ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

BCCI Vs PCB – ದೊಡ್ಡಣ ಬಿಸಿಸಿಐಗೆ ತಲೆಬಾಗಿದ ಪಾಕ್ ಕ್ರಿಕೆಟ್ ಮಂಡಳಿ..!

admin by admin
August 7, 2023
in Sports, ಕ್ರಿಕೆಟ್, ಕ್ರೀಡೆ
BCCI
Share on FacebookShare on TwitterShare on WhatsappShare on Telegram

BCCI Vs PCB – ದೊಡ್ಡಣ ಬಿಸಿಸಿಐಗೆ ತಲೆಬಾಗಿದ ಪಾಕ್ ಕ್ರಿಕೆಟ್ ಮಂಡಳಿ..!

ಟೀಮ್ ಇಂಡಿಯಾ ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಆಡಲ್ಲ. ಭಾರತೀಯ ಕ್ರಿಕೆಟ್ ಆಟಗಾರರು ಬೇರೆ ಯಾವುದೇ ವಿದೇಶಿ ಲೀಗ್‍ನಲ್ಲಿ ಆಡುವಂತಿಲ್ಲ. ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಟ್ಟಪ್ಪಣೆ.

Related posts

hockey-india-saffron-jersey-controversy

Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!

July 31, 2026
ajinkya-rahane-retirement-gabba-hero-cricket-journey

Team India -ಆಲೋಚನೆಯಿಂದ ಆಲಾಪನೆಯವರೆಗೆ.. ಜಿಂಕ್ಸ್ ದಿ ಜಂಟಲ್‍ಮ್ಯಾನ್ ಕ್ರಿಕೆಟರ್… ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ “ಗಬ್ಬಾ”ದ ಗರಿಮೆಯ ನಾಯಕ..!

July 30, 2026

ಹೌದು, ಬಿಸಿಸಿಐ ಯಾರ ಮಾತಿಗೂ ಮಣೆ ಹಾಕಲ್ಲ. ಐಸಿಸಿಗೂ ಡೋಂಟ್ ಕೇರ್ ಎನ್ನುತ್ತಿರೋ ಬಿಸಿಸಿಐ, ವಿಶ್ವ ಕ್ರಿಕೆಟ್‍ನ ದೊಡ್ಡಣ್ಣ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಕಾರಣ ಬಿಸಿಸಿಐನ ಮನಿ ಪವರ್ ಮತ್ತು ಟೀಮ್ ಇಂಡಿಯಾ ಆಟಗಾರರ ಜನಪ್ರಿಯತೆ.
ವಿಶ್ವ ಕ್ರಿಕೆಟ್ ಅನ್ನು ಕೈ ಬೆರಳಿನಲ್ಲಿ ಆಡಿಸುತ್ತಿರೋ ಬಿಸಿಸಿಐ ಬೆಳೆದು ಬಂದ ರೀತಿಯೇ ರೋಚಕ. ಅಂದ ಹಾಗೇ ಬಿಸಿಸಿಐನ ಬೊಕ್ಕಸಕ್ಕೆ ನೀರಿನಂತೆ ದುಡ್ಡು ಹರಿದು ಬರುವಂತೆ ಮಾಡಿದ್ದು ದಿ. ಜಗಮೋಹನ್ ದಾಲ್ಮಿಯ ಅವರ ದೂರದೃಷ್ಟಿ. ಹಾಗೇ ಪ್ರೇಕ್ಷಕರನ್ನು ಆಕರ್ಷಿಸುವಂತೆ ಮಾಡಿದ್ದು ಸಚಿನ್ ತೆಂಡುಲ್ಕರ್ ಅವರ ಮನಮೋಹಕ ಆಟ.

ಪ್ರತಿ ಕ್ಷಣ, ಪ್ರತಿ ರನ್, ಪ್ರತಿ ಬೌಂಡರಿ, ಪ್ರತಿ ಸಿಕ್ಸರ್, ಪ್ರತಿ ವಿಕೆಟ್, ಪ್ರತಿ ಓವರ್‍ನಲ್ಲೂ ಲಕ್ಷಾಂತರ ರೂಪಾಯಿಯ ಜಾಹಿರಾತು. ಜೊತೆಗೆ ಟಿವಿ ನೇರ ಪ್ರಸಾರ ಹಕ್ಕು, ಈಗ ಡಿಜಿಟಲ್ ಹಕ್ಕು ಹೀಗೆ ವಿಶ್ವ ಕ್ರಿಕೆಟ್ ಅನ್ನು ದೊಡ್ಡ ಉದ್ಯಮವಾಗಿ ಬೆಳೆಸಿದ್ದು ಬಿಸಿಸಿಐ. ಆ ಕಾರಣಕ್ಕಾಗಿಯೇ ಇಂದು ಐಸಿಸಿಯಾಗಲಿ, ಬೇರೆ ಯಾವುದೇ ಕ್ರಿಕೆಟ್ ಮಂಡಳಿಯೇ ಆಗಿರಲಿ, ಬಿಸಿಸಿಐ ಅನ್ನು ಎದುರುಹಾಕೋ ದುಸ್ಸಾಹಸಕ್ಕೆ ಕೈಹಾಕಲ್ಲ. ಈ ಎಲ್ಲಾ ಕಾರಣದಿಂದಾಗಿಯೇ ವಿಶ್ವ ಕ್ರಿಕೆಟ್‍ನಲ್ಲಿ ಬಿಸಿಸಿಐ ಅಷ್ಟೊಂದು ಪವರ್‍ಫುಲ್.

ಅಂದ ಹಾಗೇ ಈ ಎಲ್ಲಾ ವಿಚಾರಗಳು ಗೊತ್ತಿದ್ರೂ ಬಿಸಿಸಿಐ ವಿರುದ್ಧ ಪಾಕ್ ಕ್ರಿಕೆಟ್ ಮಂಡಳಿ ಬೊಬ್ಬೆ ಹೊಡೆಯುತ್ತಿದೆ. ಬಿಸಿಸಿಐ ಎದುರು ಸದಾ ಕಿರಿಕ್ ಮಾಡ್ತಿರೋ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಕಂಪ್ಲೇಟ್ ಕೊಟ್ರೂ ಪ್ರಯೋಜನವೇನು ಆಗುತ್ತಿಲ್ಲ. ಕೇಂದ್ರ ಸರ್ಕಾರದ ಅಣತಿಯಂತೆ ಬಿಸಿಸಿಐ ಪಾಕ್ ನೆಲದಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಇದಕ್ಕೆ ರಾeತಾಂತ್ರಿಕ ಕಾರಣ ಮೇಲ್ನೋಟಕ್ಕೆ ಕಂಡು ಬಂದ್ರೂ ವಾಸ್ತವ ಬೇರೆನೇ ಇದೆ.

