Siddeshwara Swamiji : ಸಿದ್ದೇಶ್ವರ ಶ್ರೀಗಳು ಅಸ್ತಂಗತ : ಸ್ಯಾಂಡಲ್ ವುಡ್ ಅಶ್ರುತರ್ಪಣೆ..
ಇಂದು ನಡೆದಾಡುವ ದೇವರು , ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಸಿದ್ದೇಶ್ವರ ಸ್ವಾಮಿಗಳು ಲಿಂಗೈಕ್ಯರಾಗಿದ್ದು , ಗಣ್ಯರು , ರಾಜಕಾರಣಿಗಳು , ಸಿನಿಮಾರಂಗದವರು ಕಂಬನಿ ಮಿಡಿದಿದ್ದಾರೆ..
ರಿಷಬ್ ಶೆಟ್ಟಿ ಕೂಡ ಅಗಲಿದ ಸ್ವಾಮೀಜಿಗಳನ್ನು ನೆನಪಿಸಿಕೊಂಡಿದ್ದು, ‘ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಿಮ್ಮ ಅಗಲಿಕೆ ಸಹಿಸಲಸಾಧ್ಯ. ನಮಗಾಗಿ ಇನ್ನಷ್ಟು ವರ್ಷ ಬದುಕಬೇಕಿತ್ತು ನೀವು. ನಿಮ್ಮ ಬದುಕೇ ನಮಗೊಂದು ಆದರ್ಶ. ಹೋಗ್ಬನ್ನಿ ಗುರುವರ್ಯರೆ ಎಂದು ಬರೆದುಕೊಂಡಿದ್ದಾರೆ.
ನಟ ಧನಂಜಯ್ ಅವರು ಟ್ವೀಟ್ ಮಾಡಿದ್ದು , ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ ಎಂದು ಬರೆದಿದ್ದಾರೆ.
ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಟ್ವೀಟ್ ಮಾಡಿ , ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ಉಳಿದಿರುವ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಅಪಾರ ನೋವು ತಂದಿದೆ. ನಿಮ್ಮ ಸಾಮಾಜಿಕ ಸೇವೆ ಯಾವಾಗಲೂ ಹೃದಯದಲ್ಲಿ ಇರತ್ತೆ. ನಿಮಗೆ ಅನಂತ ನೋವಿನ ಅಶ್ರುತರ್ಪಣೆ ಎಂದು ಟ್ವಿಟ್ ಮಾಡಿದ್ದಾರೆ.








