ಕಲಬುರಗಿ: ಹಾಲು ತರಲು ಹೋಗಿದ್ದ 5 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಇಲ್ಲಿಯ ಮಿಸ್ಬಾನಗರದಲ್ಲಿ ನಡೆದಿದೆ.
5 ವರ್ಷದ ರಶೀದ್ ಅಶ್ಫಕ್ (5) ನಾಯಿ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಶೀದ್ ಹಾಲು ತರಲು ಅಂಗಡಿಗೆ ಹೋಗುತ್ತಿದ್ದಾಗ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿವೆ.
ನಗರದಲ್ಲಿ ಇತ್ತೀಚೆಗೆ ನಾಯಿಗಳ ದಾಳಿ ಹೆಚ್ಚಾಗಿದ್ದು, ಜನರು ಭಯದಿಂದ ಓಡಾಡುವಂತಾಗಿದೆ. ಕಲೆದ ವಾರವಷ್ಟೇ ಬಾಲಕಿ ನಾಯಿಗಳ ದಾಳಿಗೆ ತುತ್ತಾಗಿದ್ದಳು. ನಾಯಿಗಳ ಹಾವಳಿ ತಡೆಗಟ್ಟಬೇಕೆಂದು ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಪಾಲಿಕೆ ಮಾತ್ರ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.








