ಭಾರತೀಯ ಸೇನೆ ಚೀನಾದ ಯಾವುದೇ ಆಕ್ರಮಣ ತಡೆಯುವ ಸಾಮರ್ಥ್ಯ ಹೊಂದಿದೆ – ನಾರವಾನೆ
ಹೊಸದಿಲ್ಲಿ, ಜೂನ್ 27: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಅವರು ಪೂರ್ವ ಲಡಾಕ್‌ನಲ್ಲಿನ ಕಾರ್ಯಾಚರಣೆಯ ಪರಿಸ್ಥಿತಿಯ ಬಗ್ಗೆ ಈ ಪ್ರದೇಶದಲ್ಲಿ ಈಗ ನಿಯೋಜಿಸಲಾಗಿರುವ ಭಾರತೀಯ ಸೇನೆಯ ಸಾಮರ್ಥ್ಯ ಚೀನಾದಿಂದ ಯಾವುದೇ ಆಕ್ರಮಣಕಾರಿ ಒತ್ತಡ ಅಥವಾ ದೊಡ್ಡ ದುಷ್ಕೃತ್ಯವನ್ನು ತಡೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಪೂರ್ವ ಲಡಾಕ್‌ನ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ ಬಳಿಕ ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮತ್ತೊಂದು ಸಭೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಭಾರತವು ಈ ಪ್ರದೇಶದಲ್ಲಿ ಟ್ಯಾಂಕ್‌ಗಳು, ಕಾಲಾಳುಪಡೆ ಯುದ್ಧ ವಾಹನಗಳು ಮತ್ತು ಶಸ್ತ್ರಾಸ್ತ್ರಗಳ ಬೆಂಬಲದೊಂದಿಗೆ ಸಾವಿರಾರು ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ. ಐಎಎಫ್ ಸುಖೋಯ್ -30 ಎಂಕೆಐಗಳು ಮತ್ತು ಮಿಗ್ -29 ಗಳು ನಿಯಮಿತವಾಗಿ ಆಕಾಶದಲ್ಲಿ ಗಸ್ತು ತಿರುಗುತ್ತಿದ್ದು, ಗಡಿ ಪ್ರದೇಶದ ಪರಿಸ್ಥಿತಿಯನ್ನು ಗಮನಿಸುತ್ತಿದೆ.
ಭಾರತ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಕಣಿವೆ ಪ್ರದೇಶದಲ್ಲಿ ಜಮಾವಣೆ ಮಾಡುವ ಮೂಲಕ ಉತ್ತಮವಾಗಿ ಸಜ್ಜಾಗಿದ್ದೆ ಎಂದು ಮೂಲಗಳು ತಿಳಿಸಿದೆ.
ಜೂನ್ 15 ರಂದು ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಚೀನಾ ಭಾರತೀಯ ಸೈನ್ಯದ ಮೇಲೆ ಆಕ್ರಮಣ ಮಾಡಿ 20 ಯೋಧರನ್ನು ಹತ್ಯೆ ಮಾಡಿತ್ತು.








