ಓರ್ವ ನಾಯಕನಾಗಿ ವಿರಾಟ್ ಕೊಹ್ಲಿ ಏನು ಸಾಧಿಸಿಲ್ಲ.. ಸಾಧಿಸಲು ಇನ್ನಷ್ಟಿದೆ : ಗೌತಮ್ ಗಂಭೀರ್
ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಆಕ್ರಮಣಕಾರಿ ಪ್ರವೃತ್ತಿಯ ಆಟಗಾರ. ಬ್ಯಾಟ್ ನಲ್ಲಿ ನೀರಿನಂತೆ ಹರಿದು ಬರುತ್ತಿದೆ. ಈಗಾಗಲೇ ಹಲವಾರು ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ. ಟೆಸ್ಟ್ ನಲ್ಲಿ 27 ಹಾಗೂ ಏಕದಿನ ಕ್ರಿಕೆಟ್ ನಲ್ಲಿ 43 ಶತಕಗಳನ್ನು ದಾಖಲಿಸಿದ್ದಾರೆ. ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಅವರ ಬಹುತೇಕ ದಾಖಲೆಗಳನ್ನು ಅಳಿಸಿ ಹಾಕುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ ಒಬ್ಬ ನಾಯಕನಾಗಿ ಏನು ಸಾಧಿಸಿದ್ದಾರೆ ಎಂಬ ಪ್ರಶ್ನೆಯನ್ನು ವಿರಾಟ್ ಮುಂದಿಡುತ್ತಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್.
ವಿರಾಟ್ ಕೊಹ್ಲಿ ನಾಯಕನಾಗಿ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಟ್ರೋಫಿ ಗೆಲ್ಲಿಸಿಕೊಡಲು ವಿಫಲರಾಗಿದ್ದಾರೆ. ಆದ್ರೆ ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ. ಇಲ್ಲ ಅಂತಲ್ಲ. ಆದ್ರೆ ಒಬ್ಬ ಕ್ರಿಕೆಟಿಗ ಅಥವಾ ನಾಯಕನ ಕ್ರಿಕೆಟ್ ಬದುಕು ಪರಿಪೂರ್ಣವಾಗಬೇಕಾದ್ರೆ ಮಹತ್ವದ ಟ್ರೋಫಿಗಳನ್ನು ಗೆಲ್ಲಬೇಕು ಎಂಬುದು ಗೌತಮ್ ಗಂಭೀರ್ ಅವರ ಅಭಿಪ್ರಾಯವಾಗಿದೆ.
ವಿರಾಟ್ ಕೊಹ್ಲಿ ವೈಯಕ್ತಿಕವಾಗಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಇನ್ನೂ ಹಲವಾರು ಸಾಧನೆಗಳನ್ನು ಮಾಡುವ ಸಾಧ್ಯತೆಯೂ ಹೆಚ್ಚಿದೆ. ಆದ್ರೆ ಒಂದು ತಂಡವಾಗಿ ಅವರು ಮಹತ್ತರವಾದದ್ದನ್ನು ಸಾಧಿಸಬೇಕಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ವೈಯಕ್ತಿಕವಾಗಿ ನೀವು ಸರಾಗವಾಗಿ ರನ್ ದಾಖಲಿಸಬಹುದು. ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾನಂತವರು ಸಾಕಷ್ಟು ರನ್ ಗಳಿಸಿದ್ದಾರೆ. ಹಾಗೇ ಜಾಕ್ ಕಾಲಿಸ್ನಂತವರು ಏನನ್ನೂ ಗೆಲ್ಲಲಿಲ್ಲ. ಹಾಗೇ ಸದ್ಯ ವಿರಾಟ್ ಕೊಹ್ಲಿ ಕೂಡ. ಒಬ್ಬ ನಾಯಕನಾಗಿ ಅವರು ಕೂಡ ಏನನ್ನು ಗೆದ್ದಿಲ್ಲ ಎಂಬುದು ಗೌತಮ್ ಗಂಭೀರ್ ಅವರ ಅಭಿಮತವಾಗಿದೆ.
