ADVERTISEMENT
Monday, July 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifaworldcup2026- ಬದಲಿ ಆಟಗಾರನ ಬಂಗಾರದಂತಹ ಗೋಲು- ಗೂಳಿಗಳ ಅಟ್ಟಹಾಸಕ್ಕೆ ಬೆದರಿದ ಮೆಸ್ಸಿ ಹುಡುಗರು..! ಸ್ಪೇನ್ ಈಗ ಫಿಫಾ ವಿಶ್ವಕಪ್ ಚಾಂಪಿಯನ್..!

admin by admin
July 20, 2026
in Newsbeat, Sports, ಕ್ರೀಡೆ
spain fifa worldcup champion 2026

spain fifa worldcup champion 2026

Share on FacebookShare on TwitterShare on WhatsappShare on Telegram

ಬದಲಿ ಆಟಗಾರನ ಬಂಗಾರದಂತಹ ಗೋಲು- ಗೂಳಿಗಳ ಅಟ್ಟಹಾಸಕ್ಕೆ ಬೆದರಿದ ಮೆಸ್ಸಿ ಹುಡುಗರು..! ವಿಶ್ವ ಚಾಂಪಿಯನ್ ಸ್ಪೇನ್‍ಗೆ ಅಭಿನಂದನೆಗಳು..! ಮೆಸ್ಸಿ ಮಿಸ್ ಯೂ..? ಆದ್ರೂ ಮೆಸ್ಸಿ, ಮೆಸ್ಸಿ..ಮೆಸ್ಸಿ..! ಈ ಮಂತ್ರ ಘೋಷಗಳು… ಅದು ,ಎಂದು, ಎಂದಿಗೂ, ಎಂದೆಂದಿಗೂ.. ಮರೆಯಲಾಗದ ಫುಟ್‍ಬಾಲ್ ಜಗತ್ತಿನ ನಾಮಸ್ಮರಣೆ…!

ಇದು 2026ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಮ್ಯಾಚ್ ರಿಪೋರ್ಟ್..!
ಅಮೆರಿಕಾದ ಹೈಫೈ ಮೈದಾನದಲ್ಲಿ ಎರಡು ಬಲಿಷ್ಠ ತಂಡಗಳ 22 ಆಟಗಾರರು ಹೋರಾಟ ನಡೆಸುತ್ತಿದ್ದರು. ಈ ಪಂದ್ಯವನ್ನು ಸುಮಾರು 80 ಸಾವಿರ ಪ್ರೇಕ್ಷರು ಗ್ಯಾಲರಿಯಲ್ಲಿ ಕುಳಿತು ನೋಡುತ್ತಿದ್ದರು. ಜಗತ್ತಿನ ಕೋಟ್ಯಂತರ ಅಭಿಮಾನಿಗಳು ಟಿವಿಯಲ್ಲಿ ವೀಕ್ಷಿಸುತ್ತಿದ್ದರು.

Related posts

Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

July 20, 2026
ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

July 20, 2026

ಹೌದು, ಈ ಪೈನಲ್ ಪಂದ್ಯ ನಿರಾಸೆಪಡಿಸಲಿಲ್ಲ.

ಯಾಕಂದ್ರೆ,  ಕೊನೆಯ ತನಕ ಪಂದ್ಯವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಅವರು ಆರ್ಭಟಿಸಿದ್ರು. ಅಷ್ಟೇ ಸುಂದರವಾಗಿ, ಅದ್ಭುತವಾಗಿಯೂ ಆಡಿದ್ರು. ಅಂತಿಮವಾಗಿ ಒಂದು ಕುತೂಹಲಕಾರಿ ಹಾಗೂ ರೋಚಕ ಫೈನಲ್ ಪಂದ್ಯವನ್ನು ಗೆದ್ದುಬಿಟ್ರು. ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ್ರು. ಕನಸಿನ ಫಿಫಾ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡು ಸಂಭ್ರಮಿಸಿದ್ರು. ಫಿಫಾ ವಿಶ್ವಕಪ್‍ನಲ್ಲಿ ಮತ್ತೊಮ್ಮೆ ಹೊಸ ಇತಿಹಾಸ ಬರೆದ್ರು.

