ಮಡಿಕೇರಿ: ಲಾಕ್ಡೌನ್ ಸಡಿಲಿಕೆ ಬಳಿಕ ಕಾಫಿ ನಾಡು ಕೊಡಗು ಜಿಲ್ಲೆಯ ಜನರನ್ನು ಮಹಾಮಾರಿ ಕೊರೊನಾ ಕಾಡಲು ಶುರು ಮಾಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಹೆಚ್ಚಿಸಿದೆ.
ಕುಶಾಲ ನಗರದ ಮೆಡಿಕಲ್ ಶಾಪ್ ಮಾಲೀಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಬಂದಿದೆ. ಹೀಗಾಗಿ ಮೆಡಿಕಲ್ ಶಾಪ್ನಲ್ಲಿ ಔಷಧಿ ಖರೀದಿಸಿ ಹೋದವರಿಗೂ ಆತಂಕ ಶುರುವಾಗಿದೆ.
ಸೋಮವಾರಪೇಟೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಬಂದಿದೆ. ಕರ್ಕಳ್ಳಿ ಬಾಣೆಯ ೧೪ ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಸಂಬAಧಿ ಹಣ್ಣಿನ ವ್ಯಾಪಾರಿಯೊಂದಿಗೆ ಪ್ರಾಥಮಿಕ ಸಂಪರ್ಕದಿAದ ಬಲಕಿಗೆ ಸೋಂಕು ಹರಡಿದೆ. ಬಾಲಕಿಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಸಂಪೂರ್ಣ ಕರ್ಕಳ್ಳಿ ಕ್ಲಸ್ಟರ್ ಪ್ರದೇಶ ವೆಂದು ಘೋಷಿಸಲಾಗಿದೆ. ಸೋಂಕಿತ ಬಾಲಕಿಯ ಮನೆಯಿಂದ ೧೦೦ ಮೀಟರ್ ಮುಂದಿನ ಪ್ರದೇಶದ ವರೆಗೆ ನಿರ್ಬಂಧಿತ ಪ್ರದೇಶ ಎಂದು ಘೋಷಣೆ ಮಾಡಿ ತಹಶೀಲ್ದಾರ್ ಗೋವಿಂದರಾಜು ಆದೇಶ ಹೊರಡಿಸಿದ್ದಾರೆ.
ಕೊಡಗಿನ ಪಾಲಿ ಬೆಟ್ಟದಲ್ಲಿ ೨ ಕೊರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದೆ. ಪಾಲಿಬೆಟ್ಟದ ಟಾಟಾ ಕಾಫಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ-ಪತ್ನಿಗೆ ಕೊರೊನಾ ಬಂದಿದೆ.
ವಾರದ ಸಂತೆಗಳು ಬಂದ್..!
ಕೊಡಗು ಜಿಲ್ಲೆಯ ಹಲವು ಕಡೆ ಕೊರೊನಾ ಹಬ್ಬುತ್ತಿರುವ ಹಿನ್ನೆಯಲ್ಲಿ ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಸಂತೆಗಳನ್ನು ರದ್ದು ಮಾಡಲಾಗಿದೆ. ಎರಡು ವಾರಗಳ ಕಾಲ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂತೆ ರದ್ದುಗೊಳಿಸಿದ ತಾಲೂಕು ಆಡಳಿತ ಆದೇಶ ಹೊರಡಿಸಿದೆ.
ಇಂದಿನಿAದ ೧೦ ದಿನ ಶನಿವಾರಸಂತೆ ಪಟ್ಟಣ ಸ್ವಯಂಪ್ರೇರಿತ ಲಾಕ್ಡೌನ್ಗೆ ನಿರ್ಧಾರ ಮಾಡಲಾಗಿದೆ. ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೧೨ ವರೆಗೆ ಅಂಗಡಿ ಓಪನ್ ಮಾಡಲು ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ.
ಅಂತರ ಕಾಯ್ದುಕೊಳ್ಳದ ಗ್ರಾಹಕರು
ಕೊಡಗಿನಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದ್ದರೂ ಮಡಿಕೇರಿ ನಗರದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರ್ಲಕ್ಷö್ಯ ವಹಿಸಿದ್ದಾರೆ. ಮಡಿಕೇರಿ ಮಾರುಕಟ್ಟೆ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಖರೀದಿಗೆ ಮುಗಿಬಿದ್ದಿದ್ದಾರೆ. ಶುಕ್ರವಾರದ ಮಾರುಕಟ್ಟೆ ಮುಚ್ಚಿದ್ದರೂ ಕೂಡ ಜನದಟ್ಟಣೆ ಕಂಡು ಬರುತ್ತಿದೆ. ಹೀಗಾಗಿ ನಿಯಮ ಮೀರಿದ ಅಂಗಡಿಗಳನ್ನು ಪೊಲೀಸರೇ ಮುಚ್ಚಿಸುತ್ತಿದ್ದಾರೆ.








