ಹೈದರಾಬಾದ್: ಭಾರತೀಯರು ಕಾತುರದಿಂದ ಕಾಯುತ್ತಿರುವ ರಾಮನ ಅಯೋಧ್ಯೆ ಶ್ರೀರಾಮಂದಿರ (Ayodhya Ram Mandir) ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಭಕ್ತರು ಬಗೆ ಬಗೆಯ ಕಾಣಿಕೆ ಅರ್ಪಿಸುತ್ತಿದ್ದಾರೆ. ಸದ್ಯ ವೃದ್ಧ ಭಕ್ತರೊಬ್ಬರು ಪಾದುಕೆ ಹೊತ್ತು ಬರೋಬ್ಬರಿ 7200 ಕಿ.ಮೀ ಪಾದಯಾತ್ರೆ ಹೊರಟಿದ್ದಾರೆ.
ತೆಲಂಗಾಣದ 64 ವರ್ಷದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ (Challa Srinivas Sastry) ಪ್ರಾಣ ಪ್ರತಿಷ್ಠೆಗೂ ಮುನ್ನ ʻಚರಣ ಪಾದುಕೆʼಗಳನ್ನ (Khadaun Charan Paduka) ಹೊತ್ತು ಬರೋಬ್ಬರಿ 7,200 ಕಿಮೀ ಪಾದಯಾತ್ರೆ ಹೊರಟಿದ್ದಾರೆ.
ರಾಮ ನಡೆದಾಡಿದ್ದ ರಸ್ತೆಯ ಮೂಲಕವೇ ತೆರಳಿ ರಾಮಮಂದಿರಕ್ಕೆ ವಿಶೇಷ ಕಾಣಿಕೆ ಅರ್ಪಿಸಲು ಮುಂದಾಗಿದ್ದಾರೆ. ಈ ಮೂಲಕ ಅವರು 8 ಕೆಜಿ ಬೆಳ್ಳಿ ಬಳಸಿ ಸಿದ್ಧಪಡಿಸಲಾದ ಚರಣ ಪಾದುಕೆ ಹೊತ್ತು ಅವರು ರಾಮ ಮಂದಿರ ತಲುಪಲಿದ್ದಾರೆ. ಜನವರಿ 15 ಅಥವಾ 16 ರಂದು ಪಾದುಕೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ಇದರೊಂದಿಗೆ ದಕ್ಷಿಣ ಭಾರತದಿಂದ ಬರುವವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ, 10 ಸಾವಿರ ಲಡ್ಡು ವಿತರಿಸಲಿದ್ದೇವೆ ಎಂದು ಹೇಳಿದ್ದಾರೆ.