ಹೀಗೆ ಬರೆದಷ್ಟು ಸುಲಭವಾಗಿ ಅವರು ಗೆದ್ದಿಲ್ಲ. ಈ ಗೆಲುವಿನ ಹಿಂದೆ ಬದ್ದತೆ ಇದೆ. ಬೆವರ ಹನಿಗಳ ಶ್ರಮವಿದೆ. ಮೈದಾನದಲ್ಲಿ ಅನುಭವಿಸಿದ್ದ ನೋವಿನ ಯಾತನೆ ಇದೆ. ಆದ್ರೆ ಒಂದೇ ಒಂದು ಗೆಲುವು, ಒಂದು ಕನಸಿನ ಟ್ರೋಫಿ ಎಲ್ಲವನ್ನೂ ಮರೆಮಾಚುವಂತೆ ಮಾಡಿದೆ. ಅವರ ಮುಖದಲ್ಲಿ ಮಂದಹಾಸದ ನಗು ಮೂಡಿದೆ. ವೃತ್ತಿ ಬದುಕಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಸಾರ್ಥಕತೆ ಇದೆ. ದೇಶದ ಹಿರಿಮೆಯನ್ನು ಹೆಚ್ಚಿಸಿದ ಹೆಗ್ಗಳಿಕೆ ಇದೆ. ಇದಕ್ಕೆಲ್ಲ ಕಾರಣ ಫಿಫಾ ವಿಶ್ವಕಪ್ ಎಂಬ ಮಾಯಾಂಗನೆ..!

ನಿಜ, ಅವರು, ಫೈನಲ್ ಪಂದ್ಯವನ್ನು ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದಿದ್ರು. ಅದಕ್ಕಾಗಿ ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ್ರು. ತಮ್ಮ ಟಿಕಿ – ಟಾಕಾ ಶೈಲಿಯ ಆಟದ ಜೊತೆ ಹೆಚ್ಚುವರಿಯಾಗಿ ವೇಗದ ವಿಂಗರ್‍ಗಳನ್ನು ಬಳಸಿಕೊಂಡ್ರು. ಪ್ರತಿ ಕ್ಷಣದಲ್ಲೂ ಪ್ರತಿಸ್ಪರ್ಧಿ ತಂಡಕ್ಕೆ ಒತ್ತಡ ಹೇರುವ ರಣ ತಂತ್ರ ರೂಪಿಸಿದ್ರು.

ಹಾಗೇ, ಪದೇ ಪದೇ ಎದುರಾಳಿ ತಂಡದ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಿದ್ರು. 4-1-2-3 ಗೇಮ್ ಪ್ಲಾನ್‍ನೊಂದಿಗೆ ಚಕ್ರವ್ಯೂಹವನ್ನು ರಚಿಸಿಕೊಂಡ್ರು. ಡಿಫೆಂಡರ್ಸ್‍ಗಳು ರಕ್ಷಣಾ ಕೋಟೆಯ ಬಳಿ ಹದ್ದಿನ ಕಣ್ಣಿನಂತೆ ಕಾವಲುಗಾರರಾಗಿ ನಿಂತ್ರು. ಮಿಡ್ ಫೀಲ್ಡರ್‍ಗಳು ಎದುರಾಳಿಗಳ ಕೌಂಟರ್ ಅಟ್ಯಾಕ್‍ಗಳನ್ನು ತಡೆದ್ರು. ತಂಡದ ಮಹಾಗೋಡೆಯಾಗಿ ಗೋಲು ಕೀಪರ್ ಆಧಾರವಾದ್ರು..

ಈ ನಡುವೆ ಸ್ಟ್ರೈಕರ್ ಮತ್ತು ವಿಂಗರ್‍ಗಳು ಗೋಲು ಹೊಡೆಯಲು ಹೊಂಚು ಹಾಕಿ ಕಾಯುತ್ತಿದ್ದರು. ಆದ್ರೂ ಪೂರ್ವಾರ್ಧದ ಆಟವನ್ನು ಗೋಲು ರಹಿತವಾಗಿ ಮುಗಿಸಿದ್ರು. ಈ ನಡುವೆ ಪಾಪ್ ಸಿಂಗರ್ ಶಕೀರಾ ಮತ್ತು ಬಿಟಿಎಸ್‌ನ ಜಿಮಿನ್ ಮತ್ತು ಜಂಗ್ ಕೂಕ್ ಅವರ ಡಾನ್ಸ್ ಹಾಗೂ ಹಾಡಿನ ಮೂಲಕ ಪ್ರೇಕ್ಷಕರ ಮನತಣಿಸಿದ್ರು. ದ್ವಿತೀಯಾರ್ಧದಲ್ಲೂ ಉಭಯ ತಂಡಗಳ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದ್ರು  ಕೊನೆಗೆ ನಿಗದಿತ ಅವಧಿಯನ್ನು ಗೋಲು ರಹಿತವಾಗಿಯೇ ಕೊನೆಗೊಳಿಸಿದ್ರು. ಇಡೀ ಪಂದ್ಯದಲ್ಲಿ ಆ ಗ್ಯಾಂಬ್ಲರ್ ಆಟಗಾರನ ಮ್ಯಾಜಿಕ್ ಆಟಕ್ಕೂ ಅವರು ಕಡಿವಾಣ ಹಾಕಿದ್ರು.

ಬಳಿಕ ಹೆಚ್ಚುವರಿ ಆಟದ ಸಮಯ. ಇಲ್ಲಿ ಇವರ ಕೋಚ್ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡ್ರು. ಪಂದ್ಯದ 105ನೇ ನಿಮಿಷದಲ್ಲಿ ಬದಲಿ ಆಟಗಾರನನ್ನು ಮೈದಾನಕ್ಕಿಳಿಸಿದ್ರು. ಪರಿಣಾಮ 106ನೇ ನಿಮಿಷದಲ್ಲಿ ಈ ಬದಲಿ ಆಟಗಾರನೇ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ರು. ಮುಂದೆ ಐತಿಹಾಸಿಕ ಫೈನಲ್ ಪಂದ್ಯದ ಗೆಲುವಿನ ರೂವಾರಿಯಾದ್ರು..

ಅಂದ ಹಾಗೇ, ಫೈನಲ್ ಮ್ಯಾಚ್‍ನ ಕೊನೆಯ ತನಕವೂ ಅವರು, ಹಾಲಿ ಚಾಂಪಿಯನ್ನರ ವಿರುದ್ಧ ಎದೆಗಾರಿಕೆಯ ಆಟವನ್ನೇ ಪ್ರದರ್ಶಿಸಿದ್ರು. ಅಲ್ಲದೆ, ಕ್ಲೈಮ್ಯಾಕ್ಸ್ ಹಂತದಲ್ಲಿ ಆ ಮಾಯಾವಿ ಆಟಗಾರನ ಮ್ಯಾಜಿಕ್ ಆಟ ನಡೆಯದಂತೆ ನೋಡಿಕೊಂಡ್ರು. ಪ್ರತಿ ಹಂತದಲ್ಲೂ ಟೂರ್ನಿಯ ಫೇವರಿಟ್ ತಂಡಕ್ಕೆ ಸಡ್ಡು ಹೊಡೆದ್ರು. ಇತ್ತ ಅಭಿಮಾನಿಗಳನ್ನು ಕೊನೆಯ ಕ್ಷಣದವರೆಗೂ ರೋಮಾಂಚನಗೊಳಿಸುವಂತೆಯೂ ಮಾಡಿದ್ರು.

ಅಂತಿಮವಾಗಿ 1-0 ಅಂತರದಿಂದ ಗೆದ್ದು, 2026ರ ಫಿಫಾ ವಿಶ್ವಕಪ್ ಟೂರ್ನಿಯ ಚಾಂಪಿಯನ್ನರಾಗಿ ಹೊರಹೊಮ್ಮಿದ್ರು. ಹಾಲಿ ಚಾಂಪಿಯನ್ನರ ಕನಸುಗಳನ್ನು ಕೊನೆ ಕ್ಷಣದಲ್ಲಿ ಭಗ್ನಗೊಳಿಸಿದ್ರು. ವಿಶ್ವ ಫುಟ್‍ಬಾಲ್‍ನ ಸರ್ವಶ್ರೇಷ್ಠ ಆಟಗಾರನನ್ನು ಕಣ್ಣೀರಿನೊಂದಿಗೆ ಮೈದಾನದಿಂದ ಹೊರಗೆ ಕಳುಹಿಸಿದ್ರು.

ಅಮೆರಿಕಾ ಅಧ್ಯಕ್ಷನ ಕೈಯಿಂದಲೇ ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿಸಿಕೊಂಡ್ರು. ಮಿನುಗುವ ಫಿಫಾ ಟ್ರೋಫಿಯನ್ನು ವಿಶ್ವದ ದೊಡ್ಡಣ್ಣನ ಹಸ್ತದಿಂದಲೇ ಸ್ವೀಕರಿಸಿದ್ರು. ಕನಸಿನ ಟ್ರೋಫಿಯೊಂದಿಗೆ ಮನಬಂದಂತೆ ಕುಣಿದಾಡಿದ್ರು. ಪ್ರಿಯತಮೆಯ ಪ್ರೀತಿಯನ್ನು ಒಲಿಸಿಕೊಂಡಂತೆ, ಫಿಫಾ ಟ್ರೋಫಿಗೆ ಮನಸಾರೆ ಚುಂಬಿಸಿದ್ರು. ಚಿನ್ನದ ಗೊಂಬೆಯಂತಿರುವ ಹೊಳೆಯುವ ಫಿಫಾ ಟ್ರೋಫಿಯನ್ನು ಅಧಿಕಾರಯುತವಾಗಿ ಮುದ್ದಾಡಿದ್ರು.

ಲಾಲಿ ಹಾಡಿನ ಮೂಲಕ ತಾಯಿ ತನ್ನ ಮಗುವನ್ನು ತೂಗುವಂತೆ, ಫಿಫಾ ಟ್ರೋಫಿಯನ್ನು ಎರಡು ಕೈಗಳಲ್ಲಿ ಎತ್ತಿ ಹಿಡಿದು ಕೊಂಡಾಟದಿಂದ ಅವರು ತೂಗಿದರು. ವಿಜಯೋತ್ಸಹದ ಸಂಭ್ರಮದಲ್ಲಿ ಟ್ರೋಫಿಯನ್ನು ಮೇಲಕ್ಕೆತ್ತಿ ನಾವೇ ಚಾಂಪಿಯನ್ನರು ಎಂದು ಸಾರಿ ಸಾರಿ ಹೇಳಿದ್ರು. ಗೆಲುವಿನ ಉನ್ಮಾದದಲ್ಲಿ ಆನಂದಬಾಷ್ಪ ಸುರಿಸಿದ್ರು. ಮಿನುಗುವ ಟ್ರೋಫಿಯೊಂದಿಗೆ ವೃತ್ತಿ ಬದುಕಿನ ಅವಿಸ್ಮರಣೀಯ ಕ್ಷಣಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದುಕೊಂಡ್ರು. ತಮ್ಮ ಗೆಲುವಿನಲ್ಲಿ ಭಾಗಿಯಾಗಿ, ಬೆಂಬಲ ನೀಡಿದ ನೆಚ್ಚಿನ ಅಭಿಮಾನಿಗಳಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ರು. ಇದರೊಂದಿಗೆ 2026ರ ಫಿಫಾ ವಿಶ್ವಕಪ್ ಟೂರ್ನಿಯ ಮಹಾ ಜಾತ್ರೆಗೆ ಈ ಚಾಂಪಿಯನ್ ಆಟಗಾರರು ತೆರೆ ಎಳೆದ್ರು.

ಅಷ್ಟಕ್ಕೂ ನ್ಯೂಜೆರ್ಸಿಯ ಮೆಟ್‍ಲೈಫ್ ಅಂಗಣದಲ್ಲಿ ಈ ರೀತಿ ಗೆಲುವಿನ ಸಂಭ್ರಮ ಆಚರಿಸಿಕೊಂಡ ವಿಶ್ವದ ಬಲಿಷ್ಠ ಕಾಲ್ಚೆಂಡಿನ ತಂಡವೇ…..!

ಸ್ಪೇನ್..!

ಬರೀ ಯೂರೋಪ್‍ನ ಕಿಂಗ್ ಅಲ್ಲ. ಇದೀಗ ಜಾಗತಿಕ ಫುಟ್‍ಬಾಲ್‍ನ ಮಹಾರಾಜ. 2026ರ ಫಿಫಾ ವಿಶ್ವಕಪ್ ಟೂರ್ನಿಯ ಚಾಂಪಿಯನ್.

ಹಾಗಂತ ಇದು ಅನಿರೀಕ್ಷಿತವಲ್ಲ. ಬಹುತೇಕ ನಿರೀಕ್ಷಿತ ಫಲಿತಾಂಶ. ಸ್ಪೇನ್ ತಂಡ ಅರ್ಹವಾಗಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0ಯಿಂದ ಹಾಲಿ ಚಾಂಪಿಯನ್ ಅರ್ಜೆಂಟಿನಾ ತಂಡವನ್ನು ಸೋಲಿಸಿದೆ. ಈ ಮೂಲಕ 16 ವರ್ಷಗಳ ಬಳಿಕ ಎರಡನೇ ಬಾರಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ.

ಇತ್ತ, ಈ ಸೋಲಿನೊಂದಿಗೆ ಅರ್ಜೆಂಟಿನಾ ತಂಡ ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಇದರೊಂದಿಗೆ ಫುಟ್‍ಬಾಲ್ ಜಗತ್ತಿನ ಎವರ್ ಗ್ರೀನ್ ಪ್ಲೇಯರ್ ಮೆಸ್ಸಿಯ ಕನಸು ಕೂಡ ನುಚ್ಚುನೂರಾಗಿದೆ. ಬಹುಶಃ ಫುಟ್‍ಬಾಲ್ ಜಗತ್ತಿನ ಸರ್ವ ಶ್ರೇಷ್ಠ ಆಟಗಾರನ ಮಾಂತ್ರಿಕ ಆಟವನ್ನು ಮುಂದಿನ ವಿಶ್ವಕಪ್‍ನಲ್ಲಿ ನೋಡುವ ಅವಕಾಶ ಸಿಗೋದು ಡೌಟ್ ಅನ್ಸುತ್ತೆ…?

ಹಾಗೇ ನೋಡಿದ್ರೆ ಫೈನಲ್ ಮ್ಯಾಚ್‍ನಲ್ಲಿ ಸ್ಪೇನ್ ಗೂಳಿಗಳ ಆರ್ಭಟಕ್ಕೆ ಅರ್ಜೆಂಟಿನಾ ಆಟಗಾರರು ಕಂಗಾಲಾಗಿದ್ದರು. ಪ್ರತಿ ಹಂತದಲ್ಲೂ ಮೆಸ್ಸಿ ಹುಡುಗರನ್ನು ಕಟ್ಟಿ ಹಾಕಲು ಸ್ಪೇನ್ ಆಟಗಾರರು ಯಶಸ್ವಿಯಾಗಿದ್ರು. ಆದ್ರೆ ಸ್ಪೇನ್‍ನ ಪೆಡ್ರಿ, ಲಪೋರ್ಟೆ, ಕುಬಾರ್ಸಿ ಮತ್ತು ಕುಕುರೆಲ್ಲಾ ರಕ್ಷಣಾ ಕೋಟೆಯನ್ನು ಭೇದಿಸಲು ಅರ್ಜೆಂಟಿನಾ ಆಟಗಾರರಿಗೆ ಸಾಧ್ಯವಾಗಲಿಲ್ಲ. ಶಿಸ್ತು ಬದ್ಧ ಹಾಗೂ ಆಕ್ರಮಣಕಾರಿ ಆಟದ ಮೂಲಕ ಸ್ಪೇನ್ ಆಟಗಾರರು ಮೈದಾನದಲ್ಲಿ ಸಂಚಲನ ಮೂಡಿಸಿದ್ರು.

ಹೆಚ್ಚುವರಿ ಆಟದ ಸಮಯದಲ್ಲಿ ಸ್ಪೇನ್ ಆಟಗಾರರು ಗೂಳಿಗಳಂತೆ ಅರ್ಜೆಂಟಿನಾ ಮೇಲೆ ಮುಗಿಬಿದ್ದರು. ಪರಿಣಾಮ ಪಂದ್ಯದ 105ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ಅದ್ಭುತವಾದ ಗೋಲು ದಾಖಲಿಸಿದ್ರು. ಇದರೊಂದಿಗೆ ಸ್ಪೇನ್ ಗೆಲುವನ್ನು ಖಚಿತಪಡಿಸಿಕೊಂಡ್ರೂ ಮೆಸ್ಸಿಯ ಕೊನೆ ಕ್ಷಣದ ಗ್ಲ್ಯಾಂಬ್ಲಿಂಗ್ ಆಟದ ಭಯವಿತ್ತು. ಆದ್ರೆ ಸ್ಪೇನ್ ಗೂಳಿಗಳು ಅರ್ಜೆಂಟಿನಾ ತಂಡದ ಇಡೀ ಗೇಮ್ ಪ್ಲ್ಯಾನ್‍ನನ್ನೇ ಧ್ವಂಸಗೊಳಿಸಿದ್ರು.

ಒಟ್ಟಿನಲ್ಲಿ ಮೆಟ್‍ಲೈಫ್ ಅಂಗಣದಲ್ಲಿ ಯಮಲ್ ಆಟ ಅಷ್ಟೊಂದು ಪರಿಣಾಮಕಾರಿಯಾಗದಿದ್ರೂ, ಫುಟ್‍ಬಾಲ್ ಜಗತ್ತಿನ ಭವಿಷ್ಯದ ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಹಾಗೇ ಆರು ಫಿಫಾ ವಿಶ್ವಕಪ್ ಆಡಿರುವ ಮೆಸ್ಸಿ ನೋವಿನಿಂದಲೇ ಮೈದಾನದಿಂದ ಹೊರನಡೆದಿದ್ದಾನೆ.

ಆದ್ರೆ ಮೆಸ್ಸಿ ಏನು ಸಾಧಿಸಬೇಕೋ ಅದನ್ನು ಸಾಧಿಸಿದ್ದಾನೆ. ಆ ಸಮಾಧಾನ, ತೃಪ್ತಿ ಆತನಿಗಿದೆ. ಆದ್ರೂ ಕೆಲವೊಂದು ಸೋಲುಗಳು ಎಂದಿಂಗೂ ಮರೆತು ಹೋಗುವುದಿಲ್ಲ. ಹಾಗೇ ಈ ಸೋಲು ಕೂಡ ಮೆಸ್ಸಿಯನ್ನು ಸದಾ ಕಾಡುತ್ತಿರುತ್ತದೆ. ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಸಂಕಟ ಪಡುತ್ತಿದ್ದ. ದೇಶಕ್ಕೆ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲಿಸಲು ಸಾಧ್ಯವಾಗಿಲ್ಲ ಎಂದು ಮೌನಕ್ಕೆ ಶರಣಾಗಿದ್ದ. ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯಲು ಮೆಸ್ಸಿಗೆ ಸಾಧ್ಯವಾಗಲಿಲ್ಲ. ತನ್ನ ಮನದಾಳದ ವೇದನೆ, ನೋವುಗಳಿಗೆ ಆತನ ಕಣ್ಣೀರೇ ಸಾಕ್ಷಿಯಾಗಿತ್ತು. ಸೋಲಿನಲ್ಲೂ ಅಭಿಮಾನಿಗಳ ಪ್ರೀತಿ, ಜೈಕಾರವನ್ನು ಕೇಳಿಸಿಕೊಂಡ ಮೆಸ್ಸಿಯ ಮುಖಭಾವದ ಆ ದೃಶ್ಯವನ್ನು ಬರೆಯಲು ಪದಗಳು ಸಿಗುತ್ತಿಲ್ಲ..!

ಕೊನೆಯ ಮಾತು.. ವಿಶ್ವ ಚಾಂಪಿಯನ್ ಸ್ಪೇನ್‍ಗೆ ಅಭಿನಂದನೆಗಳು..! ಹಾಗೇ ಮೆಸ್ಸಿ ಮಿಸ್ ಯೂ..? ಆದ್ರೂ ಮೆಸ್ಸಿ, ಮೆಸ್ಸಿ..ಮೆಸ್ಸಿ..! ಈ ಮಂತ್ರ ಘೋಷಗಳು… ಅದು ,ಎಂದು, ಎಂದಿಗೂ, ಎಂದೆಂದಿಗೂ.. ಮರೆಯಲಾಗದ ಫುಟ್‍ಬಾಲ್ ಜಗತ್ತಿನ ನಾಮಸ್ಮರಣೆ…!

ಸನತ್ ರೈ

saakshatv.com

#FIFAWorldCup2026 #SpainChampions #WorldChampions #MessiForever #FootballHistory #FootballEmotions #saakshatv #sanathrai

 

Tags: #FIFAWorldCup2026 #SpainChampions #WorldChampions #MessiForever #FootballHistory #FootballEmotions #saakshatv #sanathrai
ShareTweetSendShare
Join us on:

Related Posts

Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

by admin
July 20, 2026
0

ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು. ಋಣ ತೀರಿಸಲು ಕಾಲಭೈರವನ ಆರಾಧನೆ ಅಷ್ಟಮಿ ತಿಥಿಯು ಕಾಲಭೈರವನ ಆರಾಧನೆಯ ತಿಥಿ. ಅದೂ...

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

by Shwetha
July 20, 2026
0

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಗೆ ಪೂರಕವಾಗಿ ರಾಜ್ಯ ಸರ್ಕಾರವು ಜನಸಾಮಾನ್ಯರ ಹಾಗೂ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಅತ್ಯಂತ ಕ್ರಾಂತಿಕಾರಕ ಮತ್ತು ಕಠಿಣ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿದೆ....

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

by Shwetha
July 20, 2026
0

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿದ್ದ...

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಅದ್ಭುತ ದೃಶ್ಯಕಾವ್ಯ ಎಂದು ಕರೆಯಲ್ಪಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುಕೋಟಿ ವೆಚ್ಚದ ರಾಮಾಯಣ ಚಿತ್ರದ ಪ್ರಚಾರ ಕಾರ್ಯಕ್ಕೆ...

ವಾಂಗ್ಚುಕ್ ಹೆಸರಲ್ಲಿ ರಾಹುಲ್ ಗಾಂಧಿ ಮೊಸಳೆ ಕಣ್ಣೀರು- ಯುರೋಪ್ ನಲ್ಲಿ ಮೋಜು ಮಾಡಿ ಇಲ್ಲಿ ಟ್ವೀಟ್ ಮಾಡ್ತೀರಾ?: ರಾಹುಲ್ ಗಾಂಧಿ ಡಬಲ್ ಸ್ಟ್ಯಾಂಡರ್ಡ್ ಗೆ ಗುಡುಗಿದ NDA ನಾಯಕರು

ವಾಂಗ್ಚುಕ್ ಹೆಸರಲ್ಲಿ ರಾಹುಲ್ ಗಾಂಧಿ ಮೊಸಳೆ ಕಣ್ಣೀರು- ಯುರೋಪ್ ನಲ್ಲಿ ಮೋಜು ಮಾಡಿ ಇಲ್ಲಿ ಟ್ವೀಟ್ ಮಾಡ್ತೀರಾ?: ರಾಹುಲ್ ಗಾಂಧಿ ಡಬಲ್ ಸ್ಟ್ಯಾಂಡರ್ಡ್ ಗೆ ಗುಡುಗಿದ NDA ನಾಯಕರು

by Shwetha
July 20, 2026
0

ಲಡಾಖ್ ನಾಗರಿಕ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram