ಬೆಂಗಳೂರು: ಮಾಸ್ಕ್ ಧರಿಸದೇ ವಿಧಾನಸೌಧಕ್ಕೆ ತೆರಳುತ್ತಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.
ಪ್ರತಿಯೊಬ್ಬರು ಮನೆಯಿಂದ ಹೊರಬಂದ ಮೇಲೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ಮಾಡಿವೆ. ಆದರೆ, ನಾನು ಸಂಸದ, ನನ್ನನ್ನು ಯಾರು ತಡೆಯುತ್ತಾರೆಂದುಕೊಂಡು ಬಂದಿದ್ದರೋ ಏನೋ. ಪ್ರತಾಪ್ ಸಿಂಹ ಅವರಿಗೆ ವಿಧಾನಸೌಧಕ್ಕೆ ಪ್ರವೇಶ ನಿರಾಕರಿಸಿ ವಾಪಸ್ ಕಳಿಸಲಾಗಿದೆ.
ವಿಧಾನಸೌಧ ಪ್ರವೇಶ ಮಾಡುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಎಲ್ಲಾ ಪ್ರವೇಶ ದ್ವಾರಗಳಲ್ಲಿಯೂ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣಾಂಶ ಪರೀಕ್ಷೆ ಮಾಡಿದ ನಂತರ ಸ್ಯಾನಿಟೈಸರ್ ಹಾಕಲಾಗುತ್ತದೆ. ಆದರೆ ಪ್ರತಾಪ್ ಸಿಂಹ ಬಂದಾಗ ಮಾತ್ರ ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ ಪ್ರತಾಪ್‍ಸಿಂಹ ವಿಧಾನಸೌಧ ಪ್ರವೇಶ ನಿರಾಕರಿಸಿದ ಸಿಬ್ಬಂದಿ, ಮಾಸ್ಕ್ ಧರಿಸಿ ಬರುವಂತೆ ಸೂಚಿಸಿ ಕಳಿಸಿದ್ದಾರೆ. ಆದ್ರೆ, ವಾಪಸ್ ಹೋದ ಪ್ರತಾಪ್ ಸಿಂಹ ಮತ್ತೆ ವಿಧಾನಸೌಧದತ್ತ ಬರಲಿಲ್ಲ ಎನ್ನಲಾಗಿದೆ.
ವಿಧಾನಸೌಧದ ಹಾಗೂ ಗೃಹ ಕಚೇರಿ ಕೃಷ್ಣಾಗೋ ಕೊರೊನಾ ವೈರಸ್ ಹರಡಿರುವ ಭೀತಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.








