ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

CWC 2023: ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿದ ಬಾಬರ್‌ ಆಜ಼ಂ

C Dinesh by C Dinesh
November 15, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Share on FacebookShare on TwitterShare on WhatsappShare on Telegram

ಐಸಿಸಿ ಏಕದಿನ ವಿಶ್ವಕಪ್‌-2023 ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಎಲ್ಲಾ ಫಾರ್ಮ್ಯಾಟ್‌ನ ಕ್ರಿಕೆಟ್‌ ನಾಯಕತ್ವಕ್ಕೆ ಬಾಬರ್‌ ಆಜಮ್‌ ರಾಜೀನಾಮೆ ನೀಡಿದ್ದಾರೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ, ನೀರಸ ಪ್ರದರ್ಶನ ನೀಡುವ ಮೂಲಕ ಗ್ರೂಪ್‌ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತು. ತಂಡದ ಈ ಪ್ರದರ್ಶನದ ಬಗ್ಗೆ ಪಾಕ್‌ ತಂಡದ ಮಾಜಿ ಕ್ರಿಕೆಟಿಗರಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇವೆಲ್ಲದರ ಬೆನ್ನಲ್ಲೇ ಪಾಕಿಸ್ತಾನದ ನಾಯಕ ಬಾಬರ್‌ ಆಜಮ್‌, ಏಕದಿನ, ಟಿ20 ಹಾಗೂ ಟೆಸ್ಟ್‌ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Related posts

auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

August 4, 2026
jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

August 3, 2026

ಪಾಕಿಸ್ತಾನದ ಪ್ರಮುಖ ಬ್ಯಾಟರ್‌ ಆಗಿರುವ ಬಾಬರ್‌ ಆಜಮ್‌, 2020ರಿಂದ ಮೂರು ಮಾದರಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದರು. ಆದರೆ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಬಾಬರ್‌ ಆಜಮ್‌, ಪಾಕ್‌ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಬಾಬರ್‌ ಆಜಮ್‌, “2019ರಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲು ಪಿಸಿಬಿಯಿಂದ ನನಗೆ ಕರೆ ಬಂದ ಕ್ಷಣ ನನಗೆ ಸ್ಪಷ್ಟವಾಗಿ ನೆನಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ನಾನು ಮೈದಾನದ ಒಳಗೆ ಮತ್ತು ಹೊರಗೆ ಅನೇಕ ಏರಿಳಿತಗಳನ್ನ ಅನುಭವಿಸಿದ್ದೇನೆ, ಆದರೆ ನಾನು ಪೂರ್ಣ ಹೃದಯದಿಂದ ಮತ್ತು ಉತ್ಕಟಭಾವದಿಂದ ಕ್ರಿಕೆಟ್ ಜಗತ್ತಿನಲ್ಲಿ ಪಾಕಿಸ್ತಾನದ ಹೆಮ್ಮೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದ್ದೇನೆ”.

Babar Azam

“ವೈಟ್-ಬಾಲ್ ಮಾದರಿಯಲ್ಲಿ ನಂಬರ್ 1 ಸ್ಥಾನವನ್ನು ತಲುಪುವುದು ಆಟಗಾರರು, ತರಬೇತುದಾರರು ಮತ್ತು ನಿರ್ವಹಣೆಯ ಸಾಮೂಹಿಕ ಪ್ರಯತ್ನದ ಫಲಿತಾಂಶವಾಗಿದೆ, ಆದರೆ ಈ ಪ್ರಯಾಣದ ಸಮಯದಲ್ಲಿ ಅವರ ಬೆಂಬಲಕ್ಕಾಗಿ ಭಾವೋದ್ರಿಕ್ತ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಇಂದು, ನಾನು ಎಲ್ಲಾ ಮಾದರಿಗಳಲ್ಲಿ ಪಾಕಿಸ್ತಾನ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ” ಎಂದು ಉಲ್ಲೇಖಿಸಿದ್ದಾರೆ.

2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಆಡಿದ 9 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿತ್ತು. ಇದರ ಪರಿಣಾಮ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿ ಲೀಗ್‌ ಹಂತದಲ್ಲೇ ಟೂರ್ನಿಯಿಂದ ಔಟ್‌ ಆಗಿತ್ತು. ಮತ್ತೊಂದೆಡೆ ಪಾಕ್‌ ತಂಡದ ನಾಯಕ ಬಾಬರ್‌ ಆಜಮ್‌ ಕೂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದರು. ಆಡಿದ 9 ಪಂದ್ಯಗಳಲ್ಲಿ ಬಾಬರ್ ಆಜಮ್‌, 320 ರನ್‌ಗಳಿಸಿದ್ದರು.

CWC 2023, Pakistan, Babar Azam, Cricket World Cup, Cricket

Tags: babar azamCricketCricket World CupCWC 2023Pakistan
ShareTweetSendShare
Join us on:

Related Posts

auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

by admin
August 4, 2026
0

ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್,...

jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

by admin
August 3, 2026
0

  ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್  ಬೌಲರ್ ಮತ್ತೆ ಗಾಯದಿಂದ ಬಳುತ್ತಿದ್ದಾರೆ. ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಮುಂಬರುವ ಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ....

glasgow-commonwealth-games-2026-india-medals-nita-ambani-congratulates

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಮೋಘ ಸಾಧನೆಗೆ ನೀತಾ ಅಂಬಾನಿ ಅಭಿನಂದನೆ

by admin
August 3, 2026
0

  ಮುಂಬೈ, ಆಗಸ್ಟ್ 03, 2026: ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳ ಸಹಿತ ಒಟ್ಟು...

hardik-pandya-tirupati-balaji-darshan-news

Teamindia – ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ಹಾರ್ದಿಕ್ ಪಾಂಡ್ಯ..! ಬಾಲಾಜಿಗೆ ಮುಡಿಕೊಟ್ಟಿರುವುದು ಯಾಕೆ ಪಾಂಡ್ಯಾ..?

by admin
August 2, 2026
0

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ತಮ್ಮ ಗೆಳತಿ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ತಿರುಮಲ ವೆಂಕಟೇಶ್ವರನಿಗೆ...

jaismine-lamboria-life-story-commonwealth-games-gold

cwg-2026- ಆಸ್ಪತ್ರೆಯಿಂದ ಕಾಮನ್‌ವೆಲ್ತ್ ಚಿನ್ನದವರೆಗೆ..! ಬಾಕ್ಸಿಂಗ್ ರಾಣಿಯ ಹೋರಾಟದ ಯಶೋಗಾಥೆ..!

by admin
August 2, 2026
0

ಸುಮಾರು ಒಂದುವರೆ ತಿಂಗಳ ಹಿಂದೆ. ಆಕೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಳು. ಗ್ಲೌಸ್ ಧರಿಸಿ ಅಭ್ಯಾಸ ನಡೆಸಬೇಕಿದ್ದ ಕೈಗಳಿಗೆ ಚಿಕಿತ್ಸೆಯ ಸೂಜಿಗಳು ಚುಚ್ಚಿಕೊಂಡಿದ್ದವು. ಹಲವು ದಿನಗಳ ಕಾಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram