spy balloon : ಅಮೆರಿಕಾದ ಅಣ್ವಸ್ತ್ರ ತಾಣಗಳ ಮೇಲೆ ಬೇಹುಗಾರಿಕೆ ಕಣ್ಣಿಟ್ಟ ಚೀನಾ…
ಚೀನಾದ ಕಣ್ಣು ಇದೀಗ ಅಮೆರಿಕದ ಮೇಲಿದೆ. ಚೀನಾ ಮತ್ತೊಮ್ಮೆ ಅಮೆರಿಕಾ ಮೇಲೆ ಕಣ್ಣಿಡಲು ದೈರ್ಯ ಮಾಡಿದೆ,. ಇದಕ್ಕೆ ಪುರಾವೆಯಾಗಿ ಚೀನಾದ ಸ್ಪೈ ಬಲೂನ್ ಯುಎಸ್ ಆಕಾಶದಲ್ಲಿ ಹಾರುತ್ತಿರುವುದನ್ನು ಗುರುತಿಸಲಾಗಿದೆ.
ಇದರ ನಂತರ, ಅಮೆರಿಕದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು, ತಕ್ಷಣ ಚೀನಾ ರಾಜತಾಂತ್ರಿಕರಿಗೆ ಸಮನ್ಸ್ ಜಾರಿ ಮಾಡಿದೆ. ಶಂಕಿತ ಚೀನಾದ ಗೂಢಚಾರಿಕೆ ಬಲೂನ್ ಹಲವು ದಿನಗಳಿಂದ ಯುನೈಟೆಡ್ ಸ್ಟೇಟ್ಸ್ ಮೇಲೆ ಹಾರುತ್ತಿರುವುದನ್ನು ಗುರುತಿಸಿರುವುದಾಗಿ ಪೆಂಟಗನ್ ಹೇಳಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಈ ಚೈನೀಸ್ ಸ್ಪೈ ಬಲೂನ್ ಮೂರು ಬಸ್‌ಗಳ ಗಾತ್ರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಸೂಕ್ಷ್ಮ ಪರಮಾಣು ಶಸ್ತ್ರಾಸ್ತ್ರಗಳ ತಾಣಗಳನ್ನ ಮೇಲ್ವಿಚಾರಣೆ ಮಾಡುವ ಶಂಕಿತ ಚೀನಾದ ಬೇಹುಗಾರಿಕಾ ಬಲೂನ್ ಯುನೈಟೆಡ್ ಸ್ಟೇಟ್ಸ್ ಮೇಲೆ ಹಾರುತ್ತಿದೆ ಎಂದು ಪೆಂಟಗನ್ ಹೇಳಿದೆ. ಉನ್ನತ ಸೇನಾ ಅಧಿಕಾರಿಗಳು ಬಲೂನ್ ಅನ್ನ ಹೊಡೆದುರುಳಿಸಲು ಪರಿಗಣಿಸಿದ್ದರು. ಆದರೆ ನೆಲದ ಮೇಲೆ ಹಲವಾರು ಜನರಿಗೆ ಅಪಾಯವನ್ನುಂಟುಮಾಡುವ ಭಯದಿಂದ ಹಾಗೆ ಮಾಡಲಾಗಲಿಲ್ಲ ಎಂದು ಯುಎಸ್ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೀಗ, ಈ ಚೀನಾದ ಬಲೂನ್ ಉತ್ತರ ಮೊಂಟಾನಾದ ಆಕಾಶದಲ್ಲಿ ಹಾರುತ್ತಿದೆ. ಅದರ ಹಿಂದೆ ಅಮೆರಿಕದ ವಾಯುಪಡೆಯ ವಿಮಾನಗಳೂ ನಿಂತಿವೆ. ಚೀನಾದ ಬಲೂನ್ ಪ್ರಸ್ತುತ ವಾಣಿಜ್ಯ ವಾಯು ಸಂಚಾರಕ್ಕಿಂತ ಹೆಚ್ಚು ಹಾರುತ್ತಿದೆ ಮತ್ತು ಸಾರ್ವಜನಿಕರಿಗೆ ಯಾವುದೇ ಅಪಾಯವನ್ನುಂಟುಮಾಡುವುದಿಲ್ಲ ಎಂದು ಪೆಂಟಗನ್ ಹೇಳಿಕೆಯಲ್ಲಿ ತಿಳಿಸಿದೆ.
spy balloon: China spying on America’s nuclear weapons sites…








