ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಸಿನಿಮಾ ನಟ – ನಟಿಯರು ರಾಜಕೀಯಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಹಲವು ದಿನಗಳಿಂದ ಸುದೀಪ್ ಪಾಲಿಟಿಕ್ಸ್ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಲವು ಪ್ರಮುಖ ರಾಜಕೀಯ ಮುಖಂಡರ ಜೊತೆ ಒಡನಾಟ ಹೊಂದಿರುವ ಸುದೀಪ್ ಯಾವ ಪಾರ್ಟಿ ಸೇರಲಿದ್ದಾರೆ ಎಂಬುವುದು ಕೂಡ ಕುತೂಹಲ ಮೂಡಿಸಿತ್ತು. ಈ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅನೇಕ ರಾಜಕೀಯ ನಾಯಕರು ಸುದೀಪ್ ಅವರನ್ನು ಭೇಟಿ ಮಾಡಿ ಸೆಳೆಯಲು ಯತ್ನಿಸುತ್ತಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್ ರಾಜಕೀಯ ಪ್ರವೇಶ, ಆ ಪಕ್ಷದ ಬಲವನ್ನು ಹೆಚ್ಚಿಸುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನು ಅರಿತ ನಾಯಕರು ಕಿಚ್ಚನ ಮನೆಯ ಬಾಗಿಲು ತಟ್ಟಿದ್ದಾರಂತೆ ಎನ್ನಲಾಗಿದೆ.
ನಟ ಸುದೀಪ್ ಬಿಜೆಪಿ ಪರ ಆಸಕ್ತಿ ತೋರಿದ್ದಾರಂತೆ ಎನ್ನಲಾಗಿದೆ. ಕಮಲದ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿದೆಯಂತೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಸುದೀಪ್ ಅವರು ನೇರವಾಗಿ ರಾಜಕೀಯಕ್ಕೆ ಪ್ರವೇಶ ಮಾಡ್ತಾರೋ ಅಥವಾ ಕೇವಲ ಬಿಜೆಪಿ ಪಕ್ಷದ ಪರ ಪ್ರಚಾರ ರಾಯಭಾರಿ ಆಗಿರುತ್ತಾರೋ ಎಂಬ ಬಗ್ಗೆ ನಾಳೆ ಅಂದರೆ ಏ. 5ರಂದು ಸ್ಪಷ್ಟನೆ ಸಿಗಲಿದೆ ಎನ್ನಲಾಗುತ್ತಿದೆ.








