ಕಲಬುರಗಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಅತಿಥಿಯಾಗಿರುವ ಆರ್.ಡಿ. ಪಾಟೀಲ್ ನಾಲಿಗೆ ಹರಿ ಬಿಟ್ಟಿದ್ದಾನೆ.
ಪೊಲೀಸರು ಸ್ಥಳ ಮಹಜರಿಗಾಗಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಾಧ್ಯಮದವರನ್ನು ಕಂಡು ಸುಮ್ಮನೆ ಬೊಗಳೊದಲ್ಲ, ದಾಖಲೆ ಕೊಡ್ರೋ, ಯೂಸ್ ಲೆಸ್ ಎಂದು ನಾಲಿಗೆ ಹರಿಬಿಟ್ಟಿದ್ದಾನೆ. ಸಬ್ ಇನ್ಸ್ ಪೆಕ್ಟರ್ ಹುದ್ದೆಯಲ್ಲಿ ಪೊಲೀಸರ ಅತಿಥಿಯಾಗಿದ್ದ ಈತ ಈಗ ಮತ್ತೆ ಎಫ್ ಡಿಎ ಪರೀಕ್ಷೆಯ ಅಕ್ರಮದಲ್ಲಿ ಪೊಲೀಸರಿಗೆ ಲಾಕ್ ಆಗಿದ್ದಾನೆ. ಆದರೂ ಇತನ ಧಿಮಾಕು ಮಾತ್ರ ಕಡಿಮೆಯಾಗಿಲ್ಲ.