Guwahati : ಗಂಡ ಅತ್ತೆಯನ್ನ ಕೊಂದು ಫ್ರಿಡ್ಜ್ ನಲ್ಲಿಟ್ಟ ಮಹಿಳೆ….
ಶ್ರದ್ಧಾ ವಾಕರ್ ಕೊಲೆ ಪ್ರಕರಣದಂತೆಯೇ ಮತ್ತೊಂದು ಕೊಲೆ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಗುವಾಹಟಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು ಅವರ ದೇಹದ ಭಾಗಗಳನ್ನ ತುಂಡು ತುಂಡು ಮಾಡಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟಿದ್ದಾಳೆ .
ಈ ಘಟನೆ ಗುಹವಾಟಿ ನಗರದ ನೂನ್ಮತಿ ಪ್ರದೇಶದಲ್ಲಿ ಆಗಸ್ಟ್ 17, 2022 ರಂದು ನಡೆದಿದೆ. ಆದರೇ ಈ ಪ್ರಕರಣ ಫೆಬ್ರವರಿ 19 ರಂದು ಈ ವರ್ಷ ರಂದು ಬೆಳಕಿಗೆ ಬಂದಿದೆ. ಕೊಲೆ ಮಾಡಿರುವ ಆರೋಪಿ ಮಹಿಳೆ ತನ್ನ ಕೃತ್ಯವನ್ನ ಒಪ್ಪಿಕೊಂಡಿದ್ದಾರೆ.
ಬಂದನಾ ಕಲಿತಾ ಎಂದು ಗುರುತಿಸಲಾಗಿರುವ ಮಹಿಳೆ, ತನ್ನ ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನ ಕೊಂದು ನಂತರ ಅವರು ಅವರ ದೇಹಗಳನ್ನು ಅನೇಕ ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ನಂತರ ಒಂದೊಂದಾಗಿ ದೇಹದ ಭಾಗಗಳನ್ನ ಮೇಘಾಲಯದ ದೌಕಿ ಪಟ್ಟಣದಲ್ಲಿ ವಿಲೆವಾರಿ ಮಾಡಿದ್ದಾರೆ.
ಕೊಲೆ ಮಾಡಲು ಕಾರಣ ಅಕ್ರಮ ಸಂಬಂಧ ಮತ್ತ ಆಸ್ತಿ ಮೇಲಿನ ಆಸೆಯೇ ಕಾರಣ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಕತ್ಯಕ್ಕೆ ಆಕೆಯ ಸ್ನೇಹಿತ ಮತ್ತು ಇನ್ನೊಬ್ಬ ವ್ಯಕ್ತಿಯೂ ಸಾಥ್ ನೀಡಿದ್ದಾರೆ. ಪೊಲೀಸರು ಆರೋಪಿ ಮಹಿಳೆ ಮತ್ತು ಇಬ್ಬರು ಸಹಚರರನ್ನ ಬಂಧಿಸಿ ಅರೆಸ್ಟ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Guwahati: A woman killed her husband and kept her in the fridge.