ಧಾರವಾಡ : ಮುಖ್ಯ ಪೊಲೀಸ್ ಪೇದೆಯೊಬ್ಬರು ವರ್ಗಾವಣೆ ನೀತಿ ವಿರುದ್ಧ ಬೇಸತ್ತು ರಾಜೀನಾಮೆ ಪತ್ರ ನೀಡಿದ್ದು, ಸದ್ಯ ಆ ಪತ್ರ ವೈರಲ್ ಆಗುತ್ತಿದೆ.
ಡಿಸಿಆರ್ ಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ ಸ್ಟೇಬಲ್ ಒಬ್ಬರು ವರ್ಗಾವಣೆ (Transfer) ನೀತಿಗೆ ಬೇಸತ್ತು ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದಾರೆ. ಸದ್ಯ ಅವರ ಪತ್ರ ವೈರಲ್ ಆಗಿದೆ.
ಆರ್.ಎನ್. ಗೊರಗುದ್ದಿ ಸ್ವಯಂ ನಿವೃತ್ತಿಗೆ ಮುಂದಾದ ಸಿಬ್ಬಂದಿ ಎನ್ನಲಾಗಿದ್ದು, ಅವರನ್ನು ಐದು ವರ್ಷವಾಗುವ ಮೊದಲೇ ಅಳ್ನಾವರ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಬಳಿಕವೂ ಡಿಪಿಒಗೆ ಕರ್ತವ್ಯದ ಮೇಲೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಬೇಸರ ವ್ಯಕ್ತಪಡಿಸಿ ರಾಜೀನಾಮೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಹಾಗೂ ತಾಯಿ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ನಾನೊಬ್ಬನೇ ಸರ್ಕಾರಿ ನೌಕರನಾಗಿದ್ದೇನೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲೆಯೇ ಇದೆ. ಕುಂದುಕೊರತೆಗಳನ್ನು ನಿಮ್ಮ ಮುಂದೆ ಹೇಳಲು ಬಂದಾಗ ತಾವು ಅಮಾನತು ಮಾಡುವ ಹಾಗೂ ಸೇವೆಯಿಂದ ವಜಾ ಮಾಡುವ ಮನಸ್ಥಿತಿ ಹೊಂದಿದ್ದೀರಿ. ಹೀಗಾಗಿ ಭಯದಿಂದಲೇ ಕೆಲಸ ನಿರ್ವಹಿಸಿದ್ದೇನೆ ಎಂದು ರಾಜೀನಾಮೆಯಲ್ಲಿ ಉಲ್ಲೇಖಿಸಿದ್ದಾರೆ.








