ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ಬಿಜೆಪಿ ತೆಗೆದಿದೆ. ಹೀಗಾಗಿ ಅವರ ಶಾಪ ತಟ್ಟುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ಪಡಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಜಾನ್ ಇರುವಾಗಲೇ ಮೀಸಲಾತಿ ತೆಗೆದಿದ್ದಾರೆ. ಅವರು ಈಗ ಒಂದು ತಿಂಗಳು ಉಪವಾಸ ಮಾಡುತ್ತಿದ್ದಾರೆ. ಅವರ ಆಭಕ್ತಿಯೇ ಸರ್ಕಾರವನ್ನು ತೆಗೆದು ಹಾಕುತ್ತದೆ. ನಾವ್ಯಾರು ತೆಗೆಯಬೇಕಿಲ್ಲ. ದೇವರೇ ಬಿಜೆಪಿ ಸರ್ಕಾರವನ್ನು ತೆಗೆಯುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