ನಿಜ, ವಿಶ್ವ ಕ್ರಿಕೆಟ್‍ನಲ್ಲಿ ಇಂಡೋ -ಪಾಕ್ ಕದನವನ್ನು ಬದ್ಧವೈರಿಗಳ ಕದನ ಅಂತಲೇ ಬಣ್ಣಿಸಲಾಗುತ್ತಿದೆ. ಇಲ್ಲಿ ಸೋಲು- ಗೆಲುವಿಗಿಂತ ಪ್ರತಿಷ್ಠೆಯೇ ಮುಖ್ಯವಾಗಿರುತ್ತೆ. ಜೊತೆ ಹರಿದಾಡುತ್ತಿರೋ ದುಡ್ಡು ಮತ್ತು ಬೆಟ್ಟಿಂಗ್ ಪ್ರಪಂಚ. ಕಾಣದ ಕೈಗಳ ಕೈವಾಡ. ಹೀಗಾಗಿ ಭಾರತ ಪಾಕ್ ನೆಲದಲ್ಲಿ ಆಡುವುದಕ್ಕೆ ಮನಸ್ಸು ಮಾಡ್ತಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡ್ತಿರೋ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಸಂಬಂಧವೇ ಬೇಡ ಎಂಬುದು ಕೂಡ ಕೇಂದ್ರ ಸರ್ಕಾರದ ಬದ್ಧ ನಿಲುವು ಆಗಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯವೂ ಇಲ್ಲ.
ಇದೀಗ ಏಷ್ಯಾಕಪ್ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖಭಂಗ ಅನುಭವಿಸಿದೆ. ಈ ಮೊದಲು ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜಿಸಲಾಗಿತ್ತು. ಆದ್ರೆ ಬಿಸಿಸಿಐ ಪಾಕ್ ನೆಲದಲ್ಲಿ ಆಡಲ್ಲ ಎಂದು ಆಕ್ಷೇಪ ಮಾಡಿತ್ತು. ಈ ವಿಚಾರವಾಗಿ ಪಿಸಿಬಿ ಐಸಿಸಿಗೂ ಕಂಪ್ಲೆಂಟ್ ಮಾಡಿತ್ತು. ಆದ್ರೆ ಏನು ಪ್ರಯೋಜನವಾಗಿಲ್ಲ. ಕೊನೆಗೆ ಪಾಕಿಸ್ತಾನ ಏಕದಿನ ವಿಶ್ವಕಪ್‍ನಲ್ಲಿ ಭಾರತದಲ್ಲಿ ಆಡಲ್ಲ ಎಂದು ಬ್ಲ್ಯಾಕ್‍ಮೇಲ್ ಮಾಡಿತ್ತು. ಆದ್ರೆ ಪಿಸಿಬಿಯ ಬೆದರಿಕೆಗಳಿಗೆ ಸೊಪ್ಪು ಹಾಕದ ಬಿಸಿಸಿಐ ಏಷ್ಯಾಕಪ್ ಟೂರ್ನಿಯನ್ನೇ ಶಿಫ್ಟ್ ಮಾಡುವಂತೆ ಮಾಡಿತ್ತು.
ಇದೀಗ ಪಿಸಿಬಿಗೂ ಮನವರಿಕೆಯಾಗಿದೆ. ಬಿಸಿಸಿಐ ಜೊತೆಗೆ ಕಿರಿಕ್ ಮಾಡಿಕೊಂಡ್ರೆ ಪಾಕ್ ಕ್ರಿಕೆಟ್ ಮಂಡಳಿ ದಿವಾಲಿಯಾಗುತ್ತೆ ಎಂಬುದು ಗೊತ್ತಾಗಿದೆ. ಹೀಗಾಗಿಯೇ ಇದೀಗ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‍ನಲ್ಲಿ ಆಡುವುದಾಗಿ ತಿಳಿಸಿದೆ. ಅಷ್ಟರ ಮಟ್ಟಿಗೆ ಬಿಸಿಸಿಐ ಪಾಕ್ ಕ್ರಿಕೆಟ್ ಮಂಡಳಿಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವಂತೆ ಮಾಡಿದೆ. ಇದು ನಮ್ಮ ಭಾರತದ ಪವರ್. ಇದು ನವಭಾರತದ ಹೆಮ್ಮೆ.
ಆದ್ರೆ ಈಗ ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಜವಾಬ್ದಾರಿ ಇದೆ. ಪಾಕ್ ವಿರುದ್ಧ ಸೋಲಬಾರದು. ಸೋತು ತಲೆಬಾಗಬಾರದು. ಏಕದಿನ ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ಇಲ್ಲಿಯವರೆಗೆ ಸೋತಿಲ್ಲ. ಕಳೆದ ಟಿ-20 ವಿಶ್ವಕಪ್‍ನಲ್ಲಿ ಸೋತಿರೋ ಟೀಮ್ ಇಂಡಿಯಾ, ಏಕದಿನ ವಿಶ್ವಕಪ್‍ನ ಪರಂಪರೆಯನ್ನು ಉಳಿಸಿಕೊಳ್ಳಬೇಕಾದ ಮಹತ್ತರವಾದ ಹೊಣೆಗಾರಿಕೆ ರೋಹಿತ್ ಶರ್ಮಾ ಬಳಗಕ್ಕಿದೆ.

Tags: Asia Cup 2023bcciCricketindian govtPCBPM MODIsaasksha tvteam indiaworldcup 2023
ShareTweetSendShare
Join us on:

Related Posts

hockey-india-saffron-jersey-controversy

Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!

by admin
July 31, 2026
0

ಕೇಸರಿ ಬಣ್ಣ - ಧೈರ್ಯ, ತ್ಯಾಗ, ಶಕ್ತಿ ಮತ್ತು ಸೇವಾಭಾವದ ಪ್ರತೀಕ ನೀಲಿ ಬಣ್ಣ - ಶಾಂತಿ, ವಿಶ್ವಾಸ, ಜ್ಞಾನ ಮತ್ತು ಸ್ಥಿರತೆಯ ಸಂಕೇತ. ಈಗ ಹೇಳಿ.....

ajinkya-rahane-retirement-gabba-hero-cricket-journey

Team India -ಆಲೋಚನೆಯಿಂದ ಆಲಾಪನೆಯವರೆಗೆ.. ಜಿಂಕ್ಸ್ ದಿ ಜಂಟಲ್‍ಮ್ಯಾನ್ ಕ್ರಿಕೆಟರ್… ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ “ಗಬ್ಬಾ”ದ ಗರಿಮೆಯ ನಾಯಕ..!

by admin
July 30, 2026
0

ಏಳರ ಹರೆಯದಲ್ಲಿ ಶುರುವಾಗಿತ್ತು ಕ್ರಿಕೆಟ್ ಮೇಲಿನ ಆಕರ್ಷಣೆ. 17 ನೇ ಹರೆಯದವರೆಗೆÀ ಮಾಡಿದ್ದು ಬರೀ ಆಲೋಚನೆ. 23ರ ಪ್ರಾಯದ ತನಕ ಮಾಡ್ತಾ ಇದ್ದದ್ದು ಆರಾಧನೆ. 35 ವರ್ಷಗಳವರೆಗೆ...

neeraj-chopra-vs-arshad-nadeem-commonwealth-games-2026-javelin

CWG – 2026 ಕಾಮನ್‍ವೆಲ್ತ್ ಗೇಮ್ಸ್ – ನೀರಜ್ ವರ್ಸಸ್ ನದೀಮ್… ಯಾರ ಕೊರಳಿಗೆ ಚಿನ್ನ. ?

by admin
July 30, 2026
0

ಅದು ಯಾವ ಕ್ರೀಡೆಯೇ ಆಗಿರಲಿ. ಭಾರತ ಮತ್ತು ಪಾಕಿಸ್ತಾನ ಅಂದ್ರೆ ಆ ಸ್ಪರ್ಧೆಯ ರೋಚಕತೆಯೇ ಬೇರೆ. ಇಲ್ಲಿ ಸೋಲು - ಗೆಲುವಿನ ಫಲಿತಾಂಶಕ್ಕಿಂತ ದೇಶಾಭಿಮಾನದ ಪ್ರತಿಷ್ಠೆಯೇ ಮೇಳೈಸುತ್ತದೆ....

sathyanarayana-para-athletics-coach-success-story

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!

by admin
July 29, 2026
0

ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ " ಸತ್ಯ " ಸಾಧನೆಯ ಯಶೋಗಾಥೆ..! ಸರಿ...

saransh-jain-test-call-up-india-srilanka-2026

Teamindia- ತಂದೆಯ ಕನಸನ್ನು ನನಸು ಮಾಡಿರುವ 33ರ ಹರೆಯದ ಸರನ್ಶ್..!

by admin
July 29, 2026
0

"ನೀನು ಇನ್ನೂ ಚೆನ್ನಾಗಿ ಆಡಿದ್ರೆ ನಾನು ಬೇಗ ಗುಣಮುಖನಾಗುತ್ತೇನೆ". ಇದು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ತಂದೆ ತನ್ನ ಮಗನಿಗೆ ಬರೆದಿರುವ ಕೈಪಿಡಿಯ ಬರಹ. ತಂದೆಯ ಆಸೆಯಂತೆ ಮಗ ಇಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram