ಯಾದಗಿರಿ: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮೂಢನಂಬಿಕೆಯ ಹೆಸರಿನಲ್ಲಿ ವ್ಯಕ್ತಿಯನ್ನು ಜನರು ಥಳಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಯುವನ ಮೈಯಲ್ಲಿ ದೆವ್ವ ಬಂದಿದೆ ಎಂದು ಭಾವಿಸಿ, ಅದನ್ನು ಬಿಡಿಸುವುದಕ್ಕಾಗಿ ವ್ಯಕ್ತಿಯನ್ನು ಥಳಿಸಿದ್ದಾರೆ. ಸಂಬಂಧಿಕರು ಹಾಗೂ ಜನರು ಸೇರಿಕೊಂಡು ಯುವಕನ ಕೈ ಹಾಗೂ ಕಾಲು ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಯುವಕನನ್ನು ರಕ್ಷಿಸಿದ್ದಾರೆ.








