ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಸಂಪ್ರದಾಯಗಳಿಗೆ ಅರ್ಥವಿದೆ. ಹಿಂದೂ ಸಂಸ್ಕೃತಿಯಲ್ಲಿ ಶಂಖಕ್ಕೆ ವಿಶೇಷ ಮನ್ನಣೆಯಿದೆ. ಹಿಂದೂ ಧರ್ಮದಲ್ಲಿ ಶಂಖ ಎಂದರೆ ವಿಷ್ಣುವಿನ ಲಾಂಛನ ಎಂದು ಗುರುತಿಸಲಾಗಿದೆ. ಶಂಖದಿಂದ ಹೊರ ಸೂಸುವ ಕಂಪನಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ.
ಶಂಖನಾದದಿಂದ ಋಣಾತ್ಮಕ ಶಕ್ತಿ ನಾಶವಾಗುವ ಕಾರಣಕ್ಕೆ ಶವಯಾತ್ರೆ ಮಾಡುವ ಸಮಯದಲ್ಲಿ ಊದಲಾಗುತ್ತದೆ. ದೇವಸ್ಥಾನಗಳಲ್ಲಿ ಶಂಖ ಊದುವ ಪರಿಪಾಠ ಇಂದಿಗೂ ಇದೆ. ಇದರಿಂದಾಗಿ ಧನಾತ್ಮಕ ವಾತವರಣ ಸೃಷ್ಟಿಯಾಗುತ್ತದೆ.
ಪುರಾತನ ಕಾಲದಲ್ಲಿ ಚಕ್ರವರ್ತಿಗಳ, ಋಷಿಗಳ , ಆಗಮನಕ್ಕೆ ಶಂಖನಾದ ಊದಲಾಗುತ್ತಿತ್ತು. ಅಷ್ಟೇ ಯಾಕೆ ಮಹಾಭಾರತ ಕಾಲದಲ್ಲಿ ಕುರುಕ್ಷೇತ್ರ ಯುದ್ದ ಪ್ರಾರಂಭಕ್ಕೂ ಮುನ್ನ ಶಂಖ ಊದಲಾಗಿತ್ತು. ಕುರುಕ್ಷೇತ್ರ ಯುದ್ದ ಪ್ರಾರಂಭಿಸುವ ಸಂಕೇತವಾಗಿ ಶಂಖವನ್ನು ಊದಲಾಗಿತ್ತು. ಯುದ್ದದ ಅವಧಿಯಲ್ಲಿ ಎದುರಾಳಿಗೆ ನಾವು ಯುದ್ದಕ್ಕೆ ಸಿದ್ದ ಎಂಬ ಸಂದೇಶ ನೀಡಲು ಶಂಖ ಊದಲಾಗುತ್ತಿತ್ತು. ಆದರೆ ಕುರುಕ್ಷೇತ್ರದಲ್ಲಿ ಊದಿದ ಶಂಖಗಳ ಹೆಸರು ಎಷ್ಟೋ ಜನಕ್ಕೆ ಗೊತ್ತೆ ಇಲ್ಲ. ಯಾಕೆಂದರೆ ಸಾಮಾನ್ಯವಾಗಿ ಶಂಖಗಳ ಬಗ್ಗೆ ತಿಳಿದಿರುತ್ತೇವೆ. ಆದರೆ ಶಂಖಕ್ಕಿರುವ ಹೆಸರುಗಳು ತಿಳಿದಿರುವುದಿಲ್ಲ.
ಅಲ್ಲದೆ ಕುರುಕ್ಷೇತ್ರದಲ್ಲಿ ಊದಿದ ಶಂಖಗಳ ಹೆಸರುಗಳು ಬಿಟ್ಟರೇ ಬೇರೆ ಯಾವುದೇ ಶಂಖಗಳ ಹೆಸರು ಎಲ್ಲಿಯೂ ಉಲ್ಲೇಂಖವಿಲ್ಲ. ಹಾಗಾದರೆ ಕುರುಕ್ಷೇತ್ರ ಯುದ್ದದ ಅವಧಿಯಲ್ಲಿ ಊದಿದ ಶಂಖಗಳ ಹೆಸರೇನು ? ಯಾವ ಕಾರಣಕ್ಕೆ ಶಂಖ ಊದಿದರು ? ಆ ಶಂಖಗಳ ಮಹತ್ವವೇನು ಎಂಬ ಮಾಹಿತಿ ಇಲ್ಲಿದೆ .
ಕುರುಕ್ಷೇತ್ರದ ಯುದ್ದ ಪ್ರಾರಂಭದಲ್ಲಿ ಮಹತ್ವವಾದ ಶಂಖನಾದ
ಕುರುಕ್ಷೇತ್ರ ಯುದ್ದ ಪ್ರಾರಂಭದ ತುದಿಯಲ್ಲಿ ಕೌರವರು, ಪಾಂಡವರು ಎದರುರಾಗಿದ್ದರು. ದುರ್ಯೋಧನ ಸೇನಾಧಿಪತಿಯಾಗಿ ಮಹಾ ಮಹಿಮಾ ಭೀಷ್ಮರು ಇರುತ್ತಾರೆ. ಪಾಂಡವರ ಪರವಾಗಿ ಹಾಗೂ ಅರ್ಜುನ ಸಾರಥಿಯಾಗಿ ಶ್ರೀಕೃಷ್ಣ ಇರುತ್ತಾರೆ. ಕೌರವರ ಪರವಾಗಿ ಭೀಷ್ಮರು ಶಂಖ ಓದಿದರು. ಇದರ ಬೆನ್ನೆಲೆ ಕೌರವ ಸೇನೆ ಶಂಖನಾದ ಮಾಡಿತ್ತು.
ಅತ್ತ ಪಾಂಡವರ ಪರ ನಿಂತ ಅರ್ಜುನನ ಸಾರಥಿಯಾಗಿದ್ದ ಶ್ರೀ ಕೃಷ್ಣ ಶಂಖನಾದ ಮಾಡಿದ. ಶ್ರೀಕೃಷ್ಣನ ಪಾಂಚಜನ್ಯ ಎಂಬ ಶಂಖ ಊದಿದ, ಈ ‘ಪಾಂಚಜನ್ಯ’ ಶಂಖದ ಹಿಂದೆ ಒಂದು ಕಥೆಯಿದೆ. ಶ್ರೀಕೃಷ್ಣ ಸಾಂದೀಪನಿ ಮುನಿಯ ಆಶ್ರಮದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದ. ವಿದ್ಯಾಭ್ಯಾಸ ಮುಗಿದ ಬಳಿಕ ಗುರುದಕ್ಷಣೆ ನೀಡುವ ಪರಿಪಾಠವಿತ್ತು. ಇಲ್ಲಿ ಕೃಷ್ಣ ತನ್ನ ಗುರುವಿಗೆ ಕೊಟ್ಟ ಗುರುದಕ್ಷಿಣೆ ಬಹಳ ವಿಶಿಷ್ಟವಾಗಿದೆ.
‘ಪಾಂಚಜನ’ ಎನ್ನುವ ಅಸುರ ಸಾಂದೀಪನಿ ಮುನಿಯ ಪುತ್ರನನ್ನು ಕೊಂದು ಹಾಕಿದ್ದನು . ಕೃಷ್ಣ ವಿದ್ಯಾಭ್ಯಾಸ ಮುಗಿಸಿ ಮರುಳುವಾಗ ಗುರುಗಳಿಗೆ ಗುರುದಕ್ಷಿಣೆಯಾಗಿ ಅವರ ಪುತ್ರನನ್ನೇ ನೀಡಿದ್ದರು. ಪಾಂಚಜನ ಎನ್ನುವ ರಾಕ್ಷಸನಿದ್ದ ಶಂಖವೇ ಪಾಂಚಜನ್ಯವಾಯಿತು. ಪಾಂಚಜನ್ಯ-ಅಸುರ ಸಂಹಾರಕ ಹಾಗೂ ಜ್ಞಾನಾನಂದದ ಸಂಕೇತವಾಗಿ ಈ ಶಂಖ ಇತಿಹಾಸ ಬರೆಯಿತು.
ಪಾಂಡವರು ಊದಿದ ಶಂಖನಾದದಲ್ಲಿದೆ ಬದುಕಿನ ಸಂದೇಶ
ಶ್ರೀಕೃಷ್ಣ ಶಂಖ ಊದಿದ ಬಳಿಕ ಪಾಂಡು ಪುತ್ರರು ಒಬ್ಬೊಬ್ಬರೇ ಕ್ರಮವಾಗಿ ಶಂಖ ಊದಿದ್ದರು. ಧರ್ಮರಾಜ, ಭೀಮ, ಅರ್ಜುನ , ನಕುಲ, ಸಹದೇವ ಎಲ್ಲರೂ ಒಂದೊಂದು ಶಂಖ ಊದಿ ಯುದ್ದಕ್ಕೆ ಸಿದ್ದರಾದರು. ಆದರೆ ಊದಿದ ಒಂದೊಂದು ಶಂಖದಲ್ಲಿ ಒಂದೊಂದು ಅರ್ಥವಿದೆ ಎಂಬುದು ಮಹಾಭಾರತ ತಿಳಿಸುತ್ತದೆ. ಅದಕ್ಕೆ ಕಾರಣಕ್ಕೆ ಈ ಶಂಖಗಳ ಹೆಸರುಗಳ ಮಾತ್ರ ಉಲ್ಲೇಖವಾಗಿವೆ.
ಅರ್ಜುನ ದೇವದತ್ತ’ ಎಂಬ ಶಂಖವನ್ನು ಊದಿದನು. ವಾನಪ್ರಸ್ಥ ಕಾಲದಲ್ಲಿ ಅಸುರರ ವಿರುದ್ಧ ಹೋರಾಡಿದ್ದಕ್ಕಾಗಿ ಅರ್ಜುನನಿಗೆ ಇಂದ್ರ ದೇವಲೋಕದಲ್ಲಿ ವಿಶಿಷ್ಟವಾದ ಕಿರೀಟವನ್ನು ತೊಡಿಸಿ ಈ ಶಂಖವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈ ಶಂಖವೂ ಕೂಡಾ ದುಷ್ಟನಿಗ್ರಹದ ಸಂಕೇತವಾಗಿದೆ. ಅಲ್ಲದೆ ಗುರು ಭಕ್ತಿ ಇಲ್ಲಿ ಬಿಂಬಿತವಾಗಿದೆ.
ಭೀಮ ಪೌಂಡ್ರ ಎಂಬ ಮಹಾಶಂಖವನ್ನು ಊದಿದನು. ಭೀಮನನ್ನು ವೃಕೋದರ ಎಂದು ಕರೆಯಲಾಗುತ್ತಿತ್ತು.. ವೃಕೋದರ ಎಂದರೆ ಇಡೀ ವಿಶ್ವವನ್ನು ಸುಡಬಲ್ಲ, ಅಗ್ನಿಯನ್ನು ಉದರದಲ್ಲಿ ಧರಿಸಿದವನು ಎಂದರ್ಥ. ಭೀಮ ಎಂತಹ ಪರಾಕ್ರಮಶಾಲಿ ಎಂಬುದನ್ನು ಶಂಖನಾದದಲ್ಲಿ ತಿಳಿದು ಬರುತ್ತದೆ. ಅಲ್ಲದೆ ಈ ಶಂಖದ ಮೂಲಕ ಇಂದ್ರಿಯಗಳನ್ನು ಹಿಡಿತದಲ್ಲಿ ಇಡಬೇಕಾದ ಬಗೆ ತಿಳಿಸುತ್ತದೆ, ಜೊತೆ ಬಲಶಾಲಿ ಭೀಮ ತನ್ನ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಿದವು ಎಂದು ಹೇಳಲಾಗಿದೆ.
ಧರ್ಮರಾಜ ಭೀಮನ ನಂತರ ‘ಅನಂತವಿಜಯ’ ಎಂಬ ಶಂಖವನ್ನು ಊದಿದನು. ಈ ಶಂಖ ಧರ್ಮ ಮತ್ತು ವಿಜಯದ ಸಂಕೇತವಾಗಿತ್ತು. ಅಂದರೆ ಯಾರು ಧರ್ಮದಿಂದ ನಡೆಯುತ್ತಾರೋ ಅವರಿಗೆ ವಿಜಯ ದೊರೆಯುತ್ತದೆ ಎಂಬ ಸಂದೇಶ ಈ ಶಂಖದ ಮೂಲಕ ರವಾನೆಯಾಗಿದೆ.
ನಕುಲ ಮತ್ತು ಸಹದೇವರು ಸುಘೋಷ ಮತ್ತು ಮಣಿಪುಷ್ಪವೆಂಬ ಶಂಖವನ್ನು ಕ್ರಮಬದ್ಧವಾಗಿ ಊದಿದರು. ಇದರಲ್ಲಿ ಧರ್ಮದಿಂದ ಕಲಿಯುವ ಶಿಸ್ತು ಅನ್ನು ಪ್ರತಿಪಾಧಿಸಲಾಗಿದೆ.
ಹೀಗೆ ಪಾಂಡವರು ಮೊಳಗಿಸಿದ ಒಂದೊಂದು ಶಂಖಗಳು ನಿಜ ಜೀವನದ ಪ್ರತಿಪಾಧಿಯಾಗಿವೆ. ಅಲ್ಲದೆ ಒಬ್ಬ ವ್ಯಕ್ತಿ ಯಾವ ಗುಣಗಳನ್ನು ಅಳವಡಿಸಿಕೊಂಡರೆ ಉತ್ತಮನಾಗ ಬಲ್ಲ ಎಂಬ ಸಂದೇಶ ಈ ಶಂಖಗಳಲ್ಲಿ ಅಡಗಿದೆ.
ಧರ್ಮರಾಜ ಶಂಖದಿಂದ ಪ್ರಾಮಾಣಿಕ ಧರ್ಮ, ಅರ್ಜುನನ ಶಂಖದಿಂದ ಭಕ್ತಿ ಹಾಗೂ ಗುರು ನಮನ, ಭೀಮನ ಶಂಖನಾದದಿಂದ ಇಂದ್ರಿಯಗಳ ಹಿಡಿತ, ನಕುಲ ಸಹದೇವರ ಶಂಖನಾದದಿಂದ ಶಿಸ್ತು ಮತ್ತು ಮಿಡಿಯುವ ಸಂದೇಶ ರವಾನೆಯಾಗಿದೆ.
ಹನುಮಂತ ದುರ್ಗದ