ವಿರಾಟ್ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಾಗೇ ವೈಯಕ್ತಿಕವಾಗಿ ರನ್ ಗಳನ್ನು ಕೂಡ ದಾಖಲಿಸುತ್ತಿದ್ದಾರೆ. ಆದ್ರೆ ನನಗೆ ತಂಡ ಮುಖ್ಯ, ಮಹತ್ವದ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗದೇ ಇದ್ದಾಗ ವೈಯಕ್ತಿಕ ಸಾಧನೆಗಳು ಪರಿಗಣಿಸಲಾಗುವುದಿಲ್ಲ. ನಿಮ್ಮ ಬದುಕು ಕೂಡ ಪರಿಪೂರ್ಣವಾಗಿರುವುದಿಲ್ಲ ಎನ್ನುತ್ತಾರೆ ಗೌತಮ್ ಗಂಭೀರ್
ಹೌದು, ನಿಜ, ವಿರಾಟ್ ಕೊಹ್ಲಿ ಉಳಿದ ಆಟಗಾರರಿಗಿಂತ ಭಿನ್ನ. ಇನ್ನುಳಿದ ಆಟಗಾರರಲ್ಲಿ ಅವನಷ್ಟು ಸಾಮಥ್ರ್ಯಗಳು ಇಲ್ಲದೇ ಇರಬಹುದು. ಆದ್ರೆ ಒಬ್ಬ ನಾಯಕನಾಗಿ ತಂಡದ ಎಲ್ಲಾ ಆಟಗಾರರ ಸಾಮಥ್ರ್ಯವನ್ನು ಪರಿಗಣಿಸಬೇಕು. ಅದಕ್ಕೆ ಅವಕಾಶವನ್ನು ಕಲ್ಪಿಸಬೇಕು. ಅವರ ಸಾಮಥ್ರ್ಯವನ್ನು ಬೆಳಕಿಗೆ ತರಬೇಕು. ಅಲ್ಲದೆ ಅವರನ್ನು ತನ್ನ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಯಾಕಂದ್ರೆ ಪ್ರತಿಯೊಬ್ಬರು ಭಿನ್ನ ಭಿನ್ನವಾಗಿರುತ್ತಾರೆ ಎಂದು ಹೇಳ್ತಾರೆ ಗೌತಮ್ ಗಂಭೀರ್.
ಪ್ರತಿಯೊಬ್ಬರಲ್ಲೂ ಪ್ರತಿಭೆ, ಸಾಮಥ್ರ್ಯ, ವೀಕ್ನೆಸ್ಗಳು ಇರುತ್ತವೆ. ಎಲ್ಲರನ್ನು ಒಂದೇ ರೀತಿಯಲ್ಲಿ ನಡೆಸಿಕೊಂಡು ತಂಡವಾಗಿ ಆಡಿದಾಗ ಮಾತ್ರ ಅತ್ಯುತ್ತಮವಾದದ್ದನ್ನು ಸಾಧಿಸಲು ಸಾಧ್ಯ. ಮಹಮ್ಮದ್ ಸಮಿ ಯಾವತ್ತಿಗೂ ಜಸ್ಪ್ರಿತ್ ಬೂಮ್ರಾ ಆಗಲ್ಲ. ಹಾಗೇ ಇಶಾಂತ್ ಶರ್ಮಾ
ಕೂಡ ಜಸ್ಪ್ರಿತ್ ಬೂಮ್ರಾ ಆಗಲು ಸಾಧ್ಯವಿಲ್ಲ. ಹಾಗೇ ಕೆ.ಎಲ್. ರಾಹುಲ್ ವಿರಾಟ್ ಕೊಹ್ಲಿಯಾಗೋದು ಅಸಾಧ್ಯ. ಹೀಗೆ ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್ ಮೊದಲಾದವರಿಗೂ ವಿರಾಟ್ನಷ್ಟು ಎತ್ತರಕ್ಕೆ ಬೆಳೆಯುವಂತಹ ಪ್ರತಿಭೆ ಸಾಮಥ್ರ್ಯಗಳು ಇರಲ್ಲ. ಇದನ್ನು ವಿರಾಟ್ ಅರಿತುಕೊಳ್ಳಬೇಕು ಎಂಬುದು ಗೌತಮ್ ಗಂಭೀರ್ ಅವರ ಪ್ರಾಮಾಣಿಕ ಮಾತು.
ನಾಯಕನಾದವನು ತಂಡದ ಉಳಿದ ಆಟಗಾರರ ಶ್ರೇಷ್ಠ ನಿರ್ವಹಣೆಯನ್ನು ತೆಗೆಯುವಂತಹ ಪ್ರಯತ್ನ ಮಾಡಬೇಕು. ತಂಡದ ಆಟಗಾರರ ನೆರವಿಗೆ ನಿಲ್ಲಬೇಕು. ಆಗ ಮಾತ್ರ ವಿಶ್ವ ಮಟ್ಟದ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.








