ಯಾದಗಿರಿ : ಸಿಲಿಕಾನ್ ಸಿಟಿಯಿಂದ ಕಲಬುರಗಿಗೆ (Kalaburagi) ಶವ ಸಾಗಿಸುತ್ತಿದ್ದ ಅಂಬುಲೆನ್ಸ್ (Ambulance) ಪಲ್ಟಿಯಾಗಿರುವ ಘಟನೆ ಯಾದಗಿರಿಯ ಶೆಟ್ಟಿಹಳ್ಳಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಲಬುರಗಿಯ ರಾಜು (45) ಶನಿವಾರ ಬೆಂಗಳೂರಿನಲ್ಲಿ (Bengaluru) ಸಾವನ್ನಪ್ಪಿದ್ದರು. ರಾಜು ಅವರ ಶವವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಯಾದಗಿರಿಯ (Yadagiri) ಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದು ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಂತರ ಕುಟುಂಬಸ್ಥರು ಇನ್ನೊಂದು ವಾಹನದಲ್ಲಿ ಶವ ಕೊಂಡೊಯ್ದಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








