ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಅಪರಾಧ

ನೂರಕ್ಕೆ ನೂರು ಸತ್ಯ ಹೇಳ್ತೇನೆ: ನಟ ದರ್ಶನ್ ಗ್ಯಾಂಗ್‌ಗೆ ಅಪ್ರೂವರ್ ಶಾಕ್ ನೀಡಿದ ಪ್ರದೋಷ್!

Shwetha by Shwetha
August 21, 2026
in ಅಪರಾಧ, Crime, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜಧಾನಿ ಬೆಂಗಳೂರನ್ನಷ್ಟೇ ಅಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಅತ್ಯಂತ ಮಹತ್ವದ ಮತ್ತು ಸ್ಫೋಟಕ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್, ನ್ಯಾಯಾಲಯದ ಮುಂದೆ ತಾವೇ ಮಾಫಿ ಸಾಕ್ಷಿ ಅರ್ಥಾತ್ ಅಪ್ರೂವರ್ ಆಗಲು ಸಿದ್ಧರಿರುವುದಾಗಿ ತಿಳಿಸಿದ್ದು, ಕೊಲೆಯ ಸಂಪೂರ್ಣ ನೂರಕ್ಕೆ ನೂರರಷ್ಟು ನಿಜಾಂಶವನ್ನು ಬಿಚ್ಚಿಡುವುದಾಗಿ ನ್ಯಾಯಾಧೀಶರ ಎದುರು ಪ್ರತಿಜ್ಞೆ ಮಾಡಿದ್ದಾರೆ.

ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ನ್ಯಾಯಾಧೀಶೆ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರದೋಷ್ ಅವರನ್ನು ನೇರವಾಗಿ ಪ್ರಶ್ನಿಸಿದರು. ನೀವು ಯಾವ ಕಾರಣಕ್ಕೆ ಮಾಫಿ ಸಾಕ್ಷಿಯಾಗಲು ಬಯಸುತ್ತಿದ್ದೀರಿ ಎಂದು ಜಡ್ಜ್ ಕೇಳಿದಾಗ, ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂಬ ಉದ್ದೇಶದಿಂದ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿದ್ದೇನೆ ಎಂದು ಪ್ರದೋಷ್ ಉತ್ತರಿಸಿದರು.

Related posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

October 5, 2026
my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

October 5, 2026

ಅರ್ಜಿಯಲ್ಲಿ ಏನಿದೆ ಎಂಬುದನ್ನು ಓದಿ ತಿಳಿದುಕೊಂಡೇ ಸಹಿ ಮಾಡಿದ್ದೀರಾ ಎಂದು ಮರುಪ್ರಶ್ನಿಸಿದಾಗ, ಹೌದು ನಾನು ಅರ್ಜಿಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡೇ ಸಹಿ ಮಾಡಿದ್ದೇನೆ. ಈ ಘಟನೆಯಲ್ಲಿ ನನ್ನ ಪಾತ್ರವೇನು ಮತ್ತು ಇತರ ಆರೋಪಿಗಳು ಏನೇನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದೇನೆ ಎಂದು ಧೈರ್ಯವಾಗಿ ಹೇಳಿದರು.

ಯಾರದ್ದಾದರೂ ಬೆದರಿಕೆ, ಪ್ರಭಾವ ಅಥವಾ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದ್ದೀರಾ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರದೋಷ್, ನನ್ನ ಮೇಲೆ ಯಾವುದೇ ರೀತಿಯ ಪ್ರಭಾವ ಅಥವಾ ಒತ್ತಡ ಇಲ್ಲ. ನಾನು ಸಂಪೂರ್ಣ ಮನಸ್ಸಿನಿಂದ, ಸ್ವಇಚ್ಛೆಯಿಂದ ಈ ಅರ್ಜಿ ಸಲ್ಲಿಸಿದ್ದೇನೆ. ನೂರಕ್ಕೆ ನೂರರಷ್ಟು ಸತ್ಯವನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಜಡ್ಜ್ ಎದುರು ಸ್ಫೋಟಕ ಹೇಳಿಕೆ ನೀಡಿದರು. ಪ್ರದೋಷ್ ನೀಡಿದ ಪ್ರತಿಯೊಂದು ಹೇಳಿಕೆಯನ್ನು ನ್ಯಾಯಾಧೀಶರು ಅಧಿಕೃತವಾಗಿ ದಾಖಲಿಸಿಕೊಂಡಿದ್ದಾರೆ.

ವಿಚಾರಣೆಯ ಭಾಗವಾಗಿ ನ್ಯಾಯಾಲಯವು ಪ್ರದೋಷ್ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯ ಬಗ್ಗೆಯೂ ವಿಚಾರಿಸಿತು. ತಾವು ಎಂಬಿಎ ಫೈನಾನ್ಸ್ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಮತ್ತು ಇಂಗ್ಲಿಷ್ ಓದಲು ಹಾಗೂ ಬರೆಯಲು ಬರುತ್ತದೆ ಎಂದು ಪ್ರದೋಷ್ ತಿಳಿಸಿದರು. ಅಲ್ಲದೆ, ಈ ಕೊಲೆ ಪ್ರಕರಣಕ್ಕೂ ಮೊದಲು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿದರು. ಇನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿದ ವರದಿಯಲ್ಲಿ, ಪ್ರದೋಷ್ ವಿರುದ್ಧ ಈ ಕೊಲೆ ಕೇಸ್ ಹೊರತುಪಡಿಸಿ ಬೇರೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಜೈಲಿನಲ್ಲಿದ್ದಾಗ ಅವರ ನಡವಳಿಕೆ ಕೂಡ ಉತ್ತಮವಾಗಿತ್ತು ಎಂದು ಜೈಲು ಆಡಳಿತ ವರದಿ ನೀಡಿದೆ.

ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ನ್ಯಾಯಾಲಯ ತನ್ನ ಮಹತ್ವದ ಆದೇಶವನ್ನು ಆಗಸ್ಟ್ 24ಕ್ಕೆ ಕಾಯ್ದಿರಿಸಿದೆ. ವಿಶೇಷವೆಂದರೆ, ಇದೇ ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದು, ಈ ಸಾಲು ಸಾಲು ಬೆಳವಣಿಗೆಗಳು ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಭಾರೀ ಕಾನೂನು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ಪ್ರಸ್ತುತ ದರ್ಶನ್ ಹಾಗೂ ಇತರೆ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ. ಆದರೆ, ಪ್ರದೋಷ್ ನೀಡಲಿರುವ ಸಾಕ್ಷ್ಯಗಳು ಪ್ರಕರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ಆಗಸ್ಟ್ 24ರ ನ್ಯಾಯಾಲಯದ ಆದೇಶದ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ.

ShareTweetSendShare
Join us on:

Related Posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

by admin
October 5, 2026
0

lakshmiputra-chikkanna-amman-song-tara-emotional-november-27-release ಬೆಂಗಳೂರು: ನಟ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಚಿತ್ರದ ವಿಶೇಷ 'ಅಮ್ಮನ ಹಾಡು' ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ...

my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

by admin
October 5, 2026
0

ಹೊಸ ತಲೆಮಾರಿನ ಪ್ರೀತಿ, ಅವರದೇ ಆದ ಬದುಕಿನ ಆಯ್ಕೆಗಳು ಮತ್ತು ಒಟ್ಟಿಗೆ ಸಾಗುವ ಪಯಣದ ಕಥೆ ಬೆಂಗಳೂರು: ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಭಾವನೆಗಳು ಮತ್ತು ಬದಲಾಗುತ್ತಿರುವ ಬದುಕಿನ...

devi-mahatme-social-drama-rangayana-raghu-december-4-release

‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ, ಇದೊಂದು ವಿಶಿಷ್ಟ ಸೋಷಿಯಲ್ ಡ್ರಾಮಾ: ಚಿತ್ರದ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ನಾಗರಾಜ್ ಸೋಮಾಯಾಜಿ, ಡಿಸೆಂಬರ್‌ 4ರಂದು ರಿಲೀಸ್

by admin
October 5, 2026
0

ಬೆಂಗಳೂರು: ಶೀರ್ಷಿಕೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಬಗ್ಗೆ ನಿರ್ದೇಶಕ ನಾಗರಾಜ್ ಸೋಮಾಯಾಜಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಟೀಸರ್ ಮೂಲಕ ಪ್ರೇಕ್ಷಕರ ಗಮನ...

sanvi-sudeep-sulochana-song-sigma-jason-sanjay-thaman

ಮಸ್ತ್‌ ಮಲೈಕಾ’ ಯಶಸ್ಸಿನ ಬಳಿಕ ಗಾಯಕಿ ಸಾನ್ವಿ ಸುದೀಪ್‌ ಅವರು ‘ಸುಲೋಚನ’ ಎಂಬ ಹೊಸ ಗೀತೆಗೆ ಧ್ವನಿಯಾಗಿದ್ದಾರೆ.

by admin
October 5, 2026
0

ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡುತ್ತಿರುವ 'ಸಿಗ್ಮಾ' ಚಿತ್ರದಲ್ಲಿ ಈ ಹಾಡು ಮೂಡಿಬಂದಿದೆ. 'ಸಿಗ್ಮಾ' ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ...

puttamalli-song-anna-from-mexico-dhananjaya-5-million-views

ಸೋಶಿಯಲ್‌ ಮೀಡಿಯಾದಲ್ಲಿ ‘ಪುಟ್ಟಮಲ್ಲಿ’ ಧಮಾಕ: ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್!

by admin
October 5, 2026
0

ಬೆಂಗಳೂರು: ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ ‘ಓ ಪುಟ್ಟಮಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram