ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಓರ್ವ ನಾಯಕನಾಗಿ ವಿರಾಟ್ ಕೊಹ್ಲಿ ಏನು ಸಾಧಿಸಿಲ್ಲ.. ಸಾಧಿಸಲು ಇನ್ನಷ್ಟಿದೆ : ಗೌತಮ್ ಗಂಭೀರ್

admin by admin
June 15, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಓರ್ವ ನಾಯಕನಾಗಿ ವಿರಾಟ್ ಕೊಹ್ಲಿ ಏನು ಸಾಧಿಸಿಲ್ಲ.. ಸಾಧಿಸಲು ಇನ್ನಷ್ಟಿದೆ : ಗೌತಮ್ ಗಂಭೀರ್

ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಆಕ್ರಮಣಕಾರಿ ಪ್ರವೃತ್ತಿಯ ಆಟಗಾರ. ಬ್ಯಾಟ್ ನಲ್ಲಿ ನೀರಿನಂತೆ ಹರಿದು ಬರುತ್ತಿದೆ. ಈಗಾಗಲೇ ಹಲವಾರು ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ. ಟೆಸ್ಟ್ ನಲ್ಲಿ 27 ಹಾಗೂ ಏಕದಿನ ಕ್ರಿಕೆಟ್ ನಲ್ಲಿ 43 ಶತಕಗಳನ್ನು ದಾಖಲಿಸಿದ್ದಾರೆ. ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಅವರ ಬಹುತೇಕ ದಾಖಲೆಗಳನ್ನು ಅಳಿಸಿ ಹಾಕುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ ಒಬ್ಬ ನಾಯಕನಾಗಿ ಏನು ಸಾಧಿಸಿದ್ದಾರೆ ಎಂಬ ಪ್ರಶ್ನೆಯನ್ನು ವಿರಾಟ್ ಮುಂದಿಡುತ್ತಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್.

