ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಸರ್ವಪಕ್ಷ ಸಭೆಯಲ್ಲಿ ನಾಯಕರು ಮಂಡಿಸಿದ ಅಭಿಪ್ರಾಯಗಳು

admin by admin
June 20, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಸರ್ವಪಕ್ಷ ಸಭೆಯಲ್ಲಿ ನಾಯಕರು ಮಂಡಿಸಿದ ಅಭಿಪ್ರಾಯಗಳು

ಹೊಸದಿಲ್ಲಿ, ಜೂನ್ 20: ಗಾಲ್ವಾನ್ ನದಿ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ ನಡೆದಿದ್ದು, ದೇಶದ ಪ್ರಮುಖ 20 ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು . ಸರ್ವಪಕ್ಷ ಸಭೆ ಆರಂಭಕ್ಕೂ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಎದ್ದುನಿಲ್ಲುವ ಮೂಲಕ ಗಾಲ್ವಾನ್ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಿದರು.

Related posts

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

August 9, 2026
ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

August 9, 2026

ಗಾಲ್ವಾನ್ ನದಿ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ತಮ್ಮ ಬೆಂಬಲವಿರುವುದಾಗಿ ಎಲ್ಲ ಪ್ರತಿಪಕ್ಷಗಳು ಮತ್ತು ಎನ್​ ಡಿಎನ ಮಿತ್ರಪಕ್ಷಗಳು ಈ ಸಂದರ್ಭದಲ್ಲಿ ಘೋಷಿಸಿದವು. ವಿವಿಧ ಪಕ್ಷದ ನಾಯಕರು ಮಂಡಿಸಿದ ಅಭಿಪ್ರಾಯಗಳ ಬಗ್ಗೆ ಇಲ್ಲಿದೆ ಒಂದು ವರದಿ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

ಭಾರತ-ಚೀನಾ ನಡುವಿನ ಸಂಘರ್ಷಕ್ಕೆ ಮೂಲ ಕಾರಣ ಭಾರತೀಯ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಆರೋಪಿಸಿದರು. ಗಡಿ ನಿಯಂತ್ರಣ ರೇಖೆಯ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ಕಳೆದುಕೊಂಡಿರುವ ಪರಿಣಾಮದಿಂದಾಗಿ ನಾವು 20 ಭಾರತೀಯ ಯೋಧರನ್ನು ಕಳೆದುಕೊಳ್ಳಬೇಕಾಯಿತು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ನಮ್ಮೆಲ್ಲರ ಮನದಲ್ಲೂ ನಾವೆಲ್ಲರೂ ಒಂದೇ ಎಂಬ ಭಾವನೆಯಿದೆ.‌ ಪ್ರಧಾನ ಮಂತ್ರಿಗಳೇ ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ. ಭಾರತೀಯ ಯೋಧರ ಜೊತೆ ಮತ್ತು ಕುಟುಂಬದವರ ಜೊತೆಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ನಮ್ಮದು ಶಾಂತಿ ಪ್ರಿಯ ರಾಷ್ಟ್ರ ಆದರೆ ಇದು ನಮ್ಮ ದೌರ್ಬಲ್ಯವಲ್ಲ.‌ಭಾರತ ಬಲಶಾಲಿ ರಾಷ್ಟ್ರವೇ ಹೊರತು ಅಸಹಾಯಕವಾಗಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಚೀನಾದ ಎದುರು ಭಾರತವು ಎಂದಿಗೂ ತಲೆ ಬಾಗುವುದಿಲ್ಲ.‌ ಚೀನಾದಲ್ಲಿರುವುದು ಸರ್ವಾಧಿಕಾರಿ ಪ್ರಭುತ್ವವೇ ಹೊರತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ . ಅವರು ತಮಗೆ ಬೇಕಾದ ವ್ಯವಸ್ಥೆಗಳನ್ನು ಬೇಕೆನಿಸಿದಾಗ ಮಾಡುತ್ತಾರೆ. ಅವರ ವಿರುದ್ಧ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್

ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಭಾರತವು ಬದ್ಧವಾಗಿರಬೇಕು. ಗಡಿಯಲ್ಲಿ ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರಗಳನ್ನು ಬಳಸಲು ಅವಕಾಶ ನೀಡಬಾರದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದರು. 1996ರ ಭಾರತ-ಚೀನಾ ಪಂಚಶೀಲಾ ಒಪ್ಪಂದದ ಪ್ರಕಾರ ಗಡಿಯಲ್ಲಿ ಎರಡೂ ದೇಶಗಳ ಸೇನಾಪಡೆಯ ಸೈನಿಕರು ಯಾವುದೇ ರೀತಿಯ ಮದ್ದು-ಗುಂಡುಗಳನ್ನು ಮತ್ತು ಸ್ಪೋಟಕಗಳನ್ನು ಇಟ್ಟುಕೊಳ್ಳುವಂತಿಲ್ಲ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ವಪಕ್ಷ ಸಭೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆಹ್ವಾನವಿರದಿದ್ದರೂ, ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದೂ ಚೀನಾಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ಹೇಳಿದರು

Tags: #ಕರ್ನಾಟಕCongressDelhiindiaIndia-China borderIndia-China conflickarnatakaPrime Minister Narendra Modi
ShareTweetSendShare
Join us on:

Related Posts

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

by Shwetha
August 9, 2026
0

ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

by Shwetha
August 9, 2026
0

ನವದೆಹಲಿ: ವಿದ್ಯಾರ್ಥಿಗಳ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟವು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿವೆ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಿಗೆ ಓಡೋಡಿ...

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

by Shwetha
August 9, 2026
0

ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವಾಗಿ ಯಾವುದೇ ಟೋಕನ್ ಇಲ್ಲದೆ ಧರ್ಮ ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರ ಸಂಖ್ಯೆ ಗಣನೀಯವಾಗಿ...

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

by Shwetha
August 9, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು...

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

by Shwetha
August 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್‌ರಚನೆಯ ಚರ್ಚೆಗಳು ಬಿರುಸಾಗಿರುವ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ರಾಜಕೀಯವಾಗಿ ಎತ್ತರಕ್ಕೆ ಬೆಳೆಯುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram