ರಾಯಚೂರು: ಮಲಗಿದ್ದ ಪತ್ನಿ ಕೊಲೆ (Murder) ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು (Raichur) ತಾಲೂಕಿನ ರೊಜೋಳ್ಳಿ ಗ್ರಾಮದಲ್ಲಿ ನಡೆದಿದೆ.
ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿ ಕೊಲೆ ಮಾಡಿದ್ದಾಗಿ ಮೃತಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜೋಳ್ಳಿ ಗ್ರಾಮದ ಅಂಬಮ್ಮ ಎಂಬ ಮಹಿಳೆಯೇ ಕೊಲೆಯಾದವಳು. ಅಂಬಮ್ಮ, ಅತ್ತೆ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿದ್ದರು. ಆದರೆ ತಡ ರಾತ್ರಿ ಒಳಗಡೆ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅಂಬಮ್ಮಳ ಮೈದುನ ಹನುಮೇಶ್ ಎದ್ದಿದ್ದ. ಆತ ಎಬ್ಬಿಸಲು ಹೋಗಿದ್ದ. ಆದರೆ, ಆಕೆ ಹಾಸಿಗೆ ಮೇಲೆ ಹೊದಿಸಿದ್ದ ಸ್ಥಿತಿಯಲ್ಲಿ ಇದ್ದರು. ಆ ನಂತರ ಹನುಮೇಶ್ ಸಂಬಂಧಿಕರನ್ನು ಎಬ್ಬಿಸಿ, ಕರೆಯಿಸಿ ನೋಡಿದಾಗ ಅವರು ರಕ್ತದ ಮೊಡವಿನಲ್ಲಿ ಹೆಣವಾಗಿ ಬಿದ್ದಿರುವುದು ಕಂಡು ಬಂದಿದೆ.
ಆದರೆ, ಮಧ್ಯರಾತ್ರಿ ಮೂರು ಗಂಟೆಯ ವೇಳೆ ಪತ್ನಿ ಅಂಬಮ್ಮಳ ಜೊತೆ ಪತಿ ಕಾಶೀಮಪ್ಪ ಗಲಾಟೆ ಮಾಡಿದ್ದ. ಕಂಠ ಪೂರ್ತಿ ಕುಡಿದು ಬಂದು ಕಿರಿಕ್ ಮಾಡಿದ್ದ. ಆದರೆ ಆವತ್ತು ಆ ಗಲಾಟೆ ಅತೀರೇಕಕ್ಕೆ ಹೋಗಿತ್ತು. ಪತ್ನಿ ಮಲಗಿದ್ದಾಗ ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದದ್ದು ನಾನೇ ಅಂತ ಪತಿ ಕಾಸೀಮಪ್ಪ ಒಪ್ಪಿಕೊಂಡಿದ್ದಾನೆ. ಮಹಿಳೆಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಮುಂದಾದಾಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.