Related posts

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

August 7, 2026
ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

August 7, 2026

ವಿರಾಟ್ ಕೊಹ್ಲಿ ನಾಯಕನಾಗಿ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಟ್ರೋಫಿ ಗೆಲ್ಲಿಸಿಕೊಡಲು ವಿಫಲರಾಗಿದ್ದಾರೆ. ಆದ್ರೆ ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ. ಇಲ್ಲ ಅಂತಲ್ಲ. ಆದ್ರೆ ಒಬ್ಬ ಕ್ರಿಕೆಟಿಗ ಅಥವಾ ನಾಯಕನ ಕ್ರಿಕೆಟ್ ಬದುಕು ಪರಿಪೂರ್ಣವಾಗಬೇಕಾದ್ರೆ ಮಹತ್ವದ ಟ್ರೋಫಿಗಳನ್ನು ಗೆಲ್ಲಬೇಕು ಎಂಬುದು ಗೌತಮ್ ಗಂಭೀರ್ ಅವರ ಅಭಿಪ್ರಾಯವಾಗಿದೆ.
ವಿರಾಟ್ ಕೊಹ್ಲಿ ವೈಯಕ್ತಿಕವಾಗಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಇನ್ನೂ ಹಲವಾರು ಸಾಧನೆಗಳನ್ನು ಮಾಡುವ ಸಾಧ್ಯತೆಯೂ ಹೆಚ್ಚಿದೆ. ಆದ್ರೆ ಒಂದು ತಂಡವಾಗಿ ಅವರು ಮಹತ್ತರವಾದದ್ದನ್ನು ಸಾಧಿಸಬೇಕಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ವೈಯಕ್ತಿಕವಾಗಿ ನೀವು ಸರಾಗವಾಗಿ ರನ್ ದಾಖಲಿಸಬಹುದು. ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾನಂತವರು ಸಾಕಷ್ಟು ರನ್ ಗಳಿಸಿದ್ದಾರೆ. ಹಾಗೇ ಜಾಕ್ ಕಾಲಿಸ್‍ನಂತವರು ಏನನ್ನೂ ಗೆಲ್ಲಲಿಲ್ಲ. ಹಾಗೇ ಸದ್ಯ ವಿರಾಟ್ ಕೊಹ್ಲಿ ಕೂಡ. ಒಬ್ಬ ನಾಯಕನಾಗಿ ಅವರು ಕೂಡ ಏನನ್ನು ಗೆದ್ದಿಲ್ಲ ಎಂಬುದು ಗೌತಮ್ ಗಂಭೀರ್ ಅವರ ಅಭಿಮತವಾಗಿದೆ.
ವಿರಾಟ್ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಾಗೇ ವೈಯಕ್ತಿಕವಾಗಿ ರನ್ ಗಳನ್ನು ಕೂಡ ದಾಖಲಿಸುತ್ತಿದ್ದಾರೆ. ಆದ್ರೆ ನನಗೆ ತಂಡ ಮುಖ್ಯ, ಮಹತ್ವದ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗದೇ ಇದ್ದಾಗ ವೈಯಕ್ತಿಕ ಸಾಧನೆಗಳು ಪರಿಗಣಿಸಲಾಗುವುದಿಲ್ಲ. ನಿಮ್ಮ ಬದುಕು ಕೂಡ ಪರಿಪೂರ್ಣವಾಗಿರುವುದಿಲ್ಲ ಎನ್ನುತ್ತಾರೆ ಗೌತಮ್ ಗಂಭೀರ್
ಹೌದು, ನಿಜ, ವಿರಾಟ್ ಕೊಹ್ಲಿ ಉಳಿದ ಆಟಗಾರರಿಗಿಂತ ಭಿನ್ನ. ಇನ್ನುಳಿದ ಆಟಗಾರರಲ್ಲಿ ಅವನಷ್ಟು ಸಾಮಥ್ರ್ಯಗಳು ಇಲ್ಲದೇ ಇರಬಹುದು. ಆದ್ರೆ ಒಬ್ಬ ನಾಯಕನಾಗಿ ತಂಡದ ಎಲ್ಲಾ ಆಟಗಾರರ ಸಾಮಥ್ರ್ಯವನ್ನು ಪರಿಗಣಿಸಬೇಕು. ಅದಕ್ಕೆ ಅವಕಾಶವನ್ನು ಕಲ್ಪಿಸಬೇಕು. ಅವರ ಸಾಮಥ್ರ್ಯವನ್ನು ಬೆಳಕಿಗೆ ತರಬೇಕು. ಅಲ್ಲದೆ ಅವರನ್ನು ತನ್ನ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಯಾಕಂದ್ರೆ ಪ್ರತಿಯೊಬ್ಬರು ಭಿನ್ನ ಭಿನ್ನವಾಗಿರುತ್ತಾರೆ ಎಂದು ಹೇಳ್ತಾರೆ ಗೌತಮ್ ಗಂಭೀರ್.
ಪ್ರತಿಯೊಬ್ಬರಲ್ಲೂ ಪ್ರತಿಭೆ, ಸಾಮಥ್ರ್ಯ, ವೀಕ್‍ನೆಸ್‍ಗಳು ಇರುತ್ತವೆ. ಎಲ್ಲರನ್ನು ಒಂದೇ ರೀತಿಯಲ್ಲಿ ನಡೆಸಿಕೊಂಡು ತಂಡವಾಗಿ ಆಡಿದಾಗ ಮಾತ್ರ ಅತ್ಯುತ್ತಮವಾದದ್ದನ್ನು ಸಾಧಿಸಲು ಸಾಧ್ಯ. ಮಹಮ್ಮದ್ ಸಮಿ ಯಾವತ್ತಿಗೂ ಜಸ್ಪ್ರಿತ್ ಬೂಮ್ರಾ ಆಗಲ್ಲ. ಹಾಗೇ ಇಶಾಂತ್ ಶರ್ಮಾ ಕೂಡ ಜಸ್ಪ್ರಿತ್ ಬೂಮ್ರಾ ಆಗಲು ಸಾಧ್ಯವಿಲ್ಲ. ಹಾಗೇ ಕೆ.ಎಲ್. ರಾಹುಲ್ ವಿರಾಟ್ ಕೊಹ್ಲಿಯಾಗೋದು ಅಸಾಧ್ಯ. ಹೀಗೆ ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್ ಮೊದಲಾದವರಿಗೂ ವಿರಾಟ್‍ನಷ್ಟು ಎತ್ತರಕ್ಕೆ ಬೆಳೆಯುವಂತಹ ಪ್ರತಿಭೆ ಸಾಮಥ್ರ್ಯಗಳು ಇರಲ್ಲ. ಇದನ್ನು ವಿರಾಟ್ ಅರಿತುಕೊಳ್ಳಬೇಕು ಎಂಬುದು ಗೌತಮ್ ಗಂಭೀರ್ ಅವರ ಪ್ರಾಮಾಣಿಕ ಮಾತು.
ನಾಯಕನಾದವನು ತಂಡದ ಉಳಿದ ಆಟಗಾರರ ಶ್ರೇಷ್ಠ ನಿರ್ವಹಣೆಯನ್ನು ತೆಗೆಯುವಂತಹ ಪ್ರಯತ್ನ ಮಾಡಬೇಕು. ತಂಡದ ಆಟಗಾರರ ನೆರವಿಗೆ ನಿಲ್ಲಬೇಕು. ಆಗ ಮಾತ್ರ ವಿಶ್ವ ಮಟ್ಟದ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ShareTweetSendShare
Join us on:

Related Posts

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

ಭಾರತದಲ್ಲಿ ನನ್ನ ಖಾತೆ ನಿರ್ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ ಎಎಪಿ ನಾಯಕ- ಪ್ರಧಾನಿಗೆ ಅತಿಯಾಗಿ ತಲೆಬಾಗಬೇಡಿ ಮೆಟಾ ಸಂಸ್ಥೆಗೆ ಕೇಜ್ರಿವಾಲ್ ಖಡಕ್ ಎಚ್ಚರಿಕೆ

by Shwetha
August 7, 2026
0

ಹೊಸ ದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೆಟಾ ವಿರುದ್ಧ ಗಂಭೀರ ಸಮರ ಸಾರಿದ್ದಾರೆ. ಭಾರತದಲ್ಲಿ ತಮ್ಮ...

ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

ಪಿಒಪಿ ಗಣೇಶ ಮೂರ್ತಿಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ ಸೂಚನೆ

by Shwetha
August 7, 2026
0

ಗಣೇಶೋತ್ಸವದ ವೇಳೆ ಪಿಒಪಿ (Plaster of Paris) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಸ್ಥಾಪನೆ ಮತ್ತು ವಿಸರ್ಜನೆಗೆ ಅವಕಾಶ ನೀಡಬಾರದು ಎಂದು ಸಚಿವ ಈಶ್ವರ...

ಭಾರತ ಹಿಂದೂ ರಾಷ್ಟ್ರವಾದರೆ ದಮನಿತರು ಮತ್ತೆ ಗುಲಾಮರಾಗಬೇಕಾಗುತ್ತದೆ ಸಚಿವ ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ

ಭಾರತ ಹಿಂದೂ ರಾಷ್ಟ್ರವಾದರೆ ದಮನಿತರು ಮತ್ತೆ ಗುಲಾಮರಾಗಬೇಕಾಗುತ್ತದೆ ಸಚಿವ ಯತೀಂದ್ರ ಸಿದ್ದರಾಮಯ್ಯ ಎಚ್ಚರಿಕೆ

by Shwetha
August 7, 2026
0

ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಪ್ರಯತ್ನವು ಈ ದೇಶಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಲಿದೆ. ಇದು ಕೇವಲ ಧಾರ್ಮಿಕ ಬದಲಾವಣೆಯಲ್ಲ, ಬದಲಾಗಿ ಶೋಷಣೆಯ ಹಳೆಯ ವ್ಯವಸ್ಥೆಯನ್ನು ಮರಳಿ ತರುವ...

ಸಭಾಪತಿ ಸ್ಥಾನಕ್ಕೆ ರಾಜೀನಾಮೆಗೆ ಬಸವರಾಜ ಹೊರಟ್ಟಿ ಒಪ್ಪಿಗೆ

ಸಭಾಪತಿ ಸ್ಥಾನಕ್ಕೆ ರಾಜೀನಾಮೆಗೆ ಬಸವರಾಜ ಹೊರಟ್ಟಿ ಒಪ್ಪಿಗೆ

by Shwetha
August 7, 2026
0

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಒಪ್ಪಿರುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,...

ಚಿತಾಭಸ್ಮ ಪಡೆಯಲು ನಮಗೆ ಟೈಮಿಲ್ಲ- 5001 ರೂಪಾಯಿ ಕೊಟ್ಟು ಕೈತೊಳೆದುಕೊಂಡ ಮಗಳು : ಹೆತ್ತ ತಂದೆಯ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಕಟುಕ ಹೆಣ್ಣು ಮಕ್ಕಳು

ಚಿತಾಭಸ್ಮ ಪಡೆಯಲು ನಮಗೆ ಟೈಮಿಲ್ಲ- 5001 ರೂಪಾಯಿ ಕೊಟ್ಟು ಕೈತೊಳೆದುಕೊಂಡ ಮಗಳು : ಹೆತ್ತ ತಂದೆಯ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್‌ನಲ್ಲಿ ವೀಕ್ಷಿಸಿದ ಕಟುಕ ಹೆಣ್ಣು ಮಕ್ಕಳು

by Shwetha
August 7, 2026
0

ಸೋನಿಪತ್: ಮನುಷ್ಯ ಸಂಬಂಧಗಳು ಎಷ್ಟು ಯಾಂತ್ರಿಕವಾಗಿವೆ ಎನ್ನುವುದಕ್ಕೆ ಹರ್ಯಾಣದ ಸೋನಿಪತ್‌ನಲ್ಲಿ ನಡೆದ ಈ ಕರುಣಾಜನಕ ಘಟನೆಯೇ ಸಾಕ್ಷಿ. ತಮ್ಮ ಇಡೀ ಜೀವನವನ್ನೇ ಮಕ್ಕಳ ಭವಿಷ್ಯಕ್ಕಾಗಿ ಮುಡಿಪಾಗಿಟ್ಟ ತಂದೆಯೊಬ್ಬರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram