Mysore Gas Blast : ಮೈಸೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ
6 ಕ್ಕೂ ಹೆಚ್ಚು ಮಂದಿಗೆ ಗಾಯ
ಓರ್ವನ ಸ್ಥಿತಿ ಗಂಭೀರ , ಆಸ್ಪತ್ರೆಗೆ ದಾಖಲು
ಗಾಯಾಳುಗಳ ಪೈಕಿ ಇಬ್ಬರು ಪುಟ್ಟ ಮಕ್ಕಳು
ವಸತಿಗೃಹದ ಮನೆಯೊಂದರಲ್ಲಿ ಘಟನೆ
ಮೈಸೂರು: ವಸತಿ ಗೃಹ ಮನೆಯಲ್ಲಿ ಗ್ಯಾಸ್ ಬ್ಲಾಸ್ಟ್ ಆಗಿದ್ದು , ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿದೆ..
ಮೈಸೂರಿನ ಬನ್ನಿಮಂಟಪದ ಅಗ್ನಿಶಾಮಕ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ.
ಮನೆಯೊಂದರಲ್ಲಿ ಗ್ಯಾಸ್ ಲೀಕೇಜ್ ಆಗಿದ್ದು, ಬೆಳಗ್ಗೆ ಎದ್ದು ಹಾಲು ಕಾಯಿಸಲು ಬೆಂಕಿ ಹಚ್ಚುವ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ.
ಈ ವೇಳೆ ಅಕ್ಕಪಕ್ಕದ ಮನೆಯವರಿಗೂ ಬೆಂಕಿ ತಗುಲಿದೆ.
ಮೈಸೂರಿನ ಎನ್ ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಒಂದೇ ಮನೆಯ ನಾಲ್ವರು ಹಾಗೂ ಅಕ್ಕಪಕ್ಕದ 6 ಮಂದಿಗೆ ಗಾಯಗಳಾಗಿದೆ.
ಅವರಲ್ಲಿ ಇಬ್ಬರು ಮಕ್ಕಳಿದ್ದು, ಓರ್ವ 6 ವರ್ಷ ಹಾಗೂ ಇನ್ನೋರ್ವ 10 ವರ್ಷದ ಬಾಲಕನಾಗಿದ್ದಾನೆ. 6 ಮಂದಿ ಗಾಯಳು ಪೈಕಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ದೇಹದ ಕೆಲ ಭಾಗ ಸುಟ್ಟುಹೋಗಿದೆ.
ಗಾಯಳುಗಳು ಸಮೀಪದ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರೆಲ್ಲರೂ ವೆಂಟಿಲೆಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ..
Mysore Gas Blast , 6 injured , 1 is serious








