ಮುಂಬೈ: 1993ರ ಸರಣಿ ಸ್ಪೋಟದ ಮಾಸ್ಟರ್ ಮೈಂಡ್ ಟೈಗರ್ ಮೆಮೋನ್ ಸಹೋದರ ಯೂಸುಫ್ ಮೆಮೋನ್ ಜೈಲಿನಲ್ಲಿ ಮೃತಪಟ್ಟಿದ್ದಾನೆ.
ಮುಂಬೈನ ನಾಸಿಕ್ ಜೈಲಿನಲ್ಲಿ ಯೂಸುಫ್ ಮೆನನ್ ಮೃತಪಟ್ಟಿದ್ದಾನೆ. ಯೂಸುಫ್ ಅನಾರೋಗ್ಯದಿಂದ ಮೃತಪಟ್ಟಿದ್ದರೂ ಸಾವಿನ ಕಾರಣ ತಿಳಿಯಬೇಕಿದೆ. ಹೀಗಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಯೂಸುಫ್ ಮೆನೋನ್, 1993 ಮುಂಬೈ ಸರಣಿ ಸ್ಪೋಟದ ಅಪರಾಧಿ. ದಾವುದ್ ಇಬ್ರಾಹಿಂ ಹಾಗೂ ಟೈಗರ್ ಮೆಮೋನ್ ಸಂಚಿನಂತೆ ಸರಣಿ ಸ್ಫೋಟ ನಡೆಸಲು ಉಗ್ರರಿಗೆ ತನ್ನ ಗ್ಯಾರೇಜ್ ಹಾಗೂ ಫ್ಲಾಟ್ ಕೊಟ್ಟ ಆರೋಪದ ಮೇರೆಗೆ ಯೂಸುಫ್ಗೆ ವಿಶೇಷ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
1993ರ ಸರಣಿ ಸ್ಫೋಟದ ನಂತರ ಟೈಗರ್ ಮೆಮೋನ್ ಹಾಗೂ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾರೆ. ಮೆಮೋನ್ನ ಮತ್ತೊಬ್ಬ ಸಹೋದರ ಯಾಕುಬ್ ಮೆಮೋನ್ನನ್ನು 2015ರಲ್ಲಿ ಗೆಲ್ಲಿಗೇರಿಸಲಾಗಿತ್ತು.







