ಕಲಬುರಗಿ: ನೇಮಕಾತಿ ಸಂದರ್ಭದಲ್ಲಿ ನಕಲಿ ಅಂಕಪಟ್ಟಿ ನೀಡಿ ಅಭ್ಯರ್ಥಿಗಳು ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಅಂಚೆ ಇಲಾಖೆಯ 1,714 ಹುದ್ದೆಗಳ ನೇಮಕಾತಿಯಲ್ಲಿ (Postal Department Recruitment) ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ನಕಲಿ ಮಾರ್ಕ್ ಕಾರ್ಡ್ ನೀಡಿ ಸಿಕ್ಕಿಬಿದ್ದಿದ್ದಾರೆ.
ಅಂಚೆ ಇಲಾಖೆಯಿಂದ ಅಂಕಪಟ್ಟಿ ಪರಿಶೀಲನೆ ವೇಳೆ ಎಂಟು ಜನ ಅಭ್ಯರ್ಥಿಗಳು ಸಿಕ್ಕಿ ಬಿದ್ದಿದ್ದು, ಅಭ್ಯರ್ಥಿಗಳ ವಿರುದ್ಧ ಅಂಚೆ ಇಲಾಖೆಯಿಂದ ವಂಚನೆ ದೂರು ನೀಡಲು ಸಿದ್ಧತೆ ನಡೆಸಲಾಗುತ್ತಿದೆ.
ಕಲಬುರಗಿಯಲ್ಲಿಯೇ ಮತ್ತೊಂದು ಅಕ್ರಮ ಬಯಲಿಗೆ ಬಂದಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ಪಿಎಸ್ ಐ ಹಗರಣ ಕೂಡ ಇಲ್ಲಿಯೇ ಬೆಳಕಿಗೆ ಬಂದಿತ್ತು.








