ADVERTISEMENT
Thursday, April 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂದು ಸರ್ವಾಧಿಕಾರಿ.. ಅಜಯ್ ಶರ್ಮಾ ಜಮ್ಮು ಕಾಶ್ಮೀರ ಕ್ರಿಕೆಟ್ ಆಟಗಾರರಿಗೆ ಇಂದು ಅಜ್ಜು ಭಾಯ್ ಆಗಿದ್ದೇಗೆ..?

admin by admin
February 25, 2026
in Newsbeat, Sports, ಕ್ರಿಕೆಟ್
ajay sharma, jammu kashmir cricket head coach

ajay sharma, jammu kashmir cricket head coach

Share on FacebookShare on TwitterShare on WhatsappShare on Telegram

ಭೈಯೋಂ ಮೇ ಭಾಯಿ ಕೈಸಾ ಹೋ, ಅಜ್ಜು ಭಾಯಿ ಜೈಸಾ ಹೋ..! (ಅಣ್ಣಂದಿರಲ್ಲಿ ಅಣ್ಣ ಹೇಗಿರಬೇಕು.. ಅಜ್ಜು ಭಾಯಿಯಂತಿರಬೇಕು)
ಇದು ಅಜಯ್ ಶರ್ಮಾ ಅವರನ್ನು ಜಮ್ಮು ಕಾಶ್ಮೀರ ಕ್ರಿಕೆಟ್ ತಂಡದ ಹುಡುಗರು ಕೊಂಡಾಡಿದ ಪರಿ.

ನೆನಪಿರಬೇಕು.. ಇತ್ತೀಚೆಗೆ ರಣಜಿ ಟ್ರೋಫಿ ಸೆಮಿಫೈನಲ್‍ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ರೋಚಕವಾಗಿ ಸೋಲಿಸಿದ್ದು ಜಮ್ಮು ಕಾಶ್ಮೀರದ ತಂಡದ ಅಪ್ರತಿಮ ಸಾಧನೆ. ಈ ಸಂಭ್ರಮದ ಕ್ಷಣವನ್ನು ಎಂದೆಂದಿಗೂ ಜಮ್ಮು ಕಾಶ್ಮೀರ ಕ್ರಿಕೆಟ್ ಮರೆಯಲು ಸಾಧ್ಯನೇ ಇಲ್ಲ. ಯಾಕಂದ್ರೆ ಅದು ಅಂತಿಂಥ ಗೆಲುವಲ್ಲ. ಸೋಲಿನ ಭೀತಿ ಕಣ್ಣೇದುರು ಇದ್ರೂ, ಜೀವ ಬಿಟ್ಟು ಹೋರಾಡಿ ಗೆಲುವನ್ನು ಕೈ ವಶಮಾಡಿಕೊಂಡಿದ್ದ ಜಮ್ಮ ಕಾಶ್ಮೀರ ಕ್ರಿಕೆಟ್ ಹುಡುಗರ ವಿಜಯೋತ್ಸಾಹಕ್ಕೆ ಇತಿಮಿತಿಗಳಿರಲಿಲ್ಲ. ಅಲ್ಲಿ ಆಡಿದ್ದು ಆಟಗಾರರು. ಗೆಲುವು ಸಿಕ್ಕಿದ್ದು ಸಂಘಟಿತ ಆಟಕ್ಕೆ. ಆದ್ರೆ ಈ ವಿರೋಚಿತ ಗೆಲುವನ್ನು ಅರ್ಪಣೆ ಮಾಡಿದ್ದು ತಂಡದ ಹೆಡ್ ಕೋಚ್ ಅಜಯ್ ಶರ್ಮಾಗೆ.

Related posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

April 15, 2026
ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

April 15, 2026

ಅಷ್ಟೇ ಅಲ್ಲ, ಕಲ್ಯಾಣಿ ಅಂಗಣದಲ್ಲಿ ಅಜಯ್ ಶರ್ಮಾ ಅವರನ್ನು ಜಮ್ಮು ಕಾಶ್ಮೀರದ ಆಟಗಾರರು ತಮ್ಮ ಹೆಗಲ ಮೇಲೆ ಹೊತ್ತು ಇಡೀ ಮೈದಾನ ಸುತ್ತಾಡಿ ಸಂಭ್ರಮಾಚರಣೆ ಮಾಡಿದ್ರು. ಖಡಕ್ ಹೆಡ್ ಮಾಸ್ಟರ್‍ನಂತಿದ್ದ ಅಜಯ್ ಶರ್ಮಾ ಕೂಡ ಹುಡುಗರ ಪ್ರೀತಿ, ಗೌರವಕ್ಕೆ ಭಾವುಕರಾಗಿದ್ರು. ಒಂದು ಕ್ಷಣ, 15 ವರ್ಷಗಳ ಕಾಲ ಪಟ್ಟ ಅವಮಾನ, ಏಕಾಂಗಿತನ, ನೋವು, ಹತಾಶೆ ಎಲ್ಲವೂ ಕಣ್ಣೇದುರು ಬಂದು ಹೋದವು.

ಆಟಗಾರನಾಗಿ ಅಜಯ್ ಶರ್ಮಾ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಕ್ರಿಕೆಟ್ ಮೈದಾನದಿಂದಲೇ ದೂರವೇ ಉಳಿದಿದ್ದರು. ಸುಮಾರು ಒಂದೂವರೆ ದಶಕಗಳ ಕಾಲ ಕಾನೂನು ಹೋರಾಟ ಮಾಡಿ ಕ್ಲೀನ್ ಚಿಟ್ ಸಿಕ್ಕಿದ್ದು ತುಸು ನೆಮ್ಮದಿಯನ್ನುಂಟು ಮಾಡಿದ್ರೂ ಮನದೊಳಗಿನ ನೋವು ಪದೆ ಪದೇ ಕಾಡುತ್ತಿರುತ್ತಿತ್ತು. ಅಂತಹುದರಲ್ಲಿ ಜಮ್ಮು ಕಾಶ್ಮೀರದ ತಂಡದ ಹೆಡ್ ಕೋಚ್ ಆಗಿ ಐತಿಹಾಸಿಕ ಸಾಧನೆ ಮಾಡಿದಾಗ ಅಂಟಿಕೊಂಡಿದ್ದ ಕಪ್ಪು ಚುಕ್ಕೆ ಕೂಡ ಅಳಿಸಿ ಹೋದಾಂತಾಯ್ತು. ಮರ್ಯಾದೆ ಕಳೆದುಕೊಂಡಿದ್ದ ಕ್ರಿಕೆಟ್ ಮೈದಾನದಲ್ಲೇ ತನ್ನ ಶಿಷ್ಯರು ತನ್ನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದಾಗ ಘಾಸಿಗೊಂಡಿದ್ದ ಅಜಯ್ ಶರ್ಮಾ ಅವರ ಹೃದಯದಲ್ಲಿದ್ದ ಕಲ್ಮಶವೆಲ್ಲಾ ಕಣ್ಣಲ್ಲಿ ಆನಂದಬಾಷ್ಟವಾಗಿ ಸುರಿಯುತ್ತಿತ್ತು. ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಏನು ಆಗುತ್ತೋ ಗೊತ್ತಿಲ್ಲ. ಆದ್ರೆ ಗೆದ್ರೆ ಹೊಸ ಪರಂಪರೆಗೆ ಮುನ್ನುಡಿಯಾಗುತ್ತದೆ. ಒಂದು ವೇಳೆ ಸೋತ್ರೆ ಇತಿಹಾಸವಾಗುತ್ತದೆ.

ಜಮ್ಮು ಕಾಶ್ಮೀರ ಕ್ರಿಕೆಟ್ ತಂಡಕ್ಕೆ ಅಜಯ್ ಶರ್ಮಾ ಹೆಡ್ ಕೋಚ್ ಆಗಿದ್ದೇಗೆ..?

ಮ್ಯಾಚ್ ಫಿಕ್ಸಿಂಕ್ ಕಳಂಕದಿಂದ ಮುಕ್ತಿ ಪಡೆದ ನಂತರ ಅಜಯ್ ಶರ್ಮಾ ದೆಹಲಿ 19 ವಯೋಮಿತಿ ತಂಡದ ತರಬೇತುದಾರನಾಗಿದ್ದರು. ತನ್ನ ಮೇಲಿನ ಆರೋಪದಿಂದಾಗಿ ತನ್ನ ಮಗ ಮನನ್ ಶರ್ಮಾನ ಕ್ರಿಕೆಟ್ ಭವಿಷ್ಯವೂ ಕಮರಿ ಹೋಗಿತ್ತು. ಭಾರತಕ್ಕಾಗಿ ಆಡಿಸಬೇಕು ಎಂದು ಕನಸು ಕಂಡಿದ್ದ ಅಜಯ್ ಶರ್ಮಾನ ಜೊತೆ ಯಾರು ಕೂಡ ಮಾತನಾಡುತ್ತಿರಲಿಲ್ಲ. ಆದ್ರೆ ಕ್ಲೀನ್ ಚಿಟ್ ಸಿಕ್ಕಿದ ನಂತರ ಶರ್ಮಾ ಮತ್ತೆ ಗುರುವಾಗಿ ಯುವ ಆಟಗಾರರಿಗೆ ತರಬೇತಿ ನೀಡುವುದರಲ್ಲಿ ತಲ್ಲೀಣರಾದ್ರು. ಹಾಗೇ ದೆಹಲಿ ರಣಜಿ ತಂಡದ ತರಬೇತುದಾರನಾಗುವತ್ತ ಚಿತ್ತವನ್ನಿಟ್ಟಿದ್ದರು.

ಅದು 2021ರಲ್ಲಿ ಅಜಯ್ ಶರ್ಮಾ ಅವರು ಫ್ಯಾಮಿಲಿ ಜೊತೆ ಥಾಯ್ಲೆಂಡ್ ಪ್ರವಾಸದಲ್ಲಿದ್ದರು. ಆಗ ಶರ್ಮಾ ಅವರಿಗೆ ಈಗಿನ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಕರೆ ಮಾಡಿ, ಜಮ್ಮು ಕಾಶ್ಮೀರ ತಂಡದ ಹೆಡ್ ಕೋಚ್ ಆಗುವಂತೆ ಮನವಿ ಮಾಡ್ತಾರೆ. ಆದ್ರೆ ಅಜಯ್ ಶರ್ಮಾ ಜೋರಾಗಿ ನಕ್ಕು, “ಅದೆಲ್ಲಾ ಆಗಲ್ಲ ಬಿಡಿ, ದೇಸಿ ಟೂರ್ನಿಗಳಲ್ಲಿ ನಾವು ಜಮ್ಮು ಕಾಶ್ಮೀರ ತಂಡವನ್ನು ಲಘುವಾಗಿ ಪರಿಗಣಿಸುತ್ತಿದ್ದೇವು. ಅದು ನಿನಗೂ ಗೊತ್ತಲ್ವಾ..? ಅಷ್ಟೇ ಅಲ್ಲ, ನಾನು ದೆಹಲಿ ರಣಜಿ ತಂಡದ ಕೋಚ್ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ” ಎಂದು ಹೇಳಿ ಮಿಥುನ್ ಮನ್ಹಾಸ್ ಮನವಿಯನ್ನು ಮೊದಲು ನಿರಾಕರಿಸಿದ್ದರು. ಆದ್ರೆ ಮನ್ಹಾಸ್ ಹಠ ಬಿಡಲಿಲ್ಲ. ಮತ್ತೆ ಮತ್ತೆ ಅಜಯ್ ಶರ್ಮಾ ಜೊತೆ ಮಾತುಕತೆ, ಚರ್ಚೆ ನಡೆಸಿದ್ದರು. ಯಾಕಂದ್ರೆ ಮಿಥುನ್ ಮನ್ಹಾಸ್ ಕೂಡ ಅಜಯ್ ಶರ್ಮಾ ಗರಡಿಯಲ್ಲೇ ಪಳಗಿದವರು. ಅವರ ಸಾಮಥ್ರ್ಯ ಏನು ಎಂಬುದು ಗೊತ್ತಿತ್ತು. ಇನ್ನೊಂದೆಡೆ, ಮಿಥುನ್ ಮನ್ಹಾಸ್‍ಗೆ ಜಮ್ಮು ಕಾಶ್ಮೀರ ಕ್ರಿಕೆಟ್ ಗೆ ಹೊಸ ಕಾಯಕಲ್ಪ ನೀಡಬೇಕು ಎಂದು ಹಠಮಾರಿಯಂತೆ ಶ್ರಮಿಸುತ್ತಿದ್ದರು. “ನನ್ನ ತವರೂರಿನ ಜಮ್ಮು ಕಾಶ್ಮೀರ ತಂಡ ದೇಸಿ ಕ್ರಿಕೆಟ್ ನಲ್ಲಿ ಉತ್ತುಂಗಕ್ಕೇರುವುದು ನನ್ನ ಕನಸು. ಅದನ್ನು ಸಾಕಾರಗೊಳಿಸಲು ನಿಮ್ಮ ಸಹಾಯ ಬೇಕು” ಎಂದು ಸೆಂಟಿಮೆಂಟ್ ಮಾತಿನಿಂದಲೇ ಅಜಯ್ ಶರ್ಮಾ ಅವರನ್ನು ಒಪ್ಪಿಸಲು ಮಿಥುನ್ ಮನ್ಹಾಸ್ ಯಶಸ್ವಿಯಾದ್ರು.

ಸರಿ, 2021-22ರ ಋತುವಿನಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಅಜಯ್ ಶರ್ಮಾ ನೇಮಕಗೊಂಡಾಗ ಯಾವುದೇ ಪ್ಲ್ಯಾನ್‍ಗಳಿರಲಿಲ್ಲ. ತಂಡದ ಆಟಗಾರರ ಜೊತೆಗಿನ ಮೊದಲ ಭೇಟಿಯಲ್ಲೇ ಸಮಸ್ಯೆ ಇರೋದು ಎಲ್ಲಿ ಎಂಬುದನ್ನು ಅರ್ಥಮಾಡಿಕೊಂಡಿದ್ದರು.
“ಜಮ್ಮು ಕಾಶ್ಮೀರದ ಹುಡುಗರಿಗೆ ಕ್ರಿಕೆಟ್ ಅಂದ್ರೆ ಹೊಡಿಬಡಿ ಆಟ. ಮೊದಲ ಎಸೆತವನ್ನೇ ಬೌಂಡರಿ, ಸಿಕ್ಸರ್‍ಗಟ್ಟಬೇಕು ಎಂಬ ಮನೋಭಾವನೆಯವರು. ಅಲ್ಲದೆ ಐಪಿಎಲ್ ಟೂರ್ನಿಯ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವುದೇ ದೊಡ್ಡ ಸಾಧನೆ ಅಂತ ಬೌಲರ್‍ಗಳು ಭಾವಿಸಿದ್ದರು. ಇನ್ನು ಐಪಿಎಲ್‍ನಲ್ಲಿ ಆಡಿರುವ ಆಟಗಾರರಲ್ಲಿ ಸೂಪರ್ ಸ್ಟಾರ್ ಸಂಸ್ಕøತಿ ಎದ್ದು ಕಾಣುತ್ತಿತ್ತು. ಹೀಗಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಿಂದ ಶುರು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಆದ್ರೆ ಮಿಥುನ್ ಮನ್ಹಾಸ್ ಮತ್ತು ಬ್ರಿಗೇಡಿಯರ್ ಅನಿಲ್ ಗುಪ್ತಾ ಅವರ ಸಲಹೆಯಿಂದ ನನ್ನ ಯೋಚನೆ, ಯೋಜನೆಗಳನ್ನು ಬದಲಾಯಿಸಿಕೊಂಡೆ ಅಂತಾರೆ ಅಜಯ್ ಶರ್ಮಾ.

ಜೆಕೆ ತಂಡದಲ್ಲಿ ಪ್ರತಿಭಾವಂತ ಹುಡುಗರು ಇದ್ರೂ ಶಿಸ್ತು ಇರಲಿಲ್ಲ. ಅಹಂ ಮತ್ತು ಒಣಪ್ರತಿಷ್ಠೆಯಿಂದ ತಂಡದಲ್ಲಿ ಒಗ್ಗಟ್ಟು ಇರಲಿಲ್ಲ. ವೃತ್ತಿಪರತೆ, ಬದ್ದತೆಯೂ ಇರಲಿಲ್ಲ. ಹೊರಗಿನವರು ಬಂದು ನಮಗೇನೂ ಹೇಳುವುದು ಅನ್ನೋ ದರ್ಪವಿತ್ತು. ಹೀಗಾಗಿ ಅಜಯ್ ಶರ್ಮಾ ಹೆಡ್‍ಮಾಸ್ಟರ್‍ನ ರೀತಿಯಂತೆ ವರ್ತಿಸುವುದು ಅನಿವಾರ್ಯವಾಗಿತ್ತು. ಪರಿಣಾಮ ಅಜಯ್ ಶರ್ಮಾ ಸರ್ವಾಧಿಕಾರಿ ಕೋಚ್ ಎಂದು ಆಡಳಿತ ಮಂಡಳಿಗೆ ದೂರುಗಳು ಬಂದಿದ್ದವು. ಆದ್ರೆ ಅಜಯ್ ಶರ್ಮಾಗೆ ಮಿಥುನ್ ಮನ್ಹಾಸ್ ಬೆನ್ನಿಗೆ ನಿಂತಿರುವುದರಿಂದ ಆಟಗಾರರು ಕೂಡ ಅನಿವಾರ್ಯವಾಗಿ ಅಜಯ್ ಶರ್ಮಾ ಹೇಳಿದಂತೆ ಕೇಳಲೇಬೇಕಾಯ್ತು.

ಪಂದ್ಯದಿಂದ ಪಂದ್ಯಕ್ಕೆ ಆಟಗಾರರ ಮನಸ್ಥಿತಿಗಳು ಬದಲಾದವು. ಪ್ರತಿಭೆ, ಆತ್ಮವಿಶ್ವಾಸ, ಧೈರ್ಯವಿದ್ರೂ, ತಾಳ್ಮೆ, ಬದ್ದತೆ, ಪರಿಶ್ರಮ, ಕೌಶಲ್ಯಗಳಿಂದ ಪಂದ್ಯ ಗೆಲ್ಲಬಹುದು ಎಂಬುದು ಜೆಕೆ ಆಟಗಾರರಿಗೆ ಮನವರಿಕೆ ಆಯ್ತು. ನಿಧಾನವಾಗಿ ಡ್ರೆಸಿಂಗ್ ರೂಮ್‍ನಲ್ಲೂ ಬದಲಾವಣೆಗಳು ಕಂಡುಬಂದವು. ಸ್ಟಾರ್ ಗಿರಿ ಸಂಸ್ಕøತಿಯನ್ನು ಕಿತ್ತು ಹಾಕಿದ್ರು. ಪ್ರತಿಯೊಬ್ಬ ಆಟಗಾರನಲ್ಲೂ ಪ್ರತಿಭೆ, ಸಾಮಥ್ರ್ಯ ಇದೆ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದರು. ಅದರಲ್ಲೂ ಮುಂಬೈ ವಿರುದ್ದ ವಿಕೆಟ್ ಕೈ ಚೆಲ್ಲಿಕೊಂಡಿದ್ದ ಅಬ್ದುಲ್ ಸಮಾದ್‍ನನ್ನು ಮುಂದಿನ ಪಂದ್ಯಕ್ಕೆ ಕೈಬಿಟ್ಟಾಗ ಯಾರು ತಂಡಕ್ಕೆ ಅನಿವಾರ್ಯ ಅಲ್ಲ ಎಂಬ ಸಂದೇಶವನ್ನೂ ರವಾನಿಸಿದ್ರು. ಹೀಗೆ ಆಟಗಾರರ ಮನಸ್ಥಿತಿಯನ್ನು ಬದಲಾಯಿಸಿದ್ದ ಅಜಯ್ ಶರ್ಮಾ ಜೆಕೆ ತಂಡದ ಅಚ್ಚು ಮೆಚ್ಚಿನ ಹಿರಿಯಣ್ಣನಾದ್ರು. ಅದಕ್ಕಾಗಿ ಜಮ್ಮು ಕಾಶ್ಮೀರ ಹುಡುಗರ ಬಾಯಲ್ಲಿ ನಲಿದಾಡುತ್ತಿರುವ ಘೋಷ ವಾಕ್ಯ
“ಭೈಯೋಂ ಮೇ ಭಾಯಿ ಕೈಸಾ ಹೋ, ಅಜ್ಜು ಭಾಯಿ ಜೈಸಾ ಹೋ..!” (ಅಣ್ಣಂದಿರಲ್ಲಿ ಅಣ್ಣ ಹೇಗಿರಬೇಕು.. ಅಜ್ಜು ಭಾಯಿಯಂತಿರಬೇಕು)

ಸನತ್ ರೈ

Tags: #ajaysharma#cricketnews#mithunmanhas#saakshatvbcciJammu&Kashmirkarnatakaranjitrophysportsnews
ShareTweetSendShare
Join us on:

Related Posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

by Shwetha
April 15, 2026
0

ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade)...

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

by Shwetha
April 15, 2026
0

ಸಂವಿಧಾನ ಶಿಲ್ಪಿ B. R. ಅಂಬೇಡ್ಕರ್ ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ...

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

by Shwetha
April 15, 2026
0

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ವೇಳೆ ನಡೆದಿದ್ದ ಆಂತರಿಕ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ....

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

by Shwetha
April 15, 2026
0

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಭಾರಿ ಸಂಚಲನ ಮೂಡಿದೆ. ಇಷ್ಟು ದಿನ ಭಕ್ತರ ಪಾಲಿಗೆ ಮಾರ್ಗದರ್ಶಕರಾಗಿದ್ದ ವಚನಾನಂದ ಶ್ರೀಗಳ ಅಸಲಿ ಮುಖವಾಡ ಕಳಚಿದೆ ಎಂದು...

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

by Shwetha
April 15, 2026
0

ದೆಹಲಿ ಅಬಕಾರಿ ನೀತಿ ಹಗರಣದ ವಿಚಾರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ನ್ಯಾಯಾಧೀಶರ ಎದುರೇ ನೇರ ಸವಾಲು ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈಕೋರ್ಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram