ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕುರುಕ್ಷೇತ್ರ ಯುದ್ದದಲ್ಲಿ ಮೊಳಗಿದ ಶಂಖ ನಾದಗಳ  ಮಹಿಮೆ ಏನು ಗೊತ್ತಾ  ?

saaksha tv by saaksha tv
June 13, 2020
in Newsbeat, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಸಂಪ್ರದಾಯಗಳಿಗೆ ಅರ್ಥವಿದೆ. ಹಿಂದೂ ಸಂಸ್ಕೃತಿಯಲ್ಲಿ ಶಂಖಕ್ಕೆ ವಿಶೇಷ ಮನ್ನಣೆಯಿದೆ. ಹಿಂದೂ ಧರ್ಮದಲ್ಲಿ ಶಂಖ ಎಂದರೆ ವಿಷ್ಣುವಿನ ಲಾಂಛನ ಎಂದು ಗುರುತಿಸಲಾಗಿದೆ. ಶಂಖದಿಂದ ಹೊರ ಸೂಸುವ ಕಂಪನಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ.

ಶಂಖನಾದದಿಂದ ಋಣಾತ್ಮಕ ಶಕ್ತಿ ನಾಶವಾಗುವ ಕಾರಣಕ್ಕೆ ಶವಯಾತ್ರೆ ಮಾಡುವ ಸಮಯದಲ್ಲಿ ಊದಲಾಗುತ್ತದೆ. ದೇವಸ್ಥಾನಗಳಲ್ಲಿ ಶಂಖ ಊದುವ ಪರಿಪಾಠ  ಇಂದಿಗೂ ಇದೆ. ಇದರಿಂದಾಗಿ  ಧನಾತ್ಮಕ ವಾತವರಣ ಸೃಷ್ಟಿಯಾಗುತ್ತದೆ.

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

ಪುರಾತನ ಕಾಲದಲ್ಲಿ ಚಕ್ರವರ್ತಿಗಳ, ಋಷಿಗಳ , ಆಗಮನಕ್ಕೆ ಶಂಖನಾದ ಊದಲಾಗುತ್ತಿತ್ತು. ಅಷ್ಟೇ ಯಾಕೆ ಮಹಾಭಾರತ ಕಾಲದಲ್ಲಿ ಕುರುಕ್ಷೇತ್ರ ಯುದ್ದ ಪ್ರಾರಂಭಕ್ಕೂ ಮುನ್ನ ಶಂಖ ಊದಲಾಗಿತ್ತು.  ಕುರುಕ್ಷೇತ್ರ ಯುದ್ದ ಪ್ರಾರಂಭಿಸುವ ಸಂಕೇತವಾಗಿ ಶಂಖವನ್ನು ಊದಲಾಗಿತ್ತು. ಯುದ್ದದ ಅವಧಿಯಲ್ಲಿ ಎದುರಾಳಿಗೆ ನಾವು ಯುದ್ದಕ್ಕೆ ಸಿದ್ದ ಎಂಬ ಸಂದೇಶ ನೀಡಲು ಶಂಖ ಊದಲಾಗುತ್ತಿತ್ತು.  ಆದರೆ ಕುರುಕ್ಷೇತ್ರದಲ್ಲಿ ಊದಿದ ಶಂಖಗಳ ಹೆಸರು ಎಷ್ಟೋ ಜನಕ್ಕೆ ಗೊತ್ತೆ ಇಲ್ಲ. ಯಾಕೆಂದರೆ ಸಾಮಾನ್ಯವಾಗಿ ಶಂಖಗಳ ಬಗ್ಗೆ ತಿಳಿದಿರುತ್ತೇವೆ. ಆದರೆ ಶಂಖಕ್ಕಿರುವ ಹೆಸರುಗಳು ತಿಳಿದಿರುವುದಿಲ್ಲ.

ಅಲ್ಲದೆ ಕುರುಕ್ಷೇತ್ರದಲ್ಲಿ ಊದಿದ ಶಂಖಗಳ ಹೆಸರುಗಳು ಬಿಟ್ಟರೇ ಬೇರೆ ಯಾವುದೇ ಶಂಖಗಳ ಹೆಸರು ಎಲ್ಲಿಯೂ ಉಲ್ಲೇಂಖವಿಲ್ಲ. ಹಾಗಾದರೆ ಕುರುಕ್ಷೇತ್ರ ಯುದ್ದದ  ಅವಧಿಯಲ್ಲಿ ಊದಿದ ಶಂಖಗಳ ಹೆಸರೇನು ? ಯಾವ ಕಾರಣಕ್ಕೆ ಶಂಖ ಊದಿದರು ? ಆ ಶಂಖಗಳ ಮಹತ್ವವೇನು ಎಂಬ ಮಾಹಿತಿ ಇಲ್ಲಿದೆ .

ಕುರುಕ್ಷೇತ್ರದ ಯುದ್ದ ಪ್ರಾರಂಭದಲ್ಲಿ ಮಹತ್ವವಾದ ಶಂಖನಾದ

ಕುರುಕ್ಷೇತ್ರ ಯುದ್ದ ಪ್ರಾರಂಭದ ತುದಿಯಲ್ಲಿ ಕೌರವರು, ಪಾಂಡವರು ಎದರುರಾಗಿದ್ದರು. ದುರ್ಯೋಧನ ಸೇನಾಧಿಪತಿಯಾಗಿ ಮಹಾ ಮಹಿಮಾ ಭೀಷ್ಮರು ಇರುತ್ತಾರೆ. ಪಾಂಡವರ ಪರವಾಗಿ ಹಾಗೂ ಅರ್ಜುನ ಸಾರಥಿಯಾಗಿ ಶ್ರೀಕೃಷ್ಣ ಇರುತ್ತಾರೆ.  ಕೌರವರ ಪರವಾಗಿ ಭೀಷ್ಮರು ಶಂಖ ಓದಿದರು. ಇದರ ಬೆನ್ನೆಲೆ ಕೌರವ ಸೇನೆ ಶಂಖನಾದ ಮಾಡಿತ್ತು.

ಅತ್ತ ಪಾಂಡವರ ಪರ ನಿಂತ  ಅರ್ಜುನನ ಸಾರಥಿಯಾಗಿದ್ದ ಶ್ರೀ ಕೃಷ್ಣ ಶಂಖನಾದ ಮಾಡಿದ. ಶ್ರೀಕೃಷ್ಣನ ಪಾಂಚಜನ್ಯ ಎಂಬ ಶಂಖ  ಊದಿದ, ಈ ‘ಪಾಂಚಜನ್ಯ’ ಶಂಖದ ಹಿಂದೆ ಒಂದು ಕಥೆಯಿದೆ. ಶ್ರೀಕೃಷ್ಣ ಸಾಂದೀಪನಿ ಮುನಿಯ ಆಶ್ರಮದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದ. ವಿದ್ಯಾಭ್ಯಾಸ ಮುಗಿದ ಬಳಿಕ ಗುರುದಕ್ಷಣೆ ನೀಡುವ ಪರಿಪಾಠವಿತ್ತು.  ಇಲ್ಲಿ ಕೃಷ್ಣ ತನ್ನ ಗುರುವಿಗೆ ಕೊಟ್ಟ ಗುರುದಕ್ಷಿಣೆ ಬಹಳ ವಿಶಿಷ್ಟವಾಗಿದೆ.

‘ಪಾಂಚಜನ’ ಎನ್ನುವ ಅಸುರ ಸಾಂದೀಪನಿ ಮುನಿಯ ಪುತ್ರನನ್ನು ಕೊಂದು ಹಾಕಿದ್ದನು . ಕೃಷ್ಣ  ವಿದ್ಯಾಭ್ಯಾಸ ಮುಗಿಸಿ ಮರುಳುವಾಗ ಗುರುಗಳಿಗೆ ಗುರುದಕ್ಷಿಣೆಯಾಗಿ ಅವರ ಪುತ್ರನನ್ನೇ ನೀಡಿದ್ದರು. ಪಾಂಚಜನ ಎನ್ನುವ ರಾಕ್ಷಸನಿದ್ದ ಶಂಖವೇ ಪಾಂಚಜನ್ಯವಾಯಿತು. ಪಾಂಚಜನ್ಯ-ಅಸುರ ಸಂಹಾರಕ ಹಾಗೂ ಜ್ಞಾನಾನಂದದ ಸಂಕೇತವಾಗಿ ಈ ಶಂಖ ಇತಿಹಾಸ ಬರೆಯಿತು.

ಪಾಂಡವರು ಊದಿದ ಶಂಖನಾದದಲ್ಲಿದೆ  ಬದುಕಿನ ಸಂದೇಶ

 

ಶ್ರೀಕೃಷ್ಣ ಶಂಖ ಊದಿದ ಬಳಿಕ ಪಾಂಡು ಪುತ್ರರು ಒಬ್ಬೊಬ್ಬರೇ ಕ್ರಮವಾಗಿ ಶಂಖ ಊದಿದ್ದರು. ಧರ್ಮರಾಜ, ಭೀಮ, ಅರ್ಜುನ , ನಕುಲ, ಸಹದೇವ ಎಲ್ಲರೂ ಒಂದೊಂದು ಶಂಖ ಊದಿ ಯುದ್ದಕ್ಕೆ ಸಿದ್ದರಾದರು. ಆದರೆ ಊದಿದ ಒಂದೊಂದು ಶಂಖದಲ್ಲಿ ಒಂದೊಂದು ಅರ್ಥವಿದೆ ಎಂಬುದು ಮಹಾಭಾರತ ತಿಳಿಸುತ್ತದೆ. ಅದಕ್ಕೆ ಕಾರಣಕ್ಕೆ ಈ ಶಂಖಗಳ ಹೆಸರುಗಳ ಮಾತ್ರ ಉಲ್ಲೇಖವಾಗಿವೆ.

ಅರ್ಜುನ ದೇವದತ್ತ’ ಎಂಬ  ಶಂಖವನ್ನು ಊದಿದನು. ವಾನಪ್ರಸ್ಥ ಕಾಲದಲ್ಲಿ ಅಸುರರ ವಿರುದ್ಧ ಹೋರಾಡಿದ್ದಕ್ಕಾಗಿ ಅರ್ಜುನನಿಗೆ ಇಂದ್ರ ದೇವಲೋಕದಲ್ಲಿ ವಿಶಿಷ್ಟವಾದ ಕಿರೀಟವನ್ನು ತೊಡಿಸಿ ಈ ಶಂಖವನ್ನು ಉಡುಗೊರೆಯಾಗಿ ನೀಡಲಾಗಿತ್ತು.  ಈ ಶಂಖವೂ ಕೂಡಾ ದುಷ್ಟನಿಗ್ರಹದ ಸಂಕೇತವಾಗಿದೆ. ಅಲ್ಲದೆ ಗುರು ಭಕ್ತಿ  ಇಲ್ಲಿ ಬಿಂಬಿತವಾಗಿದೆ.

ಭೀಮ ಪೌಂಡ್ರ ಎಂಬ ಮಹಾಶಂಖವನ್ನು ಊದಿದನು. ಭೀಮನನ್ನು ವೃಕೋದರ ಎಂದು ಕರೆಯಲಾಗುತ್ತಿತ್ತು.. ವೃಕೋದರ ಎಂದರೆ ಇಡೀ ವಿಶ್ವವನ್ನು ಸುಡಬಲ್ಲ, ಅಗ್ನಿಯನ್ನು ಉದರದಲ್ಲಿ ಧರಿಸಿದವನು ಎಂದರ್ಥ. ಭೀಮ ಎಂತಹ ಪರಾಕ್ರಮಶಾಲಿ ಎಂಬುದನ್ನು ಶಂಖನಾದದಲ್ಲಿ ತಿಳಿದು ಬರುತ್ತದೆ. ಅಲ್ಲದೆ ಈ ಶಂಖದ ಮೂಲಕ ಇಂದ್ರಿಯಗಳನ್ನು ಹಿಡಿತದಲ್ಲಿ ಇಡಬೇಕಾದ ಬಗೆ ತಿಳಿಸುತ್ತದೆ, ಜೊತೆ ಬಲಶಾಲಿ ಭೀಮ ತನ್ನ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಿದವು ಎಂದು ಹೇಳಲಾಗಿದೆ.

ಧರ್ಮರಾಜ ಭೀಮನ ನಂತರ ‘ಅನಂತವಿಜಯ’ ಎಂಬ ಶಂಖವನ್ನು ಊದಿದನು. ಈ ಶಂಖ ಧರ್ಮ ಮತ್ತು ವಿಜಯದ ಸಂಕೇತವಾಗಿತ್ತು. ಅಂದರೆ ಯಾರು ಧರ್ಮದಿಂದ ನಡೆಯುತ್ತಾರೋ ಅವರಿಗೆ ವಿಜಯ ದೊರೆಯುತ್ತದೆ ಎಂಬ ಸಂದೇಶ ಈ ಶಂಖದ ಮೂಲಕ ರವಾನೆಯಾಗಿದೆ.

ನಕುಲ ಮತ್ತು ಸಹದೇವರು ಸುಘೋಷ ಮತ್ತು ಮಣಿಪುಷ್ಪವೆಂಬ ಶಂಖವನ್ನು ಕ್ರಮಬದ್ಧವಾಗಿ ಊದಿದರು. ಇದರಲ್ಲಿ ಧರ್ಮದಿಂದ ಕಲಿಯುವ ಶಿಸ್ತು ಅನ್ನು ಪ್ರತಿಪಾಧಿಸಲಾಗಿದೆ.

ಹೀಗೆ ಪಾಂಡವರು ಮೊಳಗಿಸಿದ ಒಂದೊಂದು ಶಂಖಗಳು ನಿಜ ಜೀವನದ ಪ್ರತಿಪಾಧಿಯಾಗಿವೆ. ಅಲ್ಲದೆ ಒಬ್ಬ ವ್ಯಕ್ತಿ ಯಾವ ಗುಣಗಳನ್ನು ಅಳವಡಿಸಿಕೊಂಡರೆ ಉತ್ತಮನಾಗ ಬಲ್ಲ ಎಂಬ ಸಂದೇಶ ಈ ಶಂಖಗಳಲ್ಲಿ ಅಡಗಿದೆ.

ಧರ್ಮರಾಜ ಶಂಖದಿಂದ ಪ್ರಾಮಾಣಿಕ ಧರ್ಮ, ಅರ್ಜುನನ ಶಂಖದಿಂದ ಭಕ್ತಿ ಹಾಗೂ ಗುರು ನಮನ, ಭೀಮನ ಶಂಖನಾದದಿಂದ ಇಂದ್ರಿಯಗಳ ಹಿಡಿತ, ನಕುಲ ಸಹದೇವರ ಶಂಖನಾದದಿಂದ ಶಿಸ್ತು ಮತ್ತು ಮಿಡಿಯುವ ಸಂದೇಶ ರವಾನೆಯಾಗಿದೆ.

                                                                                                                  ಹನುಮಂತ ದುರ್ಗದ

Tags: Conch
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram