ಗಂಗಾಸಾಗರಕ್ಕೆ ತೆರಳುತ್ತಿದ್ದ ಮೂವರು ಸಾಧುಗಳ ಮೇಲೆ ಗುಂಪಿನಿಂದ ಹಲ್ಲೆ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳ(West Bengal)ದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳ ಮೇಲೆ ಹಲ್ಲೆ ಅಪಹರಣಕಾರರೆಂದು ಭಾವಿಸಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಈ ಘಟನೆ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ. ಸಾಧುಗಳು-ಒಬ್ಬ ವ್ಯಕ್ತಿ ಹಾಗೂ ಅವರ ಇಬ್ಬರು ಪುತ್ರರು, ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಗಂಗಾಸಾಗರ ತಲುಪಲು ವಾಹನ ಬಾಡಿಗೆ ಪಡೆದಿದ್ದರು. ಈ ವೇಳೆ ಮಾರ್ಗದ ಕುರಿತು ವಿಚಾರಿಸಿದಾಗ ಸ್ಥಳೀಯರು ಅನುಮಾನಗೊಂಡಿದ್ದಾರೆ. ಅಪಹರಣಕಾರರು ಎಂದು ಆರೋಪಿಸಿ ಆಕ್ರೋಶಗೊಂಡು ಯುವಕರ ಗುಂಪು, ಸಾಧುಗಳ ಮೇಲೆ ಹಲ್ಲೆ ನಡೆಸಿದೆ.
ಆದರೆ, ಮೂವರು ಹೆಣ್ಣು ಮಕ್ಕಳು ಕಿರುಚುತ್ತ ಓಡಿದ್ದಾರೆ. ಇದನ್ನು ಕಂಡ ಸ್ಥಳೀಯರು, ಸಾಧುಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ವಾಹನವನ್ನು ಧ್ವಂಸಗೊಳಿಸುವುದನ್ನು ನೋಡಬಹುದು. ಪೊಲೀಸರು ಮಧ್ಯ ಪ್ರವೇಶಿಸಿ ಸಾಧುಗಳನ್ನು ರಕ್ಷಿಸಿ ಕಾಸಿಪುರ ಪೊಲೀಸ್ ಠಾಣೆಗೆ ಕರೆ ತಂದರು. ಸದ್ಯ ಹಲ್ಲೆ ನಡೆಸಿದವರನ್ನು ಬಂಧಿಸಲು ಮುಂದಾಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








