ಔಷಧೀಯ ಡ್ರಿಪ್ ಬದಲಿಗೆ ನಲ್ಲಿ ನೀರು ಹಾಕಿ 10 ಜನರ ಸಾವಿಗೆ ಶುಶ್ರೂಷಕಿ ಕಾರಣವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಹಲವು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದರು, ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದಿರುವುದಕ್ಕೆ ವೈದ್ಯರಿಗೆ ಅನುಮಾನ ಉಂಟಾಗಿತ್ತು. ಇದಲ್ಲದೇ ಫೆಂಟಾನಿಲ್ ಐವಿ ಡ್ರಿಪ್ ಹಾಕಿಸಿಕೊಂಡವರಷ್ಟೇ ಸಾವನ್ನಪ್ಪುತ್ತಿರುವುದು ಕೂಡ ವೈದ್ಯರ ಅನುಮಾನಕ್ಕೆ ಕಾರಣವಾಗಿತ್ತು.
ಹೀಗಾಗಿ ತಮ್ಮ ಆಸ್ಪತ್ರೆಯಲ್ಲಿದ್ದ ಫೆಂಟಾನಿಲ್ ಐವಿ ಡ್ರಿಪ್ ಪ್ಯಾಕೆಟ್ ಗಳನ್ನು ಲ್ಯಾಬ್ ಕಳುಹಿಸಿ ಪರೀಕ್ಷಿಸಿದಾಗ ಅವುಗಳಲ್ಲಿ ಸಾಮಾನ್ಯವಾದ, ಹೈಜೆನಿಕ್ ಅಲ್ಲದ ನಲ್ಲಿ ನೀರು ಇರುವುದು ಗೊತ್ತಾಗಿದೆ. ಈ ಪ್ರಕರಣ ಬೆಳಕಿಗೆ ಬರುವಷ್ಟರಲ್ಲಿಯೇ ಆಸ್ಪತ್ರೆಯಲ್ಲಿ 10 ಜನ ಸಾವನ್ನಪ್ಪಿದ್ದರು ಎನ್ನಲಾಗಿದೆ. ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ಶುಶ್ರೂಷಕಿಯೊಬ್ಬಳು ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ.
ಅಷ್ಟರಲ್ಲಿ ಮಹಿಳೆ ಕೆಲಸ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಘಟನೆ ಅಮೆರಿಕದ ಒರೆಗಾನ್ ರಾಜ್ಯದ ಮೆಡ್ ಫೋರ್ಡ್ ನಲ್ಲಿನ ಅಸ್ಯಾಂಟ್ ರೊಗ್ ರೀಜನಲ್ ಮೆಡಿಕಲ್ ಸೆಂಟರ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.








