ನೆಲಮಂಗಲ: ಕಾಮುಕನೊಬ್ಬ ಪರಿಚಯಸ್ಥ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangal) ಟೌನ್ ಪೊಲೀಸ್ (Police) ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಬೀದರ್ (Bidar) ಮೂಲದ ಯುವಕ ಶಿವಕುಮಾರ್ ಹೊಸಳ್ಳಿ (25) ಬಂಧಿತ ಆರೋಪಿ.
ನಗರದ ಚಿಕ್ಕಪೇಟೆಯಲ್ಲಿ ವಾಸವಾಗಿರುವ ಶಿವಕುಮಾರ್, ಆರು ವರ್ಷದ ಹಿಂದೆ (2018) ರಲ್ಲಿ ಉಡುಪಿಯಲ್ಲಿ (Udupi) ನಡೆದ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಯುವತಿಗೆ ಪರಿಚಯವಾಗಿದ್ದ. ನಂತರ ಯುವತಿಯ ತಾಯಿಯ ಹತ್ತಿರ ನಂಬರ್ ಪಡೆದು, ಮೆಸೆಜ್ ಮಾಡಲು ಆರಂಭಿಸಿದ್ದಾನೆ. 2018ರ ಮಾರ್ಚ್ನಲ್ಲಿ ನೆಲಮಂಗಲದಲ್ಲಿನ ಯುವತಿಯ ಮನೆಗೆ ತೆರಳಿ, ಯಾರೂ ಇಲ್ಲದ ವೇಳೆ ಅತ್ಯಾಚಾರ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಫೋನ್ ನಲ್ಲಿ ಫೋಟೋ, ವಿಡಿಯೋ ತೆಗೆದು ಯಾರಿಗಾದರೂ ಹೇಳಿದರೆ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾನೆ. ಆಗ ಯುವತಿಗೆ 16 ವರ್ಷ.
ಅಲ್ಲದೇ, ಸಂತ್ರಸ್ತೆಯಿಂದ 85 ಸಾವಿರ ಹಣ ಪೀಕಿದ್ದಾನೆ. ನಂತರ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸಂತ್ರಸ್ತೆಯ ಚಿಕ್ಕಪ್ಪನ ಮಗಳ ಮೊಬೈಲ್ ಗೆ ಕಳುಹಿಸಿದ್ದಾನೆ. ಜ. 30ರಂದು ಮತ್ತೆ ಸಂತ್ರಸ್ತೆಗೆ ಕರೆ ಮಾಡಿ ಬಾ ನಾನು ನಿನ್ನೊಂದಿಗೆ ಸಂಭೋಗ ಮಾಡಬೇಕು ಎಂದು ಬಲವಂತವಾಗಿ ಪೀಡಿಸಿದ್ದಾನೆ. ಆಗ ಯುವತಿ ವಿಚಾರವನ್ನು ತಂದೆ-ತಾಯಿಗೆ ತಿಳಿಸಿ, ಕೂಡಲೇ ಸಂತ್ರಸ್ತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








