Madhya Pradesh : ಅಂಕಪಟ್ಟಿ ವಿಚಾರಕ್ಕೆ ಜಗಳ – ಪ್ರಾಂಶುಪಾಲರನ್ನ ಬೆಂಕಿ ಹಚ್ಚಿ ಕೊಂದ ವಿದ್ಯಾರ್ಥಿ….
ಫೆ 20 ವಿದ್ಯಾರ್ಥಿಯಿಂದ ಬೆಂಕಿ ಹಂಚಿಕೊಂಡಿದ್ದ ಪ್ರಾಂಶುಪಾಲರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಫಾರ್ಮಸಿ ಕಾಲೇಜಿನ ಮಾಜಿ ವಿದ್ಯಾರ್ಥಿಯೊಬ್ಬ ಅಂಕಪಟ್ಟಿ ನೀಡಲು ತಡ ಮಾಡಿದ ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿತ್ತು.
ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಮುಕ್ತ ಶರ್ಮಾ (50) ಅವರು ಶೇ 80 ರಷ್ಟು ಸುಟ್ಟ ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಪ್ರಾಂಶುಪಾಲರು ನಿಧನರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ, ಪ್ರಾಂಶುಪಾಲರು ಮನೆಗೆ ತೆರಳಲು ಕಾರು ಹತ್ತುವ ಸಂಭ್ರಮದಲ್ಲಿದ್ದಾಗ ಅಶುತೋಷ್ ಶ್ರೀವಾಸ್ತವ್ ತಡೆದು ಅಂಕಪಟ್ಟಿ ವಿಚಾರವಾಗಿ ತೀವ್ರ ವಾಗ್ವಾದ ನಡೆಸಿದ್ದ. ನಂತರ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ವಿದ್ಯಾರ್ಥಿ ಅಶುತೋಶ್ ಗೂ ಶೇ 40 ರಷ್ಟು ಗಾಯಗಳಾಗಿವೆ.
ಇದೇ ವಿದ್ಯಾರ್ಥಿ ಕೆಲ ದಿನಗಳ ಹಿಂದೆ ಪುರುಷ ಅಧ್ಯಾಪಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಜಾಮೀನು ಪಡೆದು ಕೆಲವು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Madhya Pradesh : Fight over mark sheet issue – Student set fire to the principal…








