ಇಂದು ಭಾರತದೊಂದಿಗೆ ಇಡೀ ಜಗತ್ತು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗಾಗಿ ಕಾಯುತ್ತಿದೆ. ಕೆನಡಾ ದೇಶವು ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ದಿನ ಎಂದು ಘೋಷಿಸಲು ನಿರ್ಧರಿಸಿದೆ.
ಕೆನಡಾದ ಮೂರು ಪುರಸಭೆಗಳು ಜ. 22ನ್ನು ಅಯೋಧ್ಯೆ ರಾಮಮಂದಿರ ದಿನ ಎಂದು ಘೋಷಿಸಿವೆ. ಹಿಂದೂ ಕೆನಡಿಯನ್ ಫೌಂಡೇಶನ್ (ಎಚ್‌ಸಿಎಫ್) ಸಂಸ್ಥಾಪಕ ಹಾಗೂ ಅಧ್ಯ ಕ್ಷ ಅರುಣೇಶ್ ಗಿರಿ ಮಾತನಾಡಿ, ವಿಶ್ವ ಜೈನ್ ಸಂಘಟನೆ ಕೆನಡಾ (ವಿಜೆಎಸ್‌ಸಿ) ಸಹಯೋಗದೊಂದಿಗೆ ಬ್ರಾಂಪ್ಟನ್, ಓಕ್‌ವಿಲ್ಲೆ ಮತ್ತು ಬ್ರಾಂಟ್‌ಫೋರ್ಡ್‌ನಲ್ಲಿ ಅಯೋಧ್ಯೆ ರಾಮಮಂದಿರ ದಿನವನ್ನು ಯಶಸ್ವಿಯಾಗಿ ಘೋಷಿಸಿದೆ.
ಮಾರಿಷಸ್ ನಲ್ಲಿ ಈ ದಿನ ಸ್ಮರಣೀಯವಾಗಿಸಲು, ದೀಪಗಳನ್ನು ಬೆಳಗಿಸಲಾಗುತ್ತದೆ.ಅಲ್ಲದೇ, ರಾಮಾಯಣ ಪಾರಾಯಣವೂ ನಡೆಯುತ್ತಿದೆ.
ಮಾರಿಷಸ್‌ನ ಎಲ್ಲಾ ದೇವಾಲಯಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ. ಮಾರಿಷಸ್ ಸರ್ಕಾರವು ಸರ್ಕಾರಿ ಹಿಂದೂ ನೌಕರರಿಗೆ ಜನವರಿ 22 ರಂದು ರಜೆ ನೀಡಲು ನಿರ್ಧರಿಸಿದೆ.








