ಬೀದರ್: ಇಂದು ಬೆಳ್ಳಂಬೆಳಿಗ್ಗೆ ಅಕ್ರಮ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಲವು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಬೀದರ್‌ನಲ್ಲಿ (Bidar) ಲೋಕಾಯುಕ್ತ ಪೊಲೀಸರು (Lokayukta Police)ದಾಳಿ ಮಾಡಿ ಬೆಳ್ಳಂಬೆಳಗ್ಗೆ ಅರಣ್ಯ ಅಧಿಕಾರಿಗೆ ಶಾಕ್ ನೀಡಿದ್ದಾರೆ. ನಗರದಲ್ಲಿನ ಕೆಇಬಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ (Forest Department) ಆರ್‌ಎಫ್‌ಓ ಬಸವರಾಜ್ ಅವರ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇವರು ಕಳೆದ ಒಂದು ವರ್ಷದಿಂದ ಬೀದರ್ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆರ್‌ಎಫ್‌ಒ (RFO) ಆಗಿ ಕಾರ್ಯನಿರ್ವಸುತ್ತಿದ್ದರು. ಸದ್ಯ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.








