ರಾಯಚೂರು: ವಿಚಾರಣಾಧೀನ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡಿರುವ ಘಟನೆ ದೇವದುರ್ಗ ಉಪ ಕಾರಾಗೃಹದಲ್ಲಿ ನಡೆದಿದೆ.
ಅನ್ವರ್ ಬಾಷಾ ಎಂಬ ವಿಚಾರಣಾಧೀನ ಕೈದಿಯೇ ಜೈಲಿನಿಂದ ಪರಾರಿಯಾಗಿದ್ದಾರೆ. ಈ ಆರೋಪಿಯು ದೇವದುರ್ಗದ ಮಸಿಹಾಳ ಹತ್ತಿರ ಮೇ ತಿಂಗಳಲ್ಲಿ ನಡೆದಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ವಿಜಯನಗರದ ರಾಮನಗರ ನಿವಾಸಿಯಾಗಿದ್ದ ಈತ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ. ಈಗ ಜೈಲಿನ ಗೋಡೆ ಹಾರಿ ತಲೆ ಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮಸಿಹಾಳ ಗ್ರಾಮದ ಲಾಲ್ ಸಾಬ್ ಎಂಬಾತನ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಲಾಲ್ ಸಾಬ್ನ ಪತ್ನಿ ರಜ್ಮಾ ಜೊತೆ ಆರೋಪಿ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿಯೇ ಆತನನ್ನು ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಅನ್ವರ್ ಹಾಗೂ ಕೊಲೆಯಾದ ಲಾಲ್ ಸಾಬ್ನ ಪತ್ನಿ ರಜ್ಮಾಳನ್ನ ಗಬ್ಬೂರು ಠಾಣೆ ಪೊಲೀಸರು (Police) ಬಂಧಿಸಿದ್ದರು








