ಕರ್ನಾಟಕ-ಜಮ್ಮು ಕಾಶ್ಮೀರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಮೇಲೆ ಸೂರ್ಯ ಕೃಪೆ ತೋರಿದ್ದು, ಎರಡು ದಿನಗಳ ಕಾಯುವಿಕೆ ನಂತರ ಪಂದ್ಯ ಆರಂಭವಾಗಿದೆ. ಇದರೊಂದಿಗೆ ಮ್ಯಾಚ್ ರದ್ದಾಗುವ ಭೀತಿ ಬಹುತೇಕ ದೂರವಾಗಿದೆ. ಜಮ್ಮು-ಕಾಶ್ಮೀರದ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಮೂರನೇ ದಿನದ ರಣಜಿ ಕ್ವಾರ್ಟಲ್ ಫೈನಲ್ ಪಂದ್ಯ ಆರಂಭವಾಗಿದೆ. ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಮೊದಲ ದಿನದ ಆಟದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿತ್ತು. ಮೊದಲ ದಿನದಲ್ಲಿ ಕೇವಲ ಆರು ಓವರ್ ಗಳ ಆಟ ನಡೆದಿತ್ತು. ಅದರಲ್ಲಿ ಕರ್ನಾಟಕ ಕೇವಲ 14 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿತ್ತು.
ಎರಡನೇ ದಿನ ಯಾವುದೇ ಆಟ ನಡೆದಿಲ್ಲ. ಇದೀಗ ಮೂರನೇ ದಿನದ ಆಟ ಆರಂಭವಾಗಿದ್ದು, ನಾಯಕ ಕರುಣ್ ನಾಯರ್ 4 ರನ್ ಗೆ ಔಟಾದರು. ಸದ್ಯ 21 ಓವರ್ ಗಳ ಆಟದಲ್ಲಿ 4 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ. ಮನೀಶ್ ಪಾಂಡೆ 37 ರನ್ ಗಳಿಸಿ ಔಟಾದರೆ, ಕೆ.ಸಿದ್ದಾರ್ಥ್ 34 ರನ್ ಮಾಡಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಮೋದಿ ನಿಂದಿಸಿದರೆ ಕೇಸ್ ಬೇಡ, ನಿಮ್ಮನ್ನು ಟೀಕಿಸಿದರೆ ಎಫ್ಐಆರ್ ಬೇಕಾ? ರಾಹುಲ್ ಗಾಂಧಿ ಬೂಟಾಟಿಕೆಗೆ ಸುಮಲತಾ ಅಂಬರೀಶ್ ಗರಂ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವವರ ಪರವಾಗಿ ಬ್ಯಾಟ್ ಬೀಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ವಿರುದ್ಧ ಪೋಸ್ಟ್ ಹಾಕುವವರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು...








