virat kohli, ಸಚಿನ್ ಅವರ ಶತಕಗಳ Record ಮುರಿಯಲು ಇನ್ನೇಷ್ಟು ವರ್ಷ ಬೇಕು?
ಬಾಂಗ್ಲಾದೇಶ ವಿರುದ್ಧದ ಕೋಲ್ಕತ್ತಾ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು. ಇದು ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 70ನೇ ಶತಕವಾಗಿತ್ತು. ಆಗ ಅವರಿಗೆ ವಯಸ್ಸು ಕೇವಲ 31 ವರ್ಷ. ಆ ಸಮಯದಲ್ಲಿ, ಅಭಿಮಾನಿಗಳು ವಿರಾಟ್ ಹೆಚ್ಚು ಶತಕಗಳನ್ನು ಗಳಿಸುವ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಬಿಟ್ಟುಬಿಡುತ್ತಾರೆ ಎಂದು ಒಪ್ಪಿಕೊಂಡರು. ಸಚಿನ್ 40 ವರ್ಷ ವಯಸ್ಸಿನವರೆಗೂ ಕ್ರಿಕೆಟ್ ಆಡಿದರು ಮತ್ತು 100 ಶತಕಗಳನ್ನು ಗಳಿಸಿದರು.
ಪ್ರತಿ ಮೂರನೇ-ನಾಲ್ಕನೇ ಪಂದ್ಯದಲ್ಲೂ ಶತಕ ಸಿಡಿಸಿದ್ದ ವಿರಾಟ್ ಬ್ಯಾಟ್ ಮೌನವಾಗತೊಡಗಿತು. ಶತಕಗಳು ಬರುವುದನ್ನು ನಿಲ್ಲಿಸಿದವು. ಅವರ ಶತಕದ ಬರ ಸುಮಾರು 3 ವರ್ಷಗಳ ಕಾಲ ನಡೆಯಿತು. ವಿರಾಟ್ಗೆ ಅಭಿಮಾನಿಗಳು ಮತ್ತು ತಜ್ಞರು ನಿವೃತ್ತಿಯಾಗುವಂತೆ ಸಲಹೆ ನೀಡಲಾರಂಭಿಸಿದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಿರಾಟ್ ಏಷ್ಯಾಕಪ್ನಲ್ಲಿ, ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಕೊಹ್ಲಿ ಇದೀಗ ಕಳೆದ ನಾಲ್ಕು ಏಕದಿನ ಪಂದ್ಯಗಳ ಪೈಕಿ ಮೂರರಲ್ಲಿ 100ರ ಗಡಿ ದಾಟಿದ್ದಾರೆ. ವಿರಾಟ್ ಫಾರ್ಮ್ಗೆ ಮರಳಿದ್ದು, ಇದರೊಂದಿಗೆ 100 ಶತಕಗಳ ಗಡಿ ದಾಟಲು ಸಾಧ್ಯವೇ ಎಂಬ ಚರ್ಚೆಯೂ ಆರಂಭವಾಗಿದೆ.
ವಿರಾಟ್ ಎಷ್ಟು ಸಮಯ ಆಡಬಹುದು?
ವಿರಾಟ್ ಕೊಹ್ಲಿ ಇದುವರೆಗೆ ಇನ್ನೇಷ್ಟು ವರ್ಷ ಆಡಬಹುದು ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಅವರು ಈಗ ಆಟವಾಡುವುದನ್ನು ಮುಂದುವರಿಸುತ್ತಾರೆ. ಆದರೆ, ಇದು ಎಷ್ಟು ದಿನ ಮುಂದುವರಿಯುತ್ತದೆ?
ಫಿಟ್ನೆಸ್ ವಿಚಾರದಲ್ಲಿ ಟೀಂ ಇಂಡಿಯಾದ ಹಲವು ಯುವ ತಾರೆಯರಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರೇ ನಿವೃತ್ತಿಯಾಗಲು ನಿರ್ಧರಿಸುವವರೆಗೆ ಯಾರೂ ಅವರನ್ನು ನಿವೃತ್ತಿ ಘೋಷಿಸಿ ಎಂದು ಹೇಳುವುದು ಮರಿಚಿಕೆ ಆಗಿದೆ.
ಸಚಿನ್ ತೆಂಡೂಲ್ಕರ್ ಅವರು 40 ವರ್ಷ ವಯಸ್ಸಿನವರೆಗೆ ಭಾರತಕ್ಕಾಗಿ ಆಡಿದ್ದರು. ರಾಹುಲ್ ದ್ರಾವಿಡ್ 39 ವರ್ಷದವರೆಗೂ ಆಡಿದ್ದರು. ಮಹೇಂದ್ರ ಸಿಂಗ್ ಧೋನಿ 38 ವರ್ಷದವರೆಗೂ ಟೀಂ ಇಂಡಿಯಾದ ಭಾಗವಾಗಿದ್ದರು.
ವಿರಾಟ್ ಕೂಡ ಈ ದಂತಕಥೆಗಳ ಹಾದಿ ಹಿಡಿದರೆ 4ರಿಂದ 5 ವರ್ಷ ಆರಾಮವಾಗಿ ಸುಲಭವಾಗಿ ಆಡಬಹುದು.ಇನ್ನು 4ರಿಂದ 5 ವರ್ಷ ಆಡುವ ಸಂದರ್ಭ ಎದುರಾದರೆ ಅವರು 26 ಶತಕ ಸಿಡಿಸಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.
ಕ್ರಿಕೆಟ್ ನ ಎಲ್ಲಾ ಮೂರು ಸ್ವರೂಪಗಳನ್ನು ಒಳಗೊಂಡಂತೆ, ವಿರಾಟ್ ಪ್ರತಿ ಶತಕಕ್ಕೆ ಸರಾಸರಿ 7.33 ಇನ್ನಿಂಗ್ಸ್ಗಳನ್ನು ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ 26 ಶತಕಗಳಿಗೆ 190 ಇನ್ನಿಂಗ್ಸ್ಗಳ ಅಗತ್ಯವಿದೆ.
ಅವರು ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಪ್ರತಿ ವರ್ಷ ಸರಾಸರಿ 34 ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಅದರಂತೆ, 190 ಇನ್ನಿಂಗ್ಸ್ಗಳನ್ನು ಆಡಲು ಅವರಿಗೆ ಸರಿ ಸುಮಾರು ಐದು ವರೆ ವರ್ಷ ಬೇಕಾಗುತ್ತದೆ. ಅವರು ಇನ್ನೂ 5 ವರ್ಷಗಳ ಕಾಲ ಆಡುವ ಸಾಧ್ಯತೆಯಿದೆ. ಇದೇ ಫಾರ್ಮ್ ಅನ್ನು ಮುಂದೆವರೆಸಿದರೆ, ಮುಂದಿನ ಮೂರು ವರ್ಷಗಳಲ್ಲಿ ಅವರು ನೂರಾರು ಶತಕಗಳನ್ನು ಪೂರೈಸಬಹುದು.
ವಿರಾಟ್ 2017 ಮತ್ತು 2018 ವರ್ಷಗಳು ಸೇರಿದಂತೆ 99 ಇನ್ನಿಂಗ್ಸ್ಗಳಲ್ಲಿ 22 ಶತಕಗಳನ್ನು ಗಳಿಸಿದ್ದರು. ಪ್ರತಿ 4.5 ಇನ್ನಿಂಗ್ಸ್ನಲ್ಲಿ 1 ಶತಕ ಎಂದರ್ಥ.
ಈ ವೇಗದಲ್ಲಿ ಅವರು ಮತ್ತೆ ಶತಕಗಳನ್ನು ಗಳಿಸಲು ಪ್ರಾರಂಭಿಸಿದರೆ, ಸುಮಾರು 117 ಇನ್ನಿಂಗ್ಸ್ಗಳಲ್ಲಿ ಅವರು ಇನ್ನೂ 26 ಶತಕಗಳನ್ನು ಗಳಿಸುತ್ತಾರೆ. ಅಂದರೆ ಮುಂದಿನ ಮೂರು ವರ್ಷಗಳಲ್ಲಿ. 2026 ರ ಹೊತ್ತಿಗೆ ವಿರಾಟ್ ಈ ದಾಖಲೆಯನ್ನು ಮುರಿ ಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.