ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಟಿ20ಯ ಎರಡನೇ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವುದೇ ಭಾರತ?

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯ ಸೋತ ಭಾರತ

Author2 by Author2
August 5, 2023
in Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

ಅತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿದ್ದ ಟೀಂ ಇಂಡಿಯಾ, ಇದೀಗ 2ನೇ ಪಂದ್ಯದಲ್ಲಿ ಬಲಿಷ್ಠ ಕಮ್‌ಬ್ಯಾಕ್‌ ಮಾಡುವ ಮೂಲಕ ಗೆಲುವಿನ ಲಯ ಕಂಡುಕೊಳ್ಳಲು ಸಜ್ಜಾಗಿದೆ.

ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಆ.6ರಂದು ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ 4 ರನ್‌ಗಳ ವಿರೋಚಿತ ಸೋಲು ಕಂಡಿದ್ದ ಭಾರತ, 2ನೇ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. ಪ್ರಮುಖವಾಗಿ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಟೀಂ ಇಂಡಿಯಾಕ್ಕೆ ಎದುರಾಗಿದೆ.

Related posts

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

August 4, 2026
auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

August 4, 2026

ಮೊದಲ ಪಂದ್ಯದಲ್ಲಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಅತಿಥೇಯರನ್ನ 149 ರನ್‌ಗಳಿಗೆ ಕಟ್ಟಿಹಾಕಿದ್ದರು. ಆದರೆ 150 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಭಾರತ, ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಸೋಲಿನ ಆಘಾತ ಅನುಭವಿಸಿತು. ಇದರಿಂದಾಗಿ ಐದು ಪಂದ್ಯಗಳ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ 1-0 ಮುನ್ನಡೆ ಸಾಧಿಸಿದೆ. ಆದರೆ ಸರಣಿಯಲ್ಲಿ ಸ್ಟ್ರಾಂಗ್‌ ಕಮ್‌ಬ್ಯಾಕ್‌ ಮಾಡಬೇಕಾದರೆ ಟೀಂ ಇಂಡಿಯಾ ಆಟಗಾರರು ಮೊದಲ ಪಂದ್ಯದ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ.

ಪ್ರಮುಖವಾಗಿ ಭಾರತದ ಬ್ಯಾಟರ್‌ಗಳ ಮೇಲೆ ಹೆಚ್ಚಿನ ಒತ್ತಡವಿದ್ದು, ಹಿರಿಯ ಆಟಗಾರರ ವಿಶ್ರಾಂತಿ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಬ್ಯಾಟರ್‌ಗಳಾದ ಇಶಾನ್‌ ಕಿಶನ್‌, ಶುಭ್ಮನ್‌ ಗಿಲ್‌, ಸಂಜೂ ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌ ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ ಅವರುಗಳ ಮೇಲೆ ಒತ್ತಡ ಹೆಚ್ಚಿದೆ. ಇನ್ನೂ ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿದ್ದ ತಿಲಕ್‌ ವರ್ಮ, 2ನೇ ಪಂದ್ಯದಲ್ಲೂ ಇದೇ ಫಾರ್ಮ್‌ ಮುಂದುವರಿಸಬೇಕಾದ ಅಗತ್ಯವಿದೆ.

ಈ ನಡುವೆ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಇಶಾನ್‌ ಕಿಶನ್‌ ಅವರನ್ನ 2ನೇ ಪಂದ್ಯದಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ಇವರ ಸ್ಥಾನದಲ್ಲಿ ಮತ್ತೋರ್ವ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಅವರನ್ನ ಕಣಕ್ಕಿಳಿಸುವ ನಿರೀಕ್ಷೆ ಇದೆ. ಇಲ್ಲವಾದಲ್ಲಿ ಮೊದಲ ಟಿ20 ಪಂದ್ಯದಲ್ಲಿ ಆಡಿದ್ದ ತಂಡದೊಂದಿಗೆ ಮುಂದುವರೆಯುವ ಸಾಧ್ಯತೆ ಸಹ ಇದೆ. ಉಳಿದಂತೆ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಯಾವುದೇ ಸಾಧ್ಯತೆ ಇಲ್ಲ.

ಇನ್ನೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ಮೂಲಕ ಮೊದಲ ಟಿ20 ಪಂದ್ಯದಲ್ಲಿ 4 ರನ್‌ಗಳ ಗೆಲುವು ಸಾಧಿಸಿದ್ದ ವೆಸ್ಟ್‌ ಇಂಡೀಸ್‌, ಜಯದ ಹಾದಿಯಲ್ಲಿ ಮುನ್ನಡೆಯುವ ತವಕದಲ್ಲಿದೆ. ಪ್ರವಾಸಿ ಟೀಂ ಇಂಡಿಯಾ ಬೌಲರ್‌ಗಳ ಉತ್ತಮ ಪ್ರದರ್ಶನದ ನಡುವೆಯೂ ಪೈಪೋಟಿಯ ಮೊತ್ತ ಕಲೆಹಾಕಿದ್ದ ವಿಂಡೀಸ್‌, ಬ್ಯಾಟಿಂಗ್‌ ವಿಭಾಗದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಪ್ರವಾಸಿ ತಂಡಕ್ಕೆ ಮತ್ತಷ್ಟು ಪ್ರಬಲ ಪೈಪೋಟಿ ನೀಡಬಹುದು.

Tags: sports karnatakateam indiawest indiesWI v INDWill India take revenge in the second match of T20?
ShareTweetSendShare
Join us on:

Related Posts

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

by admin
August 4, 2026
0

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ...

auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

by admin
August 4, 2026
0

ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್,...

jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

by admin
August 3, 2026
0

  ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್  ಬೌಲರ್ ಮತ್ತೆ ಗಾಯದಿಂದ ಬಳುತ್ತಿದ್ದಾರೆ. ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಮುಂಬರುವ ಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ....

glasgow-commonwealth-games-2026-india-medals-nita-ambani-congratulates

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಮೋಘ ಸಾಧನೆಗೆ ನೀತಾ ಅಂಬಾನಿ ಅಭಿನಂದನೆ

by admin
August 3, 2026
0

  ಮುಂಬೈ, ಆಗಸ್ಟ್ 03, 2026: ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳ ಸಹಿತ ಒಟ್ಟು...

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram