Co-operative Bank Fraud : ಗುರುರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ 3 ವರ್ಷ; ಠೇವಣಿದಾರರಿಂದ ಸಹಿ ಸಂಗ್ರಹ ಅಭಿಯಾನ…
ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದು ಮೂರು ವರ್ಷಗಳು ಕಳೆದಿವೆ. ಆದರೇ ಇಲ್ಲಿಯವರೆಗೂ ಠೇವಣಿದಾರರಿಗೆ ಮತ್ತು ಷೇರುದಾರರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಹಗರಣ ಬೆಳಕಿಗೆ ಬಂದ ಈ ಕರಾಳ ದಿನದಿಂದು ಠೇವಣಿದಾರರೆಲ್ಲರು ಸೇರಿ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಎದುರು ಸೇರಿ ಪ್ರತಿಭಟನೆ ನಡೆಸಿ ಪ್ರಕರಣವನ್ನ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಬಸವನಗುಡಿಯಲ್ಲಿರುವ ಕೋ- ಆಪರೇಟಿವ್ ಬ್ಯಾಂಕ್ ಮುಂಭಾಗ ಇಂದು ಸಹಿ ಸಂಗ್ರಹ ಅಭಿಯಾನವನ್ನ ನಡೆಸಲಾಯಿಯು. ಪ್ರಧಾನಿ ನರೇಂದ್ರ ಮೋದಿ, ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್ ಶಾ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಹಿ ಸಂಗ್ರಹವನ್ನ ರವಾನಿಸಲು ವಂಚನೆಗೊಳಗಾದ ಸದಸ್ಯರು ಸಹಿ ಸಂಗ್ರಹದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಬ್ಯಾಂಕ್ ಷೇರುದಾರರು & ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕರಾದ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಮಾತನಾಡಿ “ಗುರು ರಾಘವೇಂದ್ರ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಮೂರು ವರ್ಷ ಆಯ್ತು. ಸತತವಾಗಿ ಸಿಬಿಐ ಗೆ ಕೊಡಿ ಎಂದು ಕೇಳಿದರೂ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಕ್ಷೇತ್ರದ ಶಾಸಕರಾದ ರವಿಸುಬ್ರಣ್ಯ ಅವರು ಈ ವಿಷಯವಾಗಿ ಜವಬ್ದಾರಿ ತೆಗೆದುಕೊಳ್ಳಲು ಸಿದ್ದರಾಗಿಲ್ಲ. ಮೂರು ವರ್ಷಗಳಿಂದ ಅದೇ ಹಳೇ ಕಥೆಯನ್ನ ಹೇಳುತ್ತಿದ್ದಾರೆ. ಯಾವುದೇ ರೀತಿ ಪೂರ್ಣ ಪ್ರಮಾಣದ ಪರಿಹಾರ ಬಂದಿಲ್ಲ . ಅಲ್ಲದೇ ಇನ್ಶೂರೆನ್ಸ್ ಹಣ ಬಂದಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ತಾವು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
“150 ಹೆಚ್ಚು ಠೇವಣಿದಾರರು ಹಣ ಕಳೆದುಕೊಂಡ ದುಃಖದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 46 ಸಾವಿರ ಜನ ನೇರ ಠೇವಣಿದಾರರು, ಅದಲ್ಲದೇ 120 ಸೊಸೈಟಿಗಳು ಸೇರಿ ಮೂರರಿಂದ ಐದು ಲಕ್ಷ ಜನ ಈ ಪ್ರಕರಣದಿಂದ ವಂಚನೆಗೊಳಗಾಗಿದ್ದಾರೆ. ಗುರುರಾಘವೇಂದ್ರ ಬ್ಯಾಂಕ್, ವಸಿಷ್ಠ ಸೌಹಾರ್ದ, ಗುರುಸಾರ್ವಭೌಮ ಸೊಸೈಟಿ, ಕಣ್ವ ಸೊಸೈಟಿ, ನಾಗರತ್ನ ಬ್ಯಾಂಕ್ ಹಾಗೂ ಇನ್ನುಳಿದ ಎಲ್ಲಾ ಸಹಕಾರಿ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು” ಎಂದು ಒತ್ತಾಯಿಸಿದರು
ಕೇಂದ್ರ ಮತ್ತು ರಾಜ್ಯ ನಾಯಕರಿಂದ ವಿತ್ತ ಮತ್ತು ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ಹಾಕಿಸಬೇಕಿತ್ತು. ಆದರೇ ಸಂಸದ ತೇಜಸ್ವಿ ಸೂರ್ಯ ಒಬ್ಬರೇ ಓಡಾಡುವ ಮೂಲಕ ತಾವು ಕ್ರೆಡಿಟ್ ತೆಗೆದುಕೊಳ್ಳಲು ಬಯಸುತ್ತಿದ್ದಾರೆ. ಮೊನ್ನೆ ಸಹಕಾರಿ ಸೋಮಶೇಖರ್ ಅವು ಸದನದಲ್ಲಿ ಹೇಳಿದ್ದು ಪೂರ್ತಿ ಸುಳ್ಳು ಹೇಳಿದ್ದಾರೆ. ಸಿವಿಐ ತನಿಖೆಗೆ ಕೊಡುವುದಕ್ಕೆ ವಿರೋಧ ಇದೆ. ತೇಜಸ್ವಿ ಸೂರ್ಯ ಅವರ ಎಲೆಕ್ಷನ್ನಲ್ಲಿ ಇವರನ್ನೆಲ್ಲ ಬಳಸಿಕೊಂಡಿರವ ಸಾಧ್ಯತೆ ಇದೆ. ಸಿಬಿಐ ತನಿಖೆಗೆ ಕೊಡಲೇ ಬೇಕು. ಪೂರ್ತಿ ಹಣ ಎಲ್ಲಾ ಠೇವಣಿದಾರರಿಗೂ ಬರಲೇಬೇಕು ಅಲ್ಲಿಯ ವರೆಗೂ ನಿರಂತರವಾಗಿ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಅವರು ಆಕ್ರೋಶ ವ್ಯಕ್ತಪಡಿಸಿದರು.
Co-operative Bank Fraud : Gururaghavendra co-operative bank fraud case








