ನ್ಯೂಸ್ ಡೆಸ್ಕ್ : ರಾಜ್ಯ ವಿಧಾನ ಪರಿಷತ್ ಚುನವಾಣೆಗೆ ಬಹುತೇಕ ಅವಿರೋಧ ಆಯ್ಕೆಯಾಗುವ ಸಾದ್ಯತೆಯಿದೆ. ಹಾಗಾಗಿ ಬಿಜೆಪಿಯಲ್ಲಿ ಸಂಪುಟ ಪುನಾರಚನೆ ವಿಷಯ ಮುನ್ನೆಲೆಗೆ ಬಂದಿದೆ. ಆಪರೇಷನ್ ಕಮಲ ನಡೆದು ಬಿಜೆಪಿ ಸರ್ಕಾರ ರಚನೆ ಮಾಡಿದಾಗ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆದಿತ್ತು. ಜೊತೆಗೆ ಸಚಿವ ಸ್ಥಾನ ಸಿಗದ ಬಿಜೆಪಿ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಇದೀಗ ಅಂತದ್ದೆ ಸನ್ನಿವೇಶ ಸೃಷ್ಠಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ತೆಗೆಯಲು ಬಿಜೆಪಿ ವರಿಷ್ಟರು ಮುಂದಾಗಿದ್ದಾರೆ. ಅಲ್ಲದೆ ಇವರ ಸ್ಥಾನಗಳಿಗೆ ಕ್ರಿಯಾಶೀಲರಾಗಿರುವ ಮತ್ತು ಅಸಮಾಧಾನ ಹೊಂದಿದ ಕೆಲ ಬಿಜೆಪಿ ಹಿರಿಯ ಶಾಸಕರನ್ನು ಸೇರಿಸಲು ಬಿಜೆಪಿ ಮುಂದಾಗಿದೆ . ಕೆಲ ಸಚಿವರಿಗೆ ಪದವಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಜೊತೆಗೆ ಸಚಿವರ ಪ್ರಸ್ತುತ ಇರುವ ಖಾತೆಗಳು ಬದಲಾಗುವ ಎಲ್ಲಾ ಲಕ್ಷಣಗಳಿವೆ ಎಂಬುದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದವರಿಗೆ ಉತ್ತಮವಾದ ಖಾತೆಗಳು ಸಿಗುವ ಸಾಧ್ಯತೆಗಳಿವೆ. ಸೇಮ್ ಟೈಮ್ ಸಚಿವರಾಗಿ ಇಲ್ಲಿಯವರಿಗೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರಿಗಳಿಗೆ ಗೇಟ್ ಪಾಸ್ ನೀಡುವುದು ಪಕ್ಕಾ ಎಂಬುದು ಬಿಜೆಪಿ ಪಡಸಾಲೆಯಲ್ಲಿ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ. ಈ ಭಾರಿ ಸಚಿವ ಸಂಪುಟ ಪುನಾರಚನೆ ಆದರೆ ಹೊಸಬರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಸಚಿವ ಸಂಪುಟಕ್ಕೆ ಯಾರು ಇನ್
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಚನೆಗೆ ಕಾರಣರಾದ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಈಗಾಗಲೇ ವಿಧಾನ ಪರಿಷತ್ ಪ್ರವೇಶದ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅದರಂತೆ ಮೈತ್ರಿ ಸರ್ಕಾರ ಪತನದ ಅವಧಿಯಲ್ಲಿ ರೆಬಲ್ ಶಾಸಕರನ್ನು ಸಚಿವರನ್ನಾಗಿ ಮಾಡುವುದಾಗಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಮಾತು ನೀಡಿತ್ತು. ಅದರಂತೆ ಚುನಾವಣೆಯಲ್ಲಿ ಗೆದ್ದು ಬಂದ ರೆಬೆಲ್ ಶಾಸಕರನ್ನು ಸಚಿವರನ್ನಾಗಿ ಬಿಜೆಪಿ ಮಾಡಿದೆ.
ಅಲ್ಲದೆ ಉಪ ಚುನಾವಣೆಯಲ್ಲಿ ಸ್ವಪಕ್ಷೀಯರಿಂದಲೆ ಸೋಲು ಕಂಡ ಎಂಟಿಬಿ ನಾಗರಾಜ್, ಮತ್ತು ಉಪಚುನಾವಣೆಯಲ್ಲಿ ಟಿಕೆಟ್ ಬಿಟ್ಟುಕೊಟ್ಟ ಆರ್ ಶಂಕರ್ ಗೆ ಬಿಜೆಪಿ ಈಗಾಗಲೇ ವಿಧಾನ ಪರಿಷತ್ ಪ್ರವೇಶದ ಬಾಗಿಲು ತೆರೆದಿದೆ. ಜೊತೆಗೆ ಇವರನ್ನು ಸಚಿವರನ್ನಾಗಿ ಮಾಡಲು ಬಿಜೆಪಿಯಲ್ಲಿ ಯಾರ ವಿರೋಧವಿಲ್ಲ.
ಇನ್ನೊಂದೆಡೆ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳದ ಸುನೀಲ್ ಕುಮಾರ್, ಮುರುಗೇಶ್ ನಿರಾಣಿ ಸಂಪುಟಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಯಾರ ಖಾತೆಗಳು ಬದಲಾವಣೆ
ಈ ಭಾರಿ ನಡೆಯುವ ಸಚಿವ ಸಂಪುಟ ಸರ್ಜರಿಯಲ್ಲಿ ಕೆಲ ಹಿರಿಯ ಸಚಿವರ ಖಾತೆ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ. ಇತ್ತೀಚೆಗೆ ರೈತ ಮಹಿಳೆಗೆ ರಾಸ್ಕಲ್ ಎಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ, ಡಿಸಿಎಂ ಲಕ್ಷ್ಮಣ ಸವದಿ, ಆರ್.ಅಶೋಕ್, ಸುರೇಶ್ ಕುಮಾರ್, ಸೇರಿದಂತೆ ಕೆಲವು ಸಚಿವರ ಖಾತೆಗಳು ಬದಲಾವಣೆ ಆಗಲಿವೆ ಎನ್ನಲಾಗಿದೆ.
ಜಾತಿವಾರು ಲೆಕ್ಕಚಾರ
ಸಚಿವ ಸಂಪುಟದ ಚರ್ಚೆ ಶುರುವಾಗುತ್ತಿದ್ದಂತೆ ಜಾತಿವಾರು ಲೆಕ್ಕಚಾರ ಶುರುವಾಗಿದೆ . ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತುತವಾಗಿ ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್. ಈಶ್ವರಪ್ಪ ಮತ್ತು ಬೈರತಿ ಬಸವರಾಜ್ ಸಚಿವರಾಗಿದ್ದಾರೆ. ಈ ಬಾರಿ ನಡೆಯುವ ಸಂಪುಟ ಸರ್ಜರಿಯಲ್ಲಿ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಸಚಿವರಾದರೆ ಕುರುಬ ಸಮುದಾಯಕ್ಕೆ 4 ಸ್ಥಾನಗನ್ನು ನೀಡಿದಂತಾಗುತ್ತದೆ.
ಇನ್ನೂ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ ಸಮುದಾಯಗಳನ್ನು ಬಿಟ್ಟರೆ ಹೆಚ್ಚಿನ ಸ್ಥಾನಗಳನ್ನು ಕುರುಬ ಸಮುದಾಯ ಪಡೆದಂತೆ ಆಗುತ್ತದೆ. ಅಲ್ಲದೆ ಕುರುಬ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಬಿಜೆಪಿ ಸರ್ಕಾರ ಎಂಬ ಕೀರ್ತಿ ಪಾತ್ರವಾಗುತ್ತದೆ.








