ರಾಯಚೂರು ಜಿಲ್ಲೆಯಲ್ಲಿ ಬರೀ ಮೈಯಲ್ಲಿ ಹೊಂಚು ಹಾಕುವ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿ ಬದುಕುವಂತಾಗಿದೆ.
ಮುಖಕ್ಕೆ ಮುಖಗವುಸು ಹಾಕಿಕೊಂಡು ಗುರುತು ಮರೆ ಮಾಡಿ, ಚೆಡ್ಡಿ ತೊಟ್ಟು, ಬರೀ ಮೈಯಲ್ಲಿ ಬಂದಿದ್ದ ಮೂವರು ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂಟೆ ಮನೆ ಹಾಗೂ ಶ್ರೀಮಂತರಿರುವ ಮನೆಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿದೆ ಎನ್ನಲಾಗುತ್ತಿದೆ.
ರಾಯಚೂರಿನ ಕೃಷ್ಣ ಮೆಡೋಸ್ ನಲ್ಲಿ ಬರೀ ಮೈಯಲ್ಲಿ ಚೆಡ್ಡಿ ಧರಿಸಿದ್ದ ಮೂವರು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮಾರಕಾಸ್ತ್ರಗಳಿಂದ ಕಳ್ಳತನ ಪ್ರಯತ್ನ ಮಾಡಿದ್ದಾರೆ. ಕೈಯಲ್ಲಿ ಹರಿತವಾದ ಚಾಕು ಹಾಗೂ ಇನ್ನಿತರ ವಸ್ತುಗಳಿಂದ ಬಾಗಿಲು ಮುರಿದು ಕಳ್ಳತನಕ್ಕೆ ಮುಂದಾಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ನ ಸಮಯ ಪ್ರಜ್ಞೆಯಿಂದ ಕಳ್ಳರು ಓಡಿ ಹೋಗಿದ್ದಾರೆ.
ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಇವರ ಬೆನ್ನು ಬಿದ್ದಿದ್ದಾರೆ.








