ಕಲಬುರಗಿ: ಪತಿಯೇ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಚಿತ್ತಾಪುರ ತಾಲೂಕಿನ ಅಲ್ಲೂರು ಕೆ. ಗ್ರಾಮದಲ್ಲಿ ನಡೆದಿದೆ. ಹನುಮವ್ವ(36) ಮೃತ ರ್ದುದೈವಿ ಎನ್ನಲಾಗಿದೆ. ಮದುವೆ ಆದ ದಿನದಿಂದಲೂ ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಗಂಡ, ಹೆಂಡತಿ ನಡುವೆ ಜಗಳ ಆಗುತ್ತಿದ್ದು. ಪತಿಯ ಕಿರುಕಳಕ್ಕೆ ಬೇಸತ್ತಿದ್ದ ಹನುಮವ್ವ ತವರು ಮನೆ ಸೇರಿದ್ದರು.
ಆದರೆ, ತವರು ಮನೆಯಲ್ಲಿದ್ದ ಸಂದರ್ಭದಲ್ಲಿ ಪಾಪಿ ಪತಿ, ಪತ್ನಿಗೆ ಗುಂಡಿಟ್ಟು ಹತ್ಯೆಗೈದಿದ್ದಾನೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








