Meghna Raj : ‘ತತ್ಸಮ ತದ್ಭವ’ ಮೂಲಕ ಬೆಳ್ಳಿ ತೆರೆಗೆ ಮತ್ತೆ ಕಂಬ್ಯಾಕ್…
ನಟಿ ಮೇಘಾನಾ ರಾಜ್ ಮತ್ತೊಮ್ಮೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಪನ್ನಗಾ ಭರಣ ನಿರ್ದೇಶನದ ‘ತತ್ಸಮ ತದ್ಭವ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಹಿಂತಿರುಗುವುದಾಗಿ ನಟಿ ಮೇಘನಾ ರಾಜ್ ಘೊಷಿಸಿಕೊಂಡಿದ್ದಾರೆ.
ನಟಿ ಮೇಘನಾ ರಾಜ್ ಸರ್ಜಾ ಅವರ ಈ ‘ತತ್ಸಮ ತದ್ಭವ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಮವಿಶೇಷವೆಂದರೆ, ಈ ಪೋಸ್ಟರ್ ಅನ್ನ ನೂರಕ್ಕೂ ಹೆಚ್ಚು ನಟ-ನಟಿಯರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ.
ನಟಿ ಮೇಘನಾ ರಾಜ್ ಅವರು ಕನ್ನಡದ ಜೊತೆಗೆ ಮಲಯಾಳಂನಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಹಾಗಾಗಿ ಕನ್ನಡದ ಜೊತೆಗೆ ಮಲಯಾಳಂ ನಲ್ಲೂ ಚಿತ್ರವನ್ನ ತೆರೆಗೆ ತರಲು ಪ್ಲಾನ್ ಮಾಡಲಾಗಿದೆ.
ಈಗಾಗಲೇ ‘ಹ್ಯಾಪಿ ನ್ಯೂ ಇಯರ್’, ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಪನ್ನಗ ಭರಣ ಅವರು ‘ತತ್ಸಮ ತದ್ಭವ’ ಆಕ್ಷನ್ ಕಟ್ ಜೊತೆಗೆ ಹಣವನ್ನೂ ಹುಡುತ್ತಿದ್ದಾರೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
Meghna Raj : Comeback to the silver screen with ‘Tatsama Tadbhava’…