿಯನ್=100 ಕೋಟಿ) “ಮಾಂತ್ರಿಕ” ರಫ್ತು ಅಂಕಿಅಂಶವನ್ನು ಸಾಧಿಸಿದೆ ಮತ್ತು ಬಾಹ್ಯಾಕಾಶ, ರಕ್ಷಣೆ ಮತ್ತು ಡ್ರೋನ್ ಕ್ಷೇತ್ರಗಳಲ್ಲಿ ಹೊಸ ದಾಪುಗಾಲುಗಳನ್ನು ಮಾಡಿದೆ ಎಂದು ತಿಳಿಸಿದರು.
Covid cases rising in many countries, be vigilant, wear mask: PM Modi