ಅಯೋಧ್ಯೆ(Ayodhya)ಯಲ್ಲಿ ಪ್ರತಿಷ್ಟಾಪನೆಗೊಂಡಿರುವ ರಾಮಲಲ್ಲಾನ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.
ಇಂದಿನಿಂದ ಸಾರ್ವಜನಿಕರು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ನೂಕುನುಗ್ಗಲು ಆರಂಭವಾಗಿದೆ. ಬೆಳಿಗ್ಗೆ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.
ಚಳಿಯಲ್ಲಿಯೂ ತನ್ನ ದೇವರನ್ನು ಕಾಣಲು ಭಕ್ತರು ಆಗಮಿಸಿದ್ದರು. ದೇಗುಲದ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿದ್ದರು. ಜನರು ನಿರಂತರವಾಗಿ ಜೈ ಶ್ರೀ ರಾಮ್ ಹಾಗೂ ಸಿಯಾವರ ರಾಮ್ ಚಂದ್ರ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.
#WATCH | Ayodhya, Uttar Pradesh: Heavy rush outside the Ram Temple as devotees throng the temple to offer prayers and have Darshan of Shri Ram Lalla on the first morning after the Pran Pratishtha ceremony pic.twitter.com/gQHInJ5FTz
— ANI (@ANI) January 23, 2024
ಉದ್ಘಾಟನೆಯ ನಂತರ ಜನರ ಮನದಲ್ಲಿ ಭಕ್ತಿಯ ಮಹಾಪೂರವೇ ಹರಿದಿದೆ. ರಾಮ ಮಂದಿರದ ಮುಖ್ಯ ದ್ವಾರ ತೆರೆಯುತ್ತಿದ್ದಂತೆಯೇ ಭಕ್ತರ ದಂಡು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಒಳಗೆ ಬರಲು ಯತ್ನಿಸಿತು. ದೇವಾಲಯವು ಭಕ್ತರಿಗೆ ಬೆಳಗ್ಗೆ 7ಕ್ಕೆ ಬಾಗಿಲು ತೆರೆಯುತ್ತದೆ. ಭಕ್ತರು 11.30ರ ವರೆಗೆ ಪ್ರವೇಶಿಸಬಹುದು. ಮಧ್ಯಾಹ್ನ 2 ರಿಂದ 7ರ ವರೆಗೆ ಪ್ರವೇಶಕ್ಕೆ ಅವಕಾಶವಿರಲಿದೆ.








