ಗುರು ರಾಘವೇಂದ್ರ ಬ್ಯಾಂಕ್ ಹಗರಣ CBI ಹೆಗಲಿಗೆ; ತನಿಖೆಯ ನೆಪದಲ್ಲಾದರೂ ಪರಿಹಾರ ಸಿಗಲಿ ಎಂದು ಒತ್ತಾಯ..
ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಪ್ರಕರಣವನ್ನ ಸಿಬಿಐ ತನಿಖೆಗೆ ಸೂಚಿಸಿದ್ದಾರೆ. ಆದರೇ… ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಕೇವಲ ಗುರುರಾಘವೇಂದ್ರ ಹಾಗೂ ವಿಶಿಷ್ಟ ಬ್ಯಾಂಕ್ ಮಾತ್ರ ಸಿ.ಬಿ.ಐ ತನಿಖೆಗೆ ವಹಿಸಿದ್ದಾರೆ ಇನ್ನೂ ನೂರಾರು ಬ್ಯಾಂಕ್ ಗಳ ವಂಚನೆಗಳನ್ನೂ ತನಿಖೆಗೆ ಒಳಪಡಿಸಿಬೇಕು ಎಂದು ಡಾ. ಶಂಕರ್ ಗುಹಾ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶ್ರೀ ಗುರು ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಷೇರುದಾರರು & ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕರಾದ ಡಾ. ಶಂಕರ ಗುಹಾ ದ್ವಾರಕಾನಾಥ್ ರವರು “ಗುರು ರಾಘವೇಂದ್ರ ಮತ್ತು ವಿಶಿಷ್ಟ ಬ್ಯಾಂಕ್ ಹೊರತು ಪಡಿಸಿ ಕಣ್ವ ನಾಗರತ್ನ ಶಿರಿವೈಭವ ಸೇರಿದಂತೆ ನೂರಾರು ಬ್ಯಾಂಕ್ ಗಳು ವಂಚನೆ ಮಾಡಿವೆ. ಆದ್ರೆ ಮೂರು ವರ್ಷಗಳ ಕಾಲ ಯಾಕೆ ತನಿಖೆ ಮಾಡಿಲ್ಲ ? ಈಗ ಚುನಾವಣೆ ಹತ್ತಿರ ಬರುತ್ತಿದೆ ಅಂತ ಸಿ.ಬಿ.ಐ ತನಿಖೆಗೆ ವಹಿಸಿದ್ದಾರೆ. ಸದ್ಯ ತನಿಖೆ ನೆಪದಲ್ಲಿ ಬೇಗ ಪರಿಹಾರ ಸಿಗಬೇಕು” ಎಂದು ಒತ್ತಾಯಿಸಿದ್ದಾರೆ.
ನಂತರ ಮಾತನಾಡಿ ಸಿ.ಬಿ.ಐ ತನಿಖೆ ಹೆಸರಲ್ಲಿ ಇನ್ನೂ ಮೂರು ವರ್ಷಗಳ ಕಾಲ ಮುಂದೂಡೋದು ಸರಿಯಲ್ಲ. ಆದ್ರೆ ಈ ತನಿಖೆ ಮೊದಲೇ ನಡೀಬೇಕಿತ್ತು ಆದ್ರೆ ಸ್ಥಳೀಯ ಶಾಸಕರು ಮತ್ತು ಸಂಸದರ ಕುಮ್ಮಕ್ಕಿನಿಂದ ತನಿಖೆ ವೈಫಲ್ಯ ವಾಗಿತ್ತು. ಐ ಎಂ.ಎ ಹಗರಣ ಯಾವ ರೀತಿ ತನಿಖೆ ಆಯ್ತೋ ಅದೇ ರೀತಿ ಗುರುರಾಘವೇಂದ್ರ ಬ್ಯಾಂಕ್ ತನಿಖೆಯಾಗಬೇಕು ಅದರ ಜೊತೆ ಬ್ಯಾಂಕ್ ನಲ್ಲಿ ನಡೆದಿರುವ 3 ಸಾವಿರ ಕೋಟಿ ಹಗರಣ ಬೆಳಕಿಗೆ ಬರುವುದರ ಜೊತೆ ವಂಚನೆಗೆ ಒಳಗಾದವರಿಗೆಲ್ಲಾ ಶೀಘ್ರವೇ ಪರಿಹಾರ ಸಿಗಬೇಕು ಅಂತ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಆಗ್ರಹ ಪಡಿಸಿದರು.
ಹಗರಣ ನಡೆದಾಗಿನಿಂದ ಸಿಬಿಐ ತನಿಖೆಗೆ ನೀಡಲು ಆಗ್ರಹ ಪಡಿಸಿದ್ದು ನಾವು. ಇದೀಗ ಒಂದು ಹಂತದಲ್ಲಿ ಜಯ ದೊರೆತಿದೆ. ಇದರ ಜೊತೆ 120 ಸೊಸೈಟಿ ಸಿಲುಕಿದೆ. ಸೊಸೈಟಿ ಮಾಲೀಕರು ಲೋನ್ ಪಡೆದು ಪರಾರಿಯಾಗಿದ್ದು, ಬೇಲ್ ಮೇಲೆ ಹೊರಗಿದ್ದಾರೆ. ಸಾಕಷ್ಟು ಬ್ಯಾಂಕ್ ಸಿಬ್ಬಂದಿ ವರ್ಗ ಇದರಲ್ಲಿ ತೊಡಗಿಸಿಕೊಂಡಿದ್ದು ಅವರೆಲ್ಲ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಠೇವಣಿದಾರರು ಮತ್ತು ಷೇರುದಾರರ ಜೊತೆ ಅನೇಕ ಹೋರಾಟಗಳನ್ನು ಮಾಡುತ್ತಾ ಸ್ಥಳೀಯ ಶಾಸಕರು ಮತ್ತು ಸಂಸದರ ಮನೆಗಳಿಗೆ ಅಲೆದಿದ್ದೇವೆ. ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ ನಂತರದಲ್ಲಿ ನಿನ್ನೆಯಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಇರುವುದನ್ನು ನೋಡಿದರೆ ಇವರಿಗೆ ಇದರಿಂದ ಗಾಬರಿಯಾಗಿರಬೇಕು ಎಂದು ತೋರುತ್ತದೆ. ತೇಜಸ್ವಿ ಸೂರ್ಯರವರಿಗೆ ಈ ಹಗರಣದ ರೂವಾರಿಗಳಾಗಿದ್ದ ರಾಮಕೃಷ್ಣ ಮತ್ತು ವೆಂಕಟೇಶ್ ಅವರು ಚುನಾವಣಾ ಪ್ರಚಾರ ಮಾಡುವಲ್ಲಿ ಸಹಕರಿಸಿದ್ದಾರೆ ಇದನ್ನೆಲ್ಲ ನೋಡಿದರೆ ಅನೇಕ ಅನುಮಾನಗಳು ಹುಟ್ಟು ಹಾಕುತ್ತವೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ಹೇಳಿದ್ದಾರೆ.
Guru Raghavendra Bank Scam to CBI; Insist on getting a solution even under the guise of an investigation..








