ಚಿಕ್ಕಮಗಳೂರು : ಧರ್ಮಸ್ಥಳದಿಂದ ಬೆಂಗಳೂರಿಗೆ ಹೊರಟವರು ಮಸಣ ಸೇರಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಮೂಡಿಗೆರೆಯ ಹತ್ತಿರ ನಡೆದಿದ್ದು, ಸಾರಿಗೆ ಬಸ್ (Bus) ಹಾಗೂ ಕಾರಿನ (Car) ಮಧ್ಯೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಗ ಸ್ತಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪೂಜಾ ಹಿರೇಮಠ್ (41) ಹಾಗೂ ರಾಜಶೇಖರ್ (18) ಸಾವನ್ನಪ್ಪಿದ ದುರ್ದೈವಿಗಳು. ಅಪಘಾತದಲ್ಲಿ ಪೂಜಾ ಹಿರೇಮಠ್ ಪತಿ ಶಿವಯೋಗಯ್ಯ ಹಿರೇಮಠ್ (49) ಅವರ ಸ್ಥಿತಿ ಗಂಭೀರವಾಗಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಸಿಲಾಗಿದೆ. ಮೃತರು ಬೆಂಗಳೂರಿನ ಕೋಣನಕುಂಟೆಯವರು ಎಂದು ಗುರುತಿಸಲಾಗಿದೆ.








