Rahul Dravid : ಬದಲಾವಣೆಯ ಸುಳಿವು ಕೊಟ್ಟರಾ..?? ಕೋಚ್ ದ್ರಾವಿಡ್..!!!
ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಎರಡನೆ ಟಿ20 ಸೋತ ಬೆನ್ನಲ್ಲೆ ತಂಡದಲ್ಲಿ ಭಾರೀ ಬದಲಾವಣೆ ಮಾಡುವ ಸುಳಿವನ್ನು ತಂಡದ ಕೋಚ್ ರಾಹುಲ್ ದ್ರಾವಿಡ್ ನೀಡಿದ್ದಾರೆ.
ಪುಣೆ ಮೈದಾನದಲ್ಲಿ ಭಾರತ ತಂಡ ಲಂಕಾ ವಿರುದ್ದ 16 ರನ್ಗಳ ಸೋಲು ಕಂಡಿತು.
ಪಂದ್ಯ ಮುಗದಿ ಬಳಿಕ ಮಾತನಾಡಿದ ಕೋಚ್ ದ್ರಾವಿಡ್, ಯುವ ತಂಡದೊಂದಿಗೆ ಎಲ್ಲರೂ ತಾಳ್ಮೆಯಿಂದ ಇರಬೇಕು ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ಬರಲಿದೆ ಎಂದರು.
ನಮ್ಮದು ಯುವಕರ ತಂಡವಾಗಿದ್ದು ಒತ್ತಡದಲ್ಲಿ ಆಡುತ್ತಿದ್ದೇವೆ. ನಮ್ಮ ತಂಡದ ನಾಲ್ಕು ಆಟಗಾರರು ಮಾತ್ರ ಲಂಕಾ ವಿರುದ್ಧ ಆಡಿದ ಅನುಭವ ಹೊಂದಿದ್ದಾರೆ. ಭವಿಷ್ಯದ ಟಿ20 ತಂಡ ಈಗ ಆಡುತ್ತಿದೆ. ಶ್ರೀಲಂಕಾ ಗುಣಮಟ್ಟದ ತಂಡವಾಗಿದ್ದು ಇದು ನಮಗೆ ಒಳ್ಳೆಯ ಅನುಭವ ನೀಡಿದೆ ಎಂದಿದ್ದಾರೆ.
2024ರ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾ ಮೊಹ್ಮದ್ ಶಮಿ, ಆರ್.ಅಶ್ವಿನ್ ಮತ್ತು ದಿನೇಶ್ ಕಾರ್ತಿಕ್ ಅವರ ಸೇವೆಯನ್ನು ಕೈಬಿಟ್ಟಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಅವರುಗಳಿಗೆ ವಿಶ್ರಾಂತಿ ನೀಡಿದೆ.








