ಹಿಂದಿ ಬಿಗ್ ಬಾಸ್ ನಲ್ಲಿ ಸಲ್ಮಾನ್ ಖಾನ್ ಯಾವಾಗಲೂ ಇದು ನಡೆಯಬಾರದು ಎಂದು ಹೇಳುತ್ತಿದ್ದರು. ಆದರೆ, ಸದ್ಯ ಅದೇ ನಡೆದು ಬಿಟ್ಟಿದೆ.
ಬಿಗ್ ಬಾಸ್ ಮನೆಯಲ್ಲಿನ ಇಬ್ಬರು ಸ್ಪರ್ಧಿಗಳು ಬರೋಬ್ಬರಿ 30 ಸೆಕೆಂಡ್ ಗಳ ಲಿಪ್ ಲಾಕ್ ಮಾಡಿದ್ದಾರೆ. ಈ ಮುತ್ತಿನಾಟಕ್ಕೆ ಪ್ರೇಕ್ಷಕರೇ ತಲೆ ತಿರುಗಿ ಬೀಳುವಂತಾಗಿದೆ. ಇದು ಫ್ಯಾಮಿಲಿ ಶೋ ಎಲ್ಲೆ ಮೀರಬೇಡಿ ಎಂದು ಸಲ್ಮಾನ್ ಖಾನ್ ಹಲವು ಬಾರಿ ಹೇಳಿದರೂ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಈ ಘಟನೆ ಕಂಡು ಪ್ರೇಕ್ಷಕರು ಛೀಮಾರಿ ಹಾಕುತ್ತಿದ್ದಾರೆ.
ಆಕಾಂಕ್ಷಾ (Akanksha) ಮತ್ತು ಜದ್ (Jad) ಏಕಾಂತದಲ್ಲಿ ಕೂತಿದ್ದರು. ಇನ್ನೊಂದೆಡೆ ಪೂಜಾ ಭಟ್ (Pooja Bhatt) ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಈ ಸಂದರ್ಭದಲ್ಲಿ ಸಚ್ ದೇವ್, ‘ಆಕಾಂಕ್ಷ ಅವರು ಜಿದ್ ಗೆ ಕಿಸ್ ಮಾಡಬೇಕು’ ಎಂದು ಸವಾಲು ಹಾಕಿದರು. ಆದರೆ, ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತ ಅಲ್ಲ ಎಂದು ಅಸಿತ್ತು. ಏಕೆಂದರೆ, ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆಗ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ (Lip Lock) ನಲ್ಲೇ ಇದ್ದರು.
ಇದನ್ನು ನೋಡಿ ಪೂಜಾ ಭಟ್ ಅವರಿಗೆ ಇರಿಸು ಮುರಿಸಾಯಿತು. ಥೂ… ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರಿಂದ ಪೂಜಾ ಕೂಗು ಯಾರಿಗೂ ಕೇಳಿಸಲಿಲ್ಲ. ಸದ್ಯ ಈ ಲಿಪ್ ಲಾಕ್ ವಿಡಿಯೋ ವೈರಲ್ ಆಗಿದೆ. ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಡ್ಡೆಗಳು ಎಂಜಾಯ್ ಮಾಡುತ್ತಿವೆ.








