ಐಸಿಸಿ ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಈ ನಡುವೆ ಸೌತ್ ಆಫ್ರಿಕಾದ ಬ್ಯಾಟಿಂಗ್ ಆಲ್ರೌಂಡರ್ ಐಡೆನ್ ಮಾರ್ಕ್ರಂ ಮಹತ್ವದ ಮೈಲುಗಲ್ಲಿನ ಮೇಲೆ ಕಣ್ಣಿಟ್ಟಿದ್ದಾರೆ.
ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಐಡೆನ್ ಮಾರ್ಕ್ರಂ, ಸೌತ್ ಆಫ್ರಿಕಾ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಈ ನಡುವೆ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 2000 ರನ್‌ಗಳ ಹೊಸ್ತಿಲಲ್ಲಿರುವ ಮಾರ್ಕ್ರಂ, ಆ ಮೂಲಕ ಮಹತ್ವದ ಮೈಲುಗಲ್ಲು ದಾಟುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮಾರ್ಕ್ರಂ 70 ರನ್‌ಗಳಿಸಬೇಕಿದೆ.
ಸೌತ್ ಆಫ್ರಿಕಾದ ಪ್ರಮುಖ ಬ್ಯಾಟರ್ ಆಗಿರುವ ಮಾರ್ಕ್ರಂ, ಏಕದಿನ ಕ್ರಿಕೆಟ್‌ನಲ್ಲಿ ಸದ್ಯ 60 ಪಂದ್ಯಗಳನ್ನ ಆಡಿದ್ದು, 37.11ರ ಸರಾಸರಿಯಲ್ಲಿ 1930 ರನ್‌ಗಳಿಸಿದ್ದಾರೆ. ಮಾರ್ಕ್ರಂ ಅವರ ಈ ಪ್ರದರ್ಶನದಲ್ಲಿ ಮೂರು ಶತಕ ಹಾಗೂ 9 ಅರ್ಧಶತಕ ಒಳಗೊಂಡಿದ್ದು, 175 ರನ್‌ಗಳ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ 53ರ ಸರಾಸರಿ ಹಾಗೂ 123.83ರ ಸ್ಟ್ರೈಕ್ ರೇಟ್‌ನಲ್ಲಿ 265 ರನ್‌ಗಳಿದ್ದಾರೆ.
SA v PAK, South Africa, Aiden Markram, Pakistan, World Cup